ಸೋಮವಾರ, ಡಿಸೆಂಬರ್ 23, 2024
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಅಂಗಡಿಯಲ್ಲಿ ಖರೀದಿಸಿ ಎನರ್ಜಿ ಡ್ರಿಂಕ್‌ ಸೇವಿಸಿದ ಕೂಡಲೇ ಯುವಕ ಸ್ಥಳದಲ್ಲೇ ಅಸ್ವಸ್ಥ...!

Twitter
Facebook
LinkedIn
WhatsApp
ಅಂಗಡಿಯಲ್ಲಿ ಖರೀದಿಸಿ ಎನರ್ಜಿ ಡ್ರಿಂಕ್‌ ಸೇವಿಸಿದ ಕೂಡಲೇ ಯುವಕ ಸ್ಥಳದಲ್ಲೇ ಅಸ್ವಸ್ಥ...!

 ಅಂಗಡಿಯಲ್ಲಿ ಎನರ್ಜಿ ಡ್ರಿಕ್‌ ಖರೀದಿಸಿ ಅಲ್ಲೇ ಅದನ್ನು ಕುಡಿದ ಯುವಕ ಅಲ್ಲೇ ಅಸ್ವಸ್ಥನಾಗಿದ್ದಾನೆ. ರೆಡ್‌ ಬುಲ್‌ ಟಿನ್‌ನ ಒಳಗೆ ಲೋಳೆಯಂಥ ವಸ್ತು ಪತ್ತೆಯಾಗಿದೆ. ಮಡಿಕೇರಿಯಲ್ಲಿ ಈ ಘಟನೆ ನಡೆದಿದೆ.

ಮಡಿಕೇರಿ: ಜನಪ್ರಿಯ ಪೇಯ ರೆಡ್ ಬುಲ್ ಎನರ್ಜಿ ಡ್ರಿಂಕ್ (Redbull Energy Drink) ಸೇವಿಸಿದ ಕೂಡಲೇ ಯುವಕನೊಬ್ಬ ಅಸ್ವಸ್ಥನಾಗಿ ಆಸ್ಪತ್ರೆ ಸೇರಿ (Young Man Hospitalized) ಚಿಕಿತ್ಸೆ ಪಡೆಯುತ್ತಿರುವ ಘಟನೆ ಕೊಡಗು ಜಿಲ್ಲೆ (Kodagu News) ಮಡಿಕೇರಿಯಲ್ಲಿ ನಡೆದಿದೆ.

ಮಡಿಕೇರಿಯ ಜೋತಿ ನಗರದ ನಿವಾಸಿ ವಿನೋದ್ ಎಂಬವರು ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದ ಸಮೀಪ ಇರುವ ಅಂಗಡಿಯಲ್ಲಿ ರೆಡ್ ಬುಲ್ ಎನರ್ಜಿ ಡ್ರಿಂಕ್ ತೆಗೆದುಕೊಂಡು ಕುಡಿದಿದ್ದಾರೆ. ಎನರ್ಜಿ ಡ್ರಿಂಕ್ ಟಿನ್ ಓಪನ್ ಮಾಡುತ್ತಿದಂತೆ ಕೆಟ್ಟ ವಾಸನೆ ಬಂದಿದೆಯಂತೆ. ಆದರೂ ಅವರು ಇದು ಇದೇ ರೀತಿ ಇರುತ್ತದೆಯೇನೋ ಅಂದುಕೊಂಡು ಕುಡಿದಿದ್ದಾರೆ.

ಕುಡಿಯುವ ಸಂದರ್ಭದಲ್ಲಿ ಅದರ ಒಳಗೆ ಲೋಳೆಯಂಥ ವಸ್ತು ಪತ್ತೆಯಾಗಿದೆ. ಪಾನೀಯ ಹೊಟ್ಟೆ ಸೇರುತ್ತಿದ್ದಂತೆಯೇ ವಿನೋದ್‌ಗೆ ಹೊಟ್ಟೆ ನೋವು ಹಾಗೂ ವಾಂತಿ ಕಾಣಿಸಿಕೊಂಡಿದೆ. ಕೂಡಲೇ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ.

ರೆಡ್‌ ಬುಲ್‌ ಕ್ಯಾನ್ ಪರಿಶೀಲಿಸಿದಾಗ ಇದರ ಎಕ್ಸ್‌ ಪೈಯರಿ ಡೇಟ್ ಇನ್ನೂ ಕೂಡಾ ಮುಗಿಯದಿರುವುದು ಕಂಡು ಬಂದಿದೆ. ಆದರೆ ಕ್ಯಾನ್‌ ಒಳಗೆ ಮಾತ್ರ ಪಂಗಸ್ ರೀತಿಯ ಲೋಳೆಯಂಥ ಗಟ್ಟಿವಸ್ತು ಪತ್ತೆಯಾಗಿದೆ.

ಈ ಸಂಬಂದ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕಣ ದಾಖಲಾಗಿದ್ದು. ಅಂಗಡಿಯಿಂದ ಖರೀದಿಸಿದ ಎನರ್ಜಿ ಡಿಂಕ್ ನ ಮಾದರಿಯನ್ನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಪ್ರಯೋಗಾಲಯದ ವರದಿ ಬಂದ ನಂತರವೆ ಪ್ರಕಣದ ನೈಜಾಂಶ ಬೆಳಕಿಗೆ ಬರಲಿದೆ. ಸದ್ಯ ವಿನೋದ್‌ಗೆ ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist