ಕ್ರಿಸ್ಮಸ್ ಹಾಗೂ ಹೊಸವರ್ಷಾಚರಣೆಗೆ ಯಾವುದೇ ನಿರ್ಬಂಧವಿಲ್ಲ ; ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್
ಬೆಂಗಳೂರು, ಡಿ.20: ಹೊಸ ವರ್ಷ (New Year) ಹೊಸ್ತಿಲಲ್ಲಿರುವಾಗಲೇ ಮಹಾಮಾರಿ ಕೊರೊನಾ (Coronavirus) ಈಗ ಮತ್ತೆ ತನ್ನ ಆರ್ಭಟ ಶುರು ಮಾಡಿದೆ. ಜಾಗತಿಕವಾಗಿ ಕೊರೊನಾ ಮತ್ತೆ ಅಬ್ಬರಿಸಲು ಕಾಯುತಿದ್ದು, ನೆರೆರಾಜ್ಯ ಕೇರಳದಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಅಲರ್ಟ್ ಆಗಿರುವ ರಾಜ್ಯ ಆರೋಗ್ಯ ಇಲಾಖೆ (Karnataka Health Department) ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು ಮೇಲಿಂದ ಮೇಲೆ ಸಭೆಗಳನ್ನು ಮಾಡುತ್ತಿದೆ. ಇನ್ನು ಮತ್ತೊಂದೆಡೆ ಹೊಸ ವರ್ಷಾಚರಣೆ ಹಿನ್ನೆಲೆ ಜನರಲ್ಲಿ ಆತಂಕ ಹೆಚ್ಚಾಗಿದ್ದು ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಪ್ರತ್ಯೇಕ ಗೈಡ್ಲೈನ್ಸ್ ಇರಲ್ಲ ಎಂದು BBMP ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ನಗರದಲ್ಲಿ ಕೊರೊನಾ ಆತಂಕ ಹಿನ್ನೆಲೆ ಹೊಸ ವರ್ಷಾಚರಣೆಗೆ ಬ್ರೇಕ್ ಬೀಳುವ ಸಾಧ್ಯತೆ ಇತ್ತು. ಆದರೆ ಈ ಬಗ್ಗೆ ಮಾತನಾಡಿದ BBMP ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊವಿಡ್ ಪ್ರಕರಣ ಹೆಚ್ಚಳವಾಗಿಲ್ಲ. ಹೀಗಾಗಿ ಹೊಸ ವರ್ಷಾಚರಣೆಗೆ ಯಾವುದೇ ನಿರ್ಬಂಧ ಇರುವುದಿಲ್ಲ. ಪಾಲಿಕೆ ವ್ಯಾಪ್ತಿಯಲ್ಲಿ SARI, ILI ಕೇಸ್ಗಳ ಮೇಲೆ ಬಿಬಿಎಂಪಿ ನಿಗಾವಹಿಸುತ್ತಿದೆ ಎಂದು ತಿಳಿಸಿದ್ದಾರೆ. ಬಿಬಿಎಂಪಿ PHC, ನಮ್ಮ ಕ್ಲಿನಿಕ್ ಕೋವಿಡ್ ಸಿದ್ಧತೆಗಳ ಬಗ್ಗೆ ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ಕೇಳಿದೆ. ಪಾಲಿಕೆ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸಿದ್ಧತೆ ಮಾಡಿಕೊಳ್ಳಲು ಸೂಚನೆ ನೀಡಿದೆ. ಪಾಲಿಕೆ ವ್ಯಾಪ್ತಿಯಲ್ಲಿ SARI, ILI ಕೇಸ್ ಮೇಲೆ ನಿಗಾ ಇಡಲು ಬಿಬಿಎಂಪಿ ಮುಂದಾಗಿದೆ. ಕೋವಿಡ್ ಸಂಬಂಧ ಆರೋಗ್ಯಾಧಿಕಾರಿಗಳ ಸಭೆ ನಡೆಸಲು ಸೂಚನೆ ಕೊಟ್ಟಿದೆ. ನ್ಯೂ ಇಯರ್ ಗೆ ಯಾವುದೇ ಪ್ರತ್ಯೇಕ ಗೈಡ್ ಲೈನ್ಸ್ ಇರುವುದಿಲ್ಲ ಎಂದು ತಿಳಿಸಿದರು.
ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ಹದ್ದಿನ ಕಣ್ಣಿಟ್ಟ ಆರೋಗ್ಯ ಇಲಾಖೆ
ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ಹದ್ದಿನ ಕಣ್ಣಿಟ್ಟ ಆರೋಗ್ಯ ಇಲಾಖೆ. ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕೊವಿಡ್ ಪಾಸಿಟಿವ್ ಬಂದ್ರೆ RTPCR ಪಾಸಿಟಿವ್ ಬಂದ್ರೆ ಜೆನೆಮಿಕ್ ಸೀಕ್ವೆನ್ಸ್ ಗೆ ಸ್ಯಾಂಪಲ್ ಕಳಿಸಲು ಮುಂದಾಗಿದೆ. ರಾಜ್ಯಕ್ಕೆ ಬರುವ ಪ್ರಯಾಣಿಕರ ಮೇಲೆ ನಿಗಾವಹಿಸಲು ಇಲಾಖೆ ಮುಂದಾಗಿದ್ದು ಅಂತಾರಾಷ್ಟ್ರೀಯ ಪ್ರಯಾಣಿಕರ ಸಿಟಿ ವ್ಯಾಲ್ಯೂ ಹೆಚ್ಚಿದ್ರು ಜೆನೆಮಿಕ್ ಸೀಕ್ವೆನ್ಸ್ ಗೆ ಕಳಿಸಲು ಸೂಚನೆ ನೀಡಿದೆ. ಇನ್ನು ರಾಜ್ಯದಲ್ಲಿ ಕೊವಿಡ್ ಟೆಸ್ಟಿಂಗ್ ಏರಿಕೆಗೆ ಆರೋಗ್ಯ ಇಲಾಖೆ ಮುಂದಾಗಿದ್ದು ನಾಳೆಯಿಂದ ಕೊವಿಡ್ ಟೆಸ್ಟಿಂಗ್ ಏರಿಕೆ ಮಾಡ್ತೀದೆ. ಬೆಂಗಳೂರಿಗೆ ಹಾಗೂ ರಾಜ್ಯಕ್ಕೆ ಪ್ರತ್ಯೇಕ ಕೊವಿಡ್ ಟೆಸ್ಟಿಂಗ್ ಟಾರ್ಗೇಟ್ ನಿರ್ಧಾರಕ್ಕೆ ಮುಂದಾಗಿದ್ದು ಆರಂಭದಲ್ಲಿ 500 ರಿಂದ 1000 ಕೊವಿಡ್ ಟೆಸ್ಟಿಂಗ್ ಮಾಡಲಾಗುತ್ತೆ. ಒಂದು ವಾರದ ಬಳಿಕ 5000 ಕೊವಿಡ್ ಟೆಸ್ಟಿಂಗ್ ಮಾಡಲು ಮುಂದಾಗಿದೆ.
ಬಿಜೆಪಿ ಮುಖಂಡ ತಮ್ಮೇಶ್ ಗೌಡ ವಿರುದ್ಧ ಕಳ್ಳತನ ಜೊತೆಗೆ ಬೆದರಿಕೆ, ಧಮ್ಕಿ ಹಾಕಿದ ಆರೋಪ; ದೂರು ದಾಖಲು
ಬೆಂಗಳೂರು, ಡಿ.20: ಬಿಜೆಪಿ ಮುಖಂಡ, ಬೆಂಗಳೂರಿನ ಬ್ಯಾಟರಾಯನಪುರ ಪರಾಜಿತ ಅಭ್ಯರ್ಥಿಯಾಗಿರುವ ತಮ್ಮೇಶ್ ಗೌಡ (Thammesh Gowda) ವಿರುದ್ಧ ಕಳ್ಳತನ ಜೊತೆಗೆ ಬೆದರಿಕೆ, ಧಮ್ಕಿ ಹಾಕಿದ ಆರೋಪ ಕೇಳಿ ಬಂದಿದೆ. ತಮ್ಮೇಶ್ ವಿರುದ್ಧ ಈ ಹಿಂದೆ ಕಳ್ಳತನ ಆರೋಪ ಕೇಳಿ ಬಂದಿತ್ತು. ಇದೀಗ ಬೆದರಿಕೆ, ಧಮ್ಕಿ ಹಾಕಿದ ಆರೋಪ ಕೇಳಿ ಬಂದಿದೆ. ಗುತ್ತಿಗೆದಾರ ದಯಾನಂದ್ ಕುಮಾರ್ ಎಂಬುವವರು ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ (Amruthahalli Police Station) ತಮ್ಮೇಶ್ ವಿರುದ್ಧ ದೂರು ದಾಖಲಿಸಿದ್ದಾರೆ. ಸೈಟ್ ವಿಚಾರವಾಗಿ ಫೋನ್ ಮೂಲಕ ಬೆದರಿಕೆ ಹಾಕಿದ್ದಾರೆಂದು ದೂರು ನೀಡಿದ್ದಾರೆ.
ಅಮೃತಹಳ್ಳಿಯ ದಾಸರಹಳ್ಳಿಯಲ್ಲಿ ಅಶ್ವಿನ್ ಎಂಬುವವರ ಸೈಟ್ ಇದೆ. ಆ ಸೈಟ್ ಸುತ್ತಾಮುತ್ತ ಕಾಂಪೌಂಡ್ ನಿರ್ಮಿಸಲು ದಯಾನಂದ್ಗೆ ಅಶ್ವಿನ್ ಕಾಂಟ್ರಾಕ್ಟ್ ನೀಡಿದ್ದರು. ಡಿಸೆಂಬರ್ 18 ರಂದು 12 ಗಂಟಗೆ ಸೈಟ್ ಬಳಿಗೆ ಸತೀಶ್, ಚಂದ್ರಪ್ಪ ಮತ್ತು ಸಹಚರರು ಆಗಮಿಸಿ ಇದು ನಮಗೆ ಸೇರಿದ ಸೈಟ್ ಕಾಂಪೌಂಡ್ ಹಾಕಬೇಡಿ ಎಂದು ಬೆದರಿಕೆ ಹಾಕಿದ್ದಾರೆ ಎಂದು ದೂರುದಾರರು ಆರೋಪ ಮಾಡಿದ್ದಾರೆ. ಇನ್ನು ಬೆದರಿಕೆ ಹಾಕುತ್ತಿದ್ದಂತೆ ಮುಂದೆ ಬಂದ ದಯಾನಂದ್ ಅವರು ಈ ಬಗ್ಗೆ ನನಗೆ ಏನೂ ಗೊತ್ತಿಲ್ಲ. ನೀವು ಮಾಲೀಕ ಅಶ್ವಿನ್ ಜೊತೆಗೆ ಮಾತನಾಡಿಕೊಳ್ಳಿ ಎಂದು ಹೇಳಿದ್ದಾರೆ. ಆಗ ಸತೀಶ್ ಎಂಬಾತ ಪರಾಜಿತ ಅಭ್ಯರ್ಥಿ ತಮ್ಮೇಶ್ ಗೌಡ ಮನೆಗೆ ಆಗಮಿಸುವಂತೆ ಹೇಳಿದ್ದಾನೆ. ಆದರೆ ದಯನಂದ್ ಅವರು ಮನೆಗೆ ಹೋಗಿ ಮಾತುಕತೆ ಮಾಡುವುದನ್ನು ನಿರಾಕರಿಸಿದ್ರು. ಈ ವೇಳೆ ದಯಾನಂದ್ ಗೆ ತಮ್ಮೇಶ್ ಗೌಡ ಕರೆ ಮಾಡಿ ಕಾಂಪೌಂಡ್ ಕೆಲಸವನ್ನು ನಿಲ್ಲಿಸಿ ವಾಪಸ್ಸು ಹೋಗುವಂತೆ ಬೆದರಿಕೆ ಹಾಕಿದ್ದಾರೆ. ಎಚ್ಚರಿಕೆ ನಂತರವೂ ಕಾಂಪೌಂಡ್ ನಿರ್ಮಿಸಿದರೆ ಆ ಕಾಂಪೌಂಡನ್ನೇ ಕೆಡವುದಾಗಿ ಎಚ್ಚರಿಕೆ ನೀಡಿದ್ದಾರೆ. ಸದ್ಯ ಈ ಘಟನೆ ಸಂಬಂಧ ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೆಡ್ಹ್ಯಾಂಡ್ ಆಗಿ ಲಾಕ್ ಆದ ಅಧಿಕಾರಿಗಳು
ಎಇಇ ಬಿ.ಮಂಜುನಾಥ, ಜೆಇ ಪ್ರಕಾಶ್ ಹೊಸಮನಿ ಮೊದಲು ಫೋನ್ಪೇ ಮೂಲಕ 83 ಸಾವಿರ ರೂಪಾಯಿ ಲಂಚ ಪಡೆದಿದ್ದಾರೆ. ನಂತ್ರ 2ನೇ ಬಿಲ್ಗೆ 50 ಸಾವಿರ ರೂಪಾಯಿ ಮತ್ತು ಫೈನಲ್ ಬಿಲ್ಗೆ 1ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ರು. ಗುತ್ತಿಗೆದಾರ ಬಾಲಕೃಷ್ಣ ನಾಯ್ಕರಿಂದ ನಿನ್ನೆ ಎಇಇ, ಜೆಇ ತಲಾ 50 ಸಾವಿರ ರೂಪಾಯಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ದಾಳಿ ನಡೆಸಿತ್ತು. ಲೋಕಾಯುಕ್ತ DySP ಬಿ.ಪಿ.ಚಂದ್ರಶೇಖರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಲಾಯ್ತು.