ಭಾನುವಾರ, ಸೆಪ್ಟೆಂಬರ್ 15, 2024
20 ವರ್ಷಗಳ ಬಳಿಕ ಹುಕ್ಕೇರಿ ಪುರಸಭೆ ಕಾಂಗ್ರೆಸ್ ತೆಕ್ಕೆಗೆ-ಪ್ರಜ್ವಲ್‌ ರೇವಣ್ಣಗೆ ಶಾಕ್; ಜಾಮೀನು ಅರ್ಜಿ ವಜಾ!-ಸೋನಿಯಾ, ರಾಹುಲ್ ಗಾಂಧಿ ವಿರುದ್ಧ ಸುಳ್ಳು ಸುದ್ದಿ; ಇಬ್ಬರ ವಿರುದ್ಧ ಕೇಸ್ ದಾಖಲು-ಕೋವಿಡ್ ಹಗರಣ: ಸಿಎಂ ಕೈ ಸೇರಿದ ವರದಿ; ಮಾಜಿ ಆರೋಗ್ಯ ಸಚಿವರಿಗೆ ತಟ್ಟುತ್ತಾ ಬಿಸಿ?-ರಾಜ್ಯದ ರೈತರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ; ಬೆಂಬಲ ಬೆಲೆ!-ರಾಜ್ಯದ ರೈತರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ; ಬೆಂಬಲ ಬೆಲೆ!-ರೇಪ್ ಹೇಗಾಗುತ್ತೆ ಎಂದು ಕಂಗನಾಗೆ (Kangana Ranaut) ಕೇಳಿ; ಮಾಜಿ ಸಂಸದನ ವಿವಾದಿತ ಹೇಳಿಕೆ!-Chikkaballapur: ಟಿಟಿ - ಕಾರಿನ ಮಧ್ಯೆ ಭೀಕರ ಅಪಘಾತ; ಮೂವರ ದುರ್ಮರಣ-ಐವನ್ ಡಿಸೋಜಾ ಮನೆ ಮೇಲೆ ಕಲ್ಲುತೂರಾಟ: ಬಂಟ್ವಾಳ ಮೂಲದ ಇಬ್ಬರ ಬಂಧನ-Sarah Rahanuma: ಟಿವಿ ಪತ್ರಕರ್ತೆಯ ಶವ ಢಾಕಾ ಸರೋವರದಲ್ಲಿ ಪತ್ತೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಓದು ಎಂದು ತಾಯಿ ಹೇಳಿದಕ್ಕೆ ಮನನೊಂದು ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಪುತ್ರ!

Twitter
Facebook
LinkedIn
WhatsApp
ಓದು ಎಂದು ತಾಯಿ ಹೇಳಿದಕ್ಕೆ ಮನನೊಂದು ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಪುತ್ರ!

ಬೆಳಗಾವಿ: ಓದಿಕೋ ಎಂದು ತಾಯಿ (Mother) ಬುದ್ಧಿ ಹೇಳಿದಕ್ಕೆ ಮನನೊಂದು ಪುತ್ರ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ (Belagavi) ಜಿಲ್ಲೆಯ ಮೂಡಲಗಿ ಪಟ್ಟಣದ ದೇಶಪಾಂಡೆ ಫ್ಲ್ಯಾಟ್‌ನಲ್ಲಿ ನಡೆದಿದೆ.

ಸಮರ್ಥ ಸುರೇಶ ಭಜಂತ್ರಿ (14) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ (Suicide) ಶರಣಾದ ಬಾಲಕ. ದೀಪಾವಳಿ ರಜೆ (Deepavali) ಇದೆ ಅಂತ ತಿರುಗಬೇಡ, ಓದಿಕೋ ಎಂದು ತಾಯಿ ಬುದ್ಧಿ ಹೇಳಿದ್ದರು.  

ತಾಯಿಯ ಈ ಮಾತಿಗೆ ಮನನೊಂದು ತಮ್ಮ ಮನೆಯ ಬೆಡ್‌ರೂಂನಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ಬಾಲಕ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಸಮರ್ಥ ಮೂಡಲಗಿ ಪಟ್ಟಣದ ಖಾಸಗಿ ಶಾಲೆಯಲ್ಲಿ 8 ನೇ ತರಗತಿ ಓದುತ್ತಿದ್ದ. ಈ ಸಂಬಂಧ ಬೆಳಗಾವಿ ಜಿಲ್ಲೆಯ ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಟ್ಟಿಯಲ್ಲಿ ಮಹಿಳಾ ಲ್ಯಾಬ್ ಟೆಕ್ನಿಶಿಯನ್ ಸುಟ್ಟ ಸ್ಥಿತಿಯಲ್ಲಿ ಸಾವನ್ನಪ್ಪಿದ್ದ ಪ್ರಕರಣ: ಇಬ್ಬರ ಬಂಧನ, ಅನೈತಿಕ ಸಂಬಂಧ ಹತ್ಯೆಗೆ ಕಾರಣ

ರಾಯಚೂರು, ನವೆಂಬರ್​ 14: ಹಟ್ಟಿ ಪಟ್ಟಣದ (raichur, hutti) ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳಾ ಲ್ಯಾಬ್ ಟೆಕ್ನಿಶಿಯನ್ ಸುಟ್ಟ ಸ್ಥಿತಿಯಲ್ಲಿ ಸಾವನ್ನಪ್ಪಿದ್ದ (woman Lab technician murder) ಪ್ರಕರಣದಲ್ಲಿ ಅದು ಆತ್ಮಹತ್ಯೆಯಲ್ಲ; ಕೊಲೆ ಅನ್ನೋದನ್ನ ಹಟ್ಟಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಕೊಲೆ ನಡೆದ 20 ದಿನಗಳ ಬಳಿಕ ಹಟ್ಟಿ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಮೃತ ಮಹಿಳೆಯು ಮಗನ ವಯಸ್ಸಿನ ಯುವಕನ ಜೊತೆಅನೈತಿಕ ಸಂಬಂಧ (illicit affair) ಹೊಂದಿದ್ದಳು. ಮಾಟ-ಮಂತ್ರ ಪರಿಹಾರದ ಪೂಜೆ ಅಂತ ಪುಸಲಾಯಿಸಿ, ನಡುರಾತ್ರಿ ಆ ಮಹಿಳೆಯನ್ನು ಕರೆಸಿಕೊಂಡು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ಹಟ್ಟಿ ಪಟ್ಟಣದಲ್ಲಿ ಘಟನೆ ನಡೆದಿತ್ತು. ಸಮೀರ್ ಸೊಹೈಲ್(23) ಹಾಗೂ ಮೊಹಮ್ಮದ್ ಕೈಫ್(23)ಬಂಧಿತರು.

ಕಳೆದ ನವೆಂಬರ್ 26 ರಂದು ಮಂಜುಳಾ ಅನ್ನೋ ಲ್ಯಾಬ್ ಟೆಕ್ನಿಶಿಯನ್ ಭೀಕರ ಕೊಲೆಯಾಗಿತ್ತು. ಮೃತ ಮಂಜುಳಾ ಮಂಡಿ ನೋವು ಸೇರಿ ಇತರೆ ಖಾಯಿಲೆಗಳಿಂದ ಬಳಲುತ್ತಿದ್ದರು. ಈ ಹಿಂದೆ ಆಕೆ ಮನೆಯಲ್ಲಿದ್ದ ಚಿನ್ನಾಭರಣ, ನಗದು ಕಳುವಾಗಿತ್ತು. ಹೀಗಾಗಿ ಯಾರೋ ಮಾಟ-ಮಂತ್ರ ಮಾಡಿಸಿರೊ ಬಗ್ಗೆ ಆಕೆಗೆ ಅನುಮಾನವಿತ್ತು.

ಈ ಬಗ್ಗೆ ಘಟನೆ ನಡೆದ ದಿನ ಹಂತಕರು ನಡುರಾತ್ರಿ ಪೂಜೆ ಮಾಡೋಣ ಅಂತ ಕರೆಸಿಕೊಂಡಿದ್ದಾರೆ. ಹಣ, ಚಿನ್ನಾಭರಣಗಳಿಗೆ ಅರಿಶಿನ, ಕುಂಕುಮ ಸಿಂಪಡಿಸಿ ಪೂಜೆ ನೆಪದಲ್ಲಿ ಕೊಲೆ ಮಾಡಿಬಿಟ್ಟಿದ್ದಾರೆ. ಒಬ್ಬ ಹಂತಕ ಆರೋಪಿ ಸಮೀರ್ ಕೊಲೆ ಬಳಿಕ ಆಕೆಯನ್ನು ಆಕೆಯ ಮನೆಯ ಬಳಿಯೇ ಸುಟ್ಟು ಹಾಕಿದ್ದ. ಬಳಿಕ ಆಕೆಯ ಬಳಿಯಿದ್ದ 10 ಲಕ್ಷ ಹಣ ಹಾಗೂ ಚಿನ್ನಾಭರಣ ಪಡೆದು ಸ್ನೇಹಿತ ಮೊಹಮ್ಮದ್ ಕೈಫ್ ಜೊತೆ ಆತನ ಕಾರ್ ನಲ್ಲಿ ಎಸ್ಕೇಪ್ ಆಗಿದ್ದ.

ಇಬ್ಬರೂ ಆರೋಪಿಗಳಿಂದ 7,49 ನಗದು, 9.7 ಲಕ್ಷ ಮೌಲ್ಯದ 163 ಗ್ರಾಂ ಚಿನ್ನಾಭರಣ ಸೇರಿದಂತೆ ಕಾರು, ಬೈಕ್ ಸೇರಿ ಒಟ್ಟು 22 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ತನಿಖೆ ವೇಳೆ ಬೆಚ್ಚಿ ಬೀಳಿಸೊ ಸತ್ಯ ಬಾಯ್ಬಿಟ್ಟ ಹಂತಕ ಸಮೀರ್ ಸೋಹೈಲ್, ಮೃತ ಮಂಜುಳಾ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಗಿ ಹೇಳಿದ್ದಾನೆ. ಹಟ್ಟಿ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ