ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಕಳಚಿ ಬಿದ್ದ ವಿಮಾನದ ಚಕ್ರ; ಕಾರುಗಳು ಜಖಂ- ಇಲ್ಲಿದೆ ವಿಡಿಯೋ
ಅಮೆರಿಕಾದಿಂದ ಜಪಾನ್‌ಗೆ ಹೊರಟಿದ್ದ ವಿಮಾನವೊಂದು ಟೇಕ್ ಆಫ್ ಕೆಲವೇ ಹೊತ್ತಲ್ಲಿ ಮರಳಿ ತುರ್ತು ಭೂಸ್ಪರ್ಶ ಮಾಡಿತು. ಅದೃಷ್ಟವಶಾತ್ ಯಾವ ಪ್ರಯಾಣಿಕರಿಗೂ ತೊಂದರೆ ಆಗಿಲ್ಲ ಎಂದು ವರದಿ ಆಗಿದೆ.
ಹೌದು, ಜಪಾನ್‌ಗೆ ಹೊರಡಲು ಬೋಯಿಂಗ್ 777 ವಿಮಾನವು ಅಮೆರಿಕಾದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾದ ಸ್ಯಾನ್ ಫ್ರಾನ್ಸಿಸ್ಕೋ ನಿಲ್ದಾಣದಿಂದ ಟೇಕ್ ಆಫ್ ಆಯಿತು. ಆದರೆ ವಿಮಾನ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ವಿಮಾನದ ಚಕ್ರವೊಂದು ಕಳಚಿ ನೆಲಕ್ಕೆ ಬಿದ್ದ ಘಟನೆ ನಡೆದಿದೆ. ಈ ಕುರಿತು ವಿಡೀಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ವಿಮಾನದ ಚಕ್ರ ಕಳಚಿ ಬೀಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಬಳಿಕ ನಾಗರಿಕ ವಿಮಾನಯಾನ ಅಧಿಕಾರಿಗಳು ಪೈಲಟ್‌ಗೆ ಮಾಹಿತಿ ತಿಳಿಸಿದ್ದಾರೆ. ಟೇಕ್ ಆಫ್ ಕೆಲವೇ ಹೊತ್ತಿನಲ್ಲಿ ಮರಳಿ ಸ್ಯಾನ್ ಫ್ರಾನ್ಸಿಸ್ಕೋ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
ಕಾರಿನ ಮೇಲೆ ಬಿದ್ದ ವಿಮಾನದ ಚಕ್ರ ವಿಮಾನದಿಂದ ಕಳಚಿ ಬಿದ್ದ ಚಕ್ರವು ನಿಲ್ದಾಣದ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಕಾರುಗಳು ಮತ್ತು ತಂತಿ ಬೇಲಿಯ ಕಾಂಪೌಂಡ್ ಮೇಲೆ ಬಿದ್ದಿದೆ. ಇದರಿಂದ ಕಾರುಗಳು ಜಖಂಗೊಂಡಿವೆ ಎಂದು ನಾಗರಿಕ ವಿಮಾನಯಾನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ವಿಮಾನ ಚಕ್ರ ಬಿದ್ದ ರಭಸಕ್ಕೆ ತಂತಿ ಬೇಲಿ ಸಹ ಕಿತ್ತು ಹೋಗಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ.
ಘಟನೆ ಬಳಿಕ ಯುನೈಟೈಟ್ ಏರ್‌ಲೈನ್ಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ತುರ್ತು ಭೂಸ್ಪರ್ಶವಾದ ವಿಮಾನ ಪರಿಶೀಲಿಸಿದ್ದಾರೆ. ಘಟನೆಯ ವಿಡಿಯೋವನ್ನು (X @nicksortor) ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಭಾರಿ ವೈರಲ್ ಆಗಿದೆ.
ಯುನೈಟೈಟ್ ಏರ್‌ಲೈನ್ಸ್ ವಿಮಾನವು ಟೇಕ್ ಆಫ್ ಆಗುತ್ತಿದ್ದಂತೆ ಮಾಹಿತಿ ಮೇರೆಗೆ ಎಚ್ಚೆತ್ತ ಪೈಲಟ್ ಸುರಕ್ಷಿತವಾಗಿ ವಿಮಾನ ಲ್ಯಾಂಡ್ ಮಾಡುವಲ್ಲಿ ಸಫಲನಾಗಿದ್ದಾನೆ. ಇದರಿಂದ ನೂರಾರು ಜನರ ಜೀವ ರಕ್ಷಿಸಿದಂತಾಗಿದೆ. ಸ್ಯಾನ್ ಫ್ರಾನ್ಸಿಸ್ಕೋ ದಿಂದ ಜಪಾನಿನ ಒಸಾಕಾ ನಿಲ್ದಾಣಕ್ಕೆ ಈ ವಿಮಾನವು ಸುಮಾರು 240ಕ್ಕೂ ಹೆಚ್ಚು ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
🚨 #BREAKING: A United Airlines Boeing 777 has lost a wheel while taking off San Francisco
— Nick Sortor (@nicksortor) March 7, 2024
Several cars have been CRUSHED by the falling wheel
WHAT’S GOING ON WITH BOEING AND THE AIRLINES? pic.twitter.com/zu7s5YJixg