ಮರದ ಮೇಲಿದ್ದ ಬೆಕ್ಕನ್ನು ರಕ್ಷಿಸಲು ಹೋಗಿ ಜೀವ ಕಳೆದುಕೊಂಡ ಯುವಕ
ಬೆಂಗಳೂರು: ಬೆಕ್ಕನ್ನ ರಕ್ಷಿಸಲು ಹೋಗಿ ಯುವಕ ಜೀವ ಕಳೆದುಕೊಂಡಿದ್ದಾನೆ. ಈ ಘಟನೆ ದೊಡ್ಡಬಳ್ಳಾಪುರ ನಗರದ ಹಾಲಿನ ಡೈರಿ ಬಳಿ ನಡೆದಿದೆ.
ರೋಷನ್ ( 25 ) ಮೃತ ದುರ್ದೈವಿ. ದೊಡ್ಡಬಳ್ಳಾಪುರ ನಿವಾಸಿಯಾಗಿದ್ದಾನೆ. ಡೈರಿ ಮುಂಬಾಗ ಕಾರ್ ಗ್ಯಾರೇಜ್ನಲ್ಲಿ ಕೆಲಸ ಮಾಡುತ್ತಿದ್ದ ಯುವಕ. ಮರದಲ್ಲಿ ಸಿಲುಕಿದ್ದ ಬೆಕ್ಕು ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡಿದ್ದಾನೆ.
ಬೆಕ್ಕು ಮರದಲ್ಲಿ ಸಿಲುಕಿ ಪರದಾಡುತ್ತಿರುವುದನ್ನು ಕಂಡ ರೋಷನ್ ರಕ್ಷಣೆಗೆ ಮುಂದಾಗಿದ್ದಾನೆ. ಮರದಲ್ಲಿ ಸಿಲುಕಿದ್ದ ಬೆಕ್ಕು ರಕ್ಷಿಸಲು ಮರ ಹತ್ತಿದ್ದಾನೆ. ಈ ವೇಳೆ ಮರದ ಮೇಲೆ ಹಾದು ಹೋಗಿದ್ದ ಲೈನ್ನಿಂದ ವಿದ್ಯುತ್ ಪ್ರವಹಿಸಿದೆ. ಈ ವೇಳೆ ವಿದ್ಯುತ್ ಶಾಕ್ನಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ದೊಡ್ಡಬಳ್ಳಾಪುರ ನಗರದ ಹಾಲಿನ ಡೈರಿ ಬಳಿ ಘಟನೆ ನಡೆದಿದೆ.
ಸ್ಥಳಕ್ಕೆ ಬೆಸ್ಕಾಂ ಸಿಬ್ಬಂದಿ ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸಾಲ ಬಾಧೆಯಿಂದ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ
ರಾಣೆಬೆನ್ನೂರ: ಸಾಲಬಾಧೆಯಿಂದ ಬೇಸತ್ತ ರೈತನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕುಸಗೂರ ಗ್ರಾಮದಲ್ಲಿ ಶುಕ್ರವಾರ ಸಂಭವಿಸಿದೆ.
ಸಂಗನಗೌಡ ರಾಮನಗೌಡ ಕರೇಗೌಡ್ರ (60) ಮೃತ ರೈತ.
ಇವರು 5.7 ಎಕರೆ ಜಮೀನು ಹೊಂದಿದ್ದು ಕೃಷಿಗಾಗಿ ಬ್ಯಾಂಕ್‌ನಲ್ಲಿ 4.50 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಅದು ಬಡ್ಡಿ ಸೇರಿ ಇದೀಗ 8.50 ಲಕ್ಷ ರೂ. ಆಗಿದೆ. ಪ್ರಕೃತಿ ವಿಕೋಪದಿಂದಾಗಿ ರೈತ ಬೆಳೆದಿದ್ದ ಬೆಳ್ಳುಳ್ಳಿ ಹಾಗೂ ಮೆಕ್ಕೆಜೋಳ ಫಸಲು ಕೈಕೊಟ್ಟಿತ್ತು. ಹೀಗಾಗಿ ಸಾಲ ತೀರಿಸುವ ಚಿಂತೆಯಿಂದ ಮನೆಯಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಈ ಕುರಿತು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.