ಹೆಂಡತಿಯನ್ನು ಜೊತೆಗೆ ಕಳಿಸ್ತಿಲ್ಲ ಎಂದು ಕೋಪಗೊಂಡು ಮಗಳನ್ನು ಕೊಟ್ಟ ಮಾವನನ್ನೇ ಹತ್ಯೆಗೈದ ಅಳಿಯ

ಹಾಸನ, ಜ.26: ಹೆಂಡತಿಯನ್ನು ತನ್ನೊಟ್ಟಿಗೆ ಕಳಿಸ್ತಿಲ್ಲ ಎಂದು ಕೋಪಗೊಂಡ ಅಳಿಯ, ಮಗಳನ್ನು ಕೊಟ್ಟ ಮಾವನನ್ನೇ ಹತ್ಯೆಗೈದ ಘಟನೆ ಹಾಸನದಲ್ಲಿ (Hassan) ನಡೆದಿದೆ. ಕುಡಿದ ಮತ್ತಿನಲ್ಲಿ ಮಾವನ ಮೇಲೆ ಹಲ್ಲೆ (Assault) ಮಾಡಿ ಕೊಲೆ ಮಾಡಿದ್ದಾನೆ. ಬೇಲೂರು (Belur) ತಾಲೂಕಿನ ರಾಮೇನಹಳ್ಳಿಯ ತಮ್ಮಯ್ಯ (64) ಮೃತ ವ್ಯಕ್ತಿ. ಬಲ್ಲೇನಹಳ್ಳಿ ಗ್ರಾಮದ ಅಳಿಯ ಜಗದೀಶ್ (45) ವಿರುದ್ಧ ಕೊಲೆ ಆರೋಪ ಕೇಳಿ ಬಂದಿದೆ.
20 ವರ್ಷಗಳ ಹಿಂದೆ ತಮ್ಮಯ್ಯ ಪುತ್ರಿಯನ್ನು ಜಗದೀಶ್ ಮದುವೆಯಾಗಿದ್ದ. ತಮ್ಮಯ್ಯಗೆ ಗಂಡು ಮಕ್ಕಳಿಲ್ಲದ ಕಾರಣ ತನ್ನನ್ನು ನೋಡಿಕೊಳ್ಳಲೆಂದು ಮಗಳನ್ನು ಮನೆಯಲ್ಲೇ ಇರಿಸಿಕೊಂಡಿದ್ದ. ಮತ್ತೊಂದೆಡೆ ಪತಿ ಜಗದೀಶ್, ತನಗೆ ಮನೆಯ ಜವಾಬ್ದಾರಿ ನೀಡುತ್ತಿಲ್ಲ ಎಂದು ಪತ್ನಿಯನ್ನ ತನ್ನ ಮನೆಗೆ ವಾಪಸ್ ಕಳಿಸುವಂತೆ ಪದೇ ಪದೆ ಜಗಳ ಮಾಡುತ್ತಿದ್ದ.
ನಿನ್ನೆ ಮನೆ ಬಳಿಯೇ ಬಂದು ಮಾವನ ಮೇಲೆ ಹಲ್ಲೆ ಮಾಡಿದ್ದಾನೆ. ಈ ವೇಳೆ ಹಲ್ಲೆಯಿಂದ ಅಸ್ವಸ್ಥಗೊಂಡಿದ್ದ ತಮ್ಮಯ್ಯನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವು ಸಂಭವಿಸಿದೆ. ಸಾರ್ವಜನಿಕರು ಜಗದೀಶ್‌ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಕುಡಿತದ ದಾಸನಾಗಿದ್ದ ಆರೋಪಿ ಪೊಲೀಸರ ವಶದಲ್ಲಿದ್ದಾನೆ. ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹೊತ್ತಿ ಉರಿದ ಕಾರು; ಪ್ರಾಣಾಪಾಯದಿಂದ ಪಾರು
ಹೆದ್ದಾರಿಯಲ್ಲೇ ಕಾರೊಂದು ಹೊತ್ತಿ ಉರಿದಿದೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಎನ್.ವಡ್ಡಹಳ್ಳಿಯಲ್ಲಿ ಘಟನೆ ನಡೆದಿದ್ದು, ಕಾರ್ನಲ್ಲಿದ್ದ ಒಂದು ಮಗು ಸೇರಿ ಐವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೆಂಗಳೂರಿನ ಮಹೇಶ್ ಎಂಬುವರಿಗೆ ಸೇರಿದ ಕಾರು, ತಾಂತ್ರಿಕ ದೋಷದಿಂದ ಹೊತ್ತಿ ಉರಿದಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ನಂಗಲಿ ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ರು. ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.