ಸೋಮವಾರ, ಮೇ 20, 2024
ಬಿಜೆಪಿಯ ಗಟ್ಟಿ ವಲಯಗಳಲ್ಲಿ ಒಮ್ಮಿಂದೊಮ್ಮೆಲೆ ನರೇಂದ್ರ ಮೋದಿ ಜನಪ್ರಿಯತೆ ಕುಸಿದು ಹೋಯಿತೇ?-ಮ್ಯಾಕ್ಸ್ ವೆಲ್ ಗ್ರೇಟ್ ಕಮ್ ಬ್ಯಾಕ್ ;ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು-Rain Alert: ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಮುನ್ಸೂಚನೆ.!-ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ವಾರೆಂಟ್‌ ಹೊರಡಿಸಿದ ಬೆಂಗಳೂರು ನ್ಯಾಯಾಲಯ..!-ಇದು ಆರ್ಸಿಬಿಯ ಹೊಸ ಅಧ್ಯಾಯ; ರೋಚಕ ಪಂದ್ಯದಲ್ಲಿ ಸಿಎಸ್​​ಕೆ ಮಣಿಸಿ ಪ್ಲೇಆಫ್‌ಗೇರಿದ ಆರ್​ಸಿಬಿ..!-ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?-ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಬೆಂಗಳೂರಿನಲ್ಲಿ ನಡೆದ ಐತಿಹಾಸಿಕ ಕಂಬಳದ ಪಲಿತಾಂಶ ಪ್ರಕಟ ; ಇಲ್ಲಿದೆ ವಿವರ

Twitter
Facebook
LinkedIn
WhatsApp
ಬೆಂಗಳೂರಿನಲ್ಲಿ ನಡೆದ ಐತಿಹಾಸಿಕ ಕಂಬಳದ ಪಲಿತಾಂಶ ಪ್ರಕಟ ; ಇಲ್ಲಿದೆ ವಿವರ

ಬೆಂಗಳೂರಿನಲ್ಲಿ ನಡೆದ ಐತಿಹಾಸಿಕ ಕಂಬಳ  ಅದ್ಧೂರಿಯಾಗಿ ತೆರೆ ಕಂಡಿದ್ದು, ಲಕ್ಷಾಂತರ ಜನ ಕಣ್ತುಂಬಿಕೊಂಡಿದ್ದಾರೆ. 2ನೇ ದಿನವೂ ರಾತ್ರಿಯಿಡೀ ಕಂಬಳ ನಡೆದಿದ್ದು ಫೈನಲ್ ಸ್ಪರ್ಧೆ ಮೈನವಿರೇಳುವಂತೆ ಮಾಡಿತ್ತು. ಹಗ್ಗ ಕಿರಿಯ ವಿಭಾಗ, ಹಗ್ಗ ಹಿರಿಯ ವಿಭಾಗ, ಅಡ್ಡಹಲಗೆ ಕಂಬಳ, ಕನಹಲಗೆಯ ಕಂಬಳ ಹೀಗೆ ಹಲವು ವಿಭಾಗಗಳಲ್ಲಿ ಕೋಣಗಳಲ್ಲಿ ಸ್ಪರ್ಧಿಸಿ ಚಿನ್ನದ ಪದಕ ಗೆದ್ದಿವೆ. ಹಾಗಾದ್ರೆ, ಯಾವೆಲ್ಲಾ ವಿಭಾಗಗಳಲ್ಲಿ ಯಾರೆಲ್ಲಾ ಕೋಣಗಳು ಗೆದ್ದಿವೆ ಎನ್ನುವ ವಿವರ ಇಲ್ಲಿದೆ.

ಕನಹಲಗೆಯ ಕಂಬಳ ವಿಭಾಗ

ಕನಹಲಗೆಯ ಕಂಬಳ ವಿಭಾಗದಲ್ಲಿ ಬೋಳಂಬಳ್ಳಿ ಶ್ರೀರಾಮ ಚೈತ್ರ ಪರಮೇಶ್ವರ್ ಭಟ್ ಮಾಲೀಕತ್ವದ ಕೋಣಗಳು ವಿಜಯ ಸಾಧಿಸಿವೆ. 61/2 ಕೋಲು ನಿಶಾನೆಗೆ ನೀರು ಚಿಮ್ಮಿಸುವ ಮೂಲಕ ಗೆಲುವು ತಮ್ಮದಾಗಿಸಿಕೊಂಡಿವೆ.

ಹಗ್ಗ ಹಿರಿಯ ವಿಭಾಗ

ಇನ್ನು, ಹಗ್ಗ ಹಿರಿಯ ವಿಭಾಗದಲ್ಲಿ ನಂದಳಿಕೆ‌ ಶ್ರೀಕಾಂತ್ ಭಟ್ ಕೋಣಗಳು ಜಯದ ಕಿರೀಟ ಮುಡಿಗೆ ಏರಿಸಿಕೊಂಡಿವೆ. ಮೊದಲ ಪ್ರಶಸ್ತಿ 16 ಗ್ರಾಂ ಚಿನ್ನ, 1 ಲಕ್ಷ ನೀಡಲಾಗಿದೆ. ಇನ್ನು, ಮಾಳ‌ ಆನಂದ ನಿಲಯ ಶೇಖರ್ ಶೆಟ್ಟಿ ಮಾಲೀಕತ್ವದ ಕೋಣಗಳು 2ನೇ ಸ್ಥಾನ ಪಡೆದಿದ್ದು 8 ಗ್ರಾಂ ಚಿನ್ನ, 50 ಸಾವಿರ ನಗದು ಪ್ರಶಸ್ತಿ ನೀಡಲಾಗಿದೆ.

ಅಡ್ಡಹಲಗೆ ಕಂಬಳ

ಅಡ್ಡಹಲಗೆ ಕಂಬಳ ಫೈನಲ್ ಸ್ಪರ್ಧೆಯಂತು ರೋಚಕವಾಗಿತ್ತು. ಬೋಳಾರ ತ್ರಿಶಾಲ್ ಪೂಜಾರಿ ಮಾಲೀಕತ್ವದ ಕೋಣಗಳು, ಎಸ್​​ಎಂಎಸ್ ಬೆಂಗಳೂರು ಮಾಲೀಕತ್ವದ ಕೋಣಗಳು ಓಟದಲ್ಲಿ 09:59 ಸೆಕೆಂಡ್ ಓಡೋ ಮೂಲಕ ಸಮಬಲ ಸಾಧಿಸಿದ್ವು. ಎರಡನೇ ಸುತ್ತಲ್ಲಿ ಬೆಂಗಳೂರಿನ SMS ಮಾಲೀಕತ್ವದ ಕೋಣ ವೇಗವಾಗಿ ಕ್ರಮಿಸೋ ಮೂಲಕ ಗೆಲುವು ಸಾಧಿಸಿದೆ.

ಕಂಬಳದ ಹಗ್ಗ ಕಿರಿಯ ವಿಭಾಗ

ಕಂಬಳದ ಹಗ್ಗ ಕಿರಿಯ ವಿಭಾಗದಲ್ಲಿ ಸುರತ್ಕಲ್​​ನ ಪಾಂಚಜನ್ಯ ಯೋಗಿಶ್ ಮಾಲೀಕತ್ವದ ಕೋಣಗಳು ಗೆಲುವು ಸಾಧಿಸಿವೆ. ಕೋಣಗಳನ್ನ ಸ್ವರೂಪ್ ಅನ್ನೋರು ಓಡಿಸಿದ್ದು ಕೇವಲ 9.74 ಸೆಕೆಂಡ್ ಗಳಲ್ಲಿ 150 ಮೀಟರ್ ಕ್ರಮಿಸಿ ಜಯಭೇರಿ ಬಾರಿಸಿದ್ದಾರೆ.

ನೇಗಿಲು ಕಿರಿಯ ವಿಭಾಗ

ನೇಗಿಲು ಕಿರಿಯ ವಿಭಾಗದಲ್ಲಿ ಜೈ ತುಳುನಾಡು ಪುತ್ತೂರು ಬೊಟ್ಯಾಡಿ ಕಿಶೋರ್ ಭಂಡಾರಿ ಎನ್ನುವ ಕೋಣಗಳು ಪ್ರಥಮ ಸ್ಥಾನ ಪಡೆದಿವೆ. ಪೆಂರ್ಗಾಲು ಕೃತಿಕ್ ಗೌಡ ಅವರು ಕೋಣಗಳನ್ನು ಓಡಿಸಿ 16 ಗ್ರಾಂ ಚಿನ್ನ ಮತ್ತು 1 ಲಕ್ಷ ರೂ. ನಗದು ಬಹುಮಾನ ತಮ್ಮದಾಗಿಸಿಕೊಂಡಿದ್ದಾರೆ.

ಇನ್ನುಎರ್ಮಾಳ್ ಪುಚ್ಚೊಟ್ಟುಬೀಡು ಬಾಲಚಂದ್ರ ಶೆಟ್ಟಿ ಎನ್ನುವ ಕೋಣಗಳು ದ್ವಿತೀಯ ಸ್ಥಾನ ಪಡೆದುಕೊಂಡಿವೆ. ಬೈಂದೂರು ವಿವೇಕ್ ಪೂಜಾರಿ ಕೋಣಗಳನ್ನು ಓಡಿಸಿದ್ದು, 8 ಗ್ರಾಂ ಚಿನ್ನ ಹಾಗೂ 50 ಸಾವಿರ ರೂ. ನಗದು ಬಹುಮಾನ ಪಡೆದುಕೊಂಡಿದ್ದಾರೆ.

ನೇಗಿಲು ಹಿರಿಯ ವಿಭಾಗ

ನೇಗಿಲು ಹಿರಿಯ ವಿಭಾಗದಲ್ಲಿ ಬಂಗಾಡಿ ಪರಂಬೇಲು ನಾರಾಯಣ ಮಲೆ ಕುಡಿಯ ಅವರ ಕೋಣಗಳು ಪ್ರಥಮ ಸ್ಥಾನ ಪಡೆದುಕೊಂಡಿವೆ. ಸರಪಾಡಿ ಧನಂಜಯ ಗೌಡ ಎನ್ನುವರು ಕೋಣಗಳನ್ನು ಓಡಿಸಿದ್ದು, 16 ಗ್ರಾಂ ಚಿನ್ನ ಹಾಗೂ 1 ಲಕ್ಷ ರೂ. ನಗದು ಬಹುಮಾನ ಪಡೆದುಕೊಂಡಿದ್ದಾರೆ.

ಇನ್ನು ಮಾಳ ಆನಂದ ನಿಲಯ ಶೇಖರ ಎ ಶೆಟ್ಟಿ ಎನ್ನುವ ಕೋಣಗಳು 2ನೇ ಸ್ಥಾನಕ್ಕೆ ತೃಪ್ತಿಪಟ್ಟಿವೆ. ಪಟ್ಟೆ ಗುರು ಚರಣ್ ಎನ್ನುವರು ಕೋಣಗಳನ್ನು ಓಡಿಸಿದ್ದು, 8 ಗ್ರಾಂ ಚಿನ್ನ ಹಾಗೂ 50 ಸಾವಿರ ರೂ. ನಗದು ಬಹುಮಾನ ಗೆದ್ದುಕೊಂಡಿದ್ದಾರೆ.

ಕಾಂತಾರ ಚಿತ್ರದಲ್ಲಿ ಮಿಂಚಿದ್ದ ಕೋಣಗಳ ಪದಕ ಬೇಟೆ

ಕಂಬಳದ ಕಣಹಲಗೆ ವಿಭಾಗದಲ್ಲಿ ಕಾಂತಾರ ಚಿತ್ರದಲ್ಲಿ ಬಳಸಿದ್ದ ಕೋಣಗಳು ಪದಕ ಗೆದ್ದಿವೆ. ಕಿಟ್ಟು-ಅಪ್ಪು ಹೆಸರಿನ ಕೋಣಗಳು ಗೆಲುವು ಸಾಧಿಸಿವೆ. ಪದಕ ಗೆದ್ದಿದ್ದಕ್ಕೆ ಮಾಲೀಕ ಪರಮೇಶ್ವರ ಭಟ್ ಹರ್ಷ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಕಂಬಳದ ಲಕ್ಕಿ ಡ್ರಾ ಕೂಪನ್ ವಿಜೇತರಿಗೆ ಪ್ರಶಸ್ತಿ ಘೋಷಿಸಲಾಗಿದೆ. ಮೊದಲ ಬಹುಮಾನ ವಿಜೇತೆ ಪೂಜಾ ಎಂ.ವಿಗೆ ಮಾರುತಿ ಬ್ರಿಜಾ ಕಾರು ನೀಡಲಾಗಿದ್ದು, 2ನೇ ಬಹುಮಾನ ರಾಯಲ್ ಎನ್​ಫೀಲ್ಡ್ ಬೈಕ್ ಗಿಫ್ಟ್ ಆಗಿ ಪ್ರದಾನ ಮಾಡಲಾಯ್ತು.

ಬೆಂಗಳೂರಿನಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ನಡೆದ ಕರಾವಳಿ ನಾಡಿನ ಕಲೆಗೆ ಅದ್ಧುರಿ ತೆರೆ ಬಿದ್ದಿದೆ. ಲಕ್ಷಾಂತರ ಜನರು ಕಂಬಳ ಕ್ರೀಡೆಯನ್ನ ಕಣ್ತುಂಬಿಕೊಂಡು ದಿಲ್​ಖುಷ್ ಆಗಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ