ಟೇಕಾಪ್ ಆದ ಕೆಲವೇ ಕ್ಷಣಗಳಲ್ಲಿ ಹೊತ್ತಿ ಉರಿದ ವಿಮಾನ!

ಅಮೆರಿಕ: ಕಾರ್ಗೋ ವಿಮಾನವೊಂದು ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಬೆಂಕಿ ಹೊತ್ತಿಕೊಂಡು ಉರಿದಿರುವ ಘಟನೆ ಅಮೆರಿಕಾದ ಮಿಯಾಮಿಯಲ್ಲಿ ನಡೆದಿದೆ.
ಕಾರ್ಗೊ ವಿಮಾನದ ಎಂಜಿನ್ ದೋಷದ ಕಾರಣಕ್ಕೆ ಬೆಂಕಿ ಹೊತ್ತಿ ವಿಮಾನದ ಬಾಹ್ಯ ಭಾಗ ಉರಿದಿದೆ ಎನ್ನಲಾಗಿದ್ದು, ಮಿಯಾಮಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಸಂದರ್ಭದ ಕಾರ್ಯವಿಧಾನಗಳನ್ನು ಅನುರಿಸಿ ವಿಮಾನವನ್ನು ಸುರಕ್ಷಿತವಾಗಿ ಇಳಿಸಿದ್ದಾರೆ. ಘಟನೆಯಲ್ಲಿ ಯಾರಿಗೂ ಹಾನಿಯಾಗಿಲ್ಲ. ಘಟನೆಗೆ ನಿಖರ ಕಾರಣವೇನು ಎಂಬುದನ್ನು ಪತ್ತೆ ಮಾಡಲು ತನಿಖೆ ನಡೆಸಲಾಗುತ್ತದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೈಲಟ್ ವಿಮಾನವನ್ನಹು ತುರ್ತು ಭೂಸ್ಫರ್ಶ ಮಾಡುವಂತೆ ಹೇಳುತ್ತಿರುವ ಆಡಿಯೋ ಅದರಲ್ಲಿ ಕೇಳಿ ಬಂದಿದೆ.
ಫೆಲೆಸ್ತೀನ್ ವಿವಿ ಕಟ್ಟಡದ ಮೇಲೆ ಬಾಂಬ್ ದಾಳಿ: ಇಸ್ರೇಲ್ ನಿಂದ ಸ್ಪಷ್ಟನೆ ಕೇಳಿದ ಅಮೆರಿಕ
ಗಾಝಾ: ಫೆಲೆಸ್ತೀನ್ ವಿಶ್ವವಿದ್ಯಾಲಯದ ಮುಖ್ಯ ಕ್ಯಾಂಪಸ್ ಮೇಲೆ ಇಸ್ರೇಲ್ ಮಿಲಿಟರಿ (ಐಡಿಎಫ್) ಬಾಂಬ್ ದಾಳಿ ನಡೆಸಿವೆ ಎನ್ನಲಾದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಇಸ್ರೇಲ್ ಸರಕಾರದಿಂದ ಅಮೆರಿಕ ಸ್ಪಷ್ಟೀಕರಣವನ್ನು ಕೇಳಿದೆ.
ಮಧ್ಯ ಗಾಝಾ ಪಟ್ಟಿಯ ಖಾನ್ ಯೂನಿಸ್ ನಗರದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಫೆಲೆಸ್ತೀನ್ ವಿಶ್ವವಿದ್ಯಾಲಯದ ಕ್ಯಾಂಪಸ್ ಎಂದು ಹೇಳಲಾಗುವ ಕಟ್ಟಡ ಸ್ಫೋಟಕ್ಕೊ ಮೊದಲು ಪಾಳು ಬಿದ್ದ ಕಟ್ಟಡ ಎಂಬಂತೆ ಕಾಣುತ್ತದೆ. ಕಟ್ಟಡದ ಒಳಗೆ ಬಾಂಬ್ ಗಳನ್ನು ಇಟ್ಟು ಸ್ಫೋಟಿಸಿರುವುದನ್ನು ವಿಡಿಯೊದಲ್ಲಿ ನೋಡಬಹುದು. ಹೊರಗಿನಿಂದ ಯಾವುದೇ ಕ್ಷಿಪಣಿ ದಾಳಿ ನಡೆದಿಲ್ಲ ಎಂಬುದು ವಿಡಿಯೊದಲ್ಲಿ ತಿಳಿದು ಬಂದಿದೆ.