ಟಿವಿ ಆಂಕರ್ ಅನ್ನು ಅಪಹರಿಸಿದ ಐದು ಸ್ಟಾರ್ಟಪ್ ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕಿ!
ಹೈದರಾಬಾದ್ ನಲ್ಲಿ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ತನ್ನ ಮದುವೆಯ ಪ್ರಸ್ತಾಪವನ್ನು ತಿರಸ್ಕರಿಸಿದ ಟಿವಿ ಆಂಕರ್ ಅನ್ನು ಉದ್ಯಮಿ ಯುವತಿಯೊಬ್ಬಳು ಅಪಹರಿಸಿ ಇದೀಗ ಪೊಲೀಸರ ಅತಿಥಿಯಾದ ಘಟನೆಯೊಂದು ಹೈದರಾಬಾದ್ ನಲ್ಲಿ ನಡೆದಿದೆ.
ಬಂಧಿತ ಯುವತಿಯನ್ನು ಭೋಗಿರೆಡ್ಡಿ ತ್ರಿಶಾ ಎಂದು ಗುರುತಿಸಲಾಗಿದ್ದು, ಅವರು ಐದು ಸ್ಟಾರ್ಟಪ್ ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕಿಯಾಗಿದ್ದಾರೆ ಎನ್ನಲಾಗಿದೆ.
ಏನಿದು ಪ್ರಕರಣ: ಭೋಗಿರೆಡ್ಡಿ ತ್ರಿಶಾ ಅವರು ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ಟಿವಿ ಮ್ಯೂಸಿಕ್ ಚಾನೆಲ್ ಆಂಕರ್ ಪ್ರಣವ್ ಅವರ ಪ್ರೊಫೈಲ್ ಅನ್ನು ನೋಡಿದ್ದಾರೆ, ಬಳಿಕ ಮದುವೆಯ ಪ್ರಸ್ತಾಪ ಇಟ್ಟಿದ್ದಾರೆ, ಇದಕ್ಕೆ ಆ ಕಡೆಯಿಂದ ಒಪ್ಪಿಗೆಯೂ ಸಿಕ್ಕಿದೆ, ಇದಾದ ಬಳಿಕ ಇಬ್ಬರೂ ಚಾಟ್ ಮಾಡಲು ಆರಂಭಿಸಿದ್ದಾರೆ, ಆದರೆ ಅದೆಷ್ಟೋ ತಿಂಗಳುಗಳು ಕಳೆದ ಬಳಿಕ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ಪರಿಚಯವಾದ ಪ್ರಣವ್ ನಿಜವಾದ ವ್ಯಕ್ತಿ ಆಗಿರಲಿಲ್ಲ ಬದಲಿಗೆ ಆತ ಬೇರೆ ಯಾರೋ ವ್ಯಕ್ತಿಯಾಗಿದ್ದಾನೆ. ಆದರೆ ಆತ ತನ್ನ ಪ್ರೊಫೈಲ್ ಫೋಟೋ ಬಳಸುವ ಬದಲು ಟಿವಿ ನಿರೂಪಕ ಪ್ರಣವ್ ಫೋಟೋ ಬಳಸಿಕೊಂಡಿದ್ದಾನೆ ಈ ವಿಚಾರ ಗೊತ್ತಾಗುತ್ತಿದ್ದಂತೆ ಮಹಿಳೆ ನಿಜವಾದ ಪ್ರಣವ್ ಅವರ ಮೊಬೈಲ್ ನಂಬರ್ ಪಡೆದು ಕರೆ ಮಾಡಿ ಈ ವಿಚಾರ ಹೇಳಿಕೊಂಡಿದ್ದಾರೆ. ಯುವತಿಯ ಮದುವೆಯ ವಿಚಾರವನ್ನು ಟಿವಿ ನಿರೂಪಕ ತಿರಸ್ಕರಿಸಿದ್ದಾನೆ ಇದರಿಂದ ಮನನೊಂದ ಯುವತಿ ಪ್ರಣವ್ ನನ್ನು ಅಪಹರಣ ಮಾಡಲು ನಿರ್ಧರಿಸಿದ್ದಾಳೆ. ಅದಕ್ಕಾಗಿ ತ್ರಿಷಾ ತನ್ನ ಸ್ನೇಹಿತರ ಸಹಾಯವನ್ನು ಪಡೆದು ಪ್ರಣವ್ ನನ್ನು ಅಪಹರಣ ಮಾಡಿದ್ದಾಳೆ ಈ ವೇಳೆ ಹೇಗೋ ಅಪಹರಣಕಾರರಿಂದ ತಪ್ಪಿಸಿಕೊಂಡ ಪ್ರಣವ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಪ್ರಣವ್ ಮಾಹಿತಿಯನ್ನು ಪಡೆದ ಪೊಲೀಸರು ಯುವತಿ ಹಾಗೂ ಆಕೆಯ ಜೊತೆಗಿದ್ದ ಇತರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ತಾನು ಮ್ಯಾಟ್ರಿಮೋನಿಯಲ್ ವೆಬ್ ಸೈಟ್ ನಲ್ಲಿ ಪ್ರಣವ್ ಪ್ರೊಫೈಲ್ ನೋಡಿ ಮದುವೆಯ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಿಕೊಂಡಿದ್ದಾಳೆ. ಬಳಿಕ ಗೊತ್ತಾಯಿತು ಇದು ಪ್ರಣವ್ ಅಲ್ಲ ಬೇರೆ ಯಾರೋ ಎಂಬುದು, ತಾನು ಪ್ರಣವ್ ನನ್ನೇ ಮದುವೆಯಾಗಲು ನಿರ್ಧರಿಸಿದ ಕಾರಣ ಆತನ ಬಳಿ ಇದ್ದ ವಿಚಾರ ಹೇಳಿಕೊಂಡಿದ್ದು ಇದಕ್ಕೆ ಪ್ರಣವ್ ಒಪ್ಪದೇ ಇದ್ದಾಗ ಅಪಹರಿಸಿ ಮಾಡುವುಯಾಗುವ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಿಕೊಂಡಿದ್ದಾಳೆ.
ಅಷ್ಟು ಮಾತ್ರವಲ್ಲಕೆ ಆತನ ಚಲನವಲನ ಪತ್ತೆಹಚ್ಚಲು ಟಿವಿ ಆ್ಯಂಕರ್‌ನ ಕಾರಿಗೆ ಯುವತಿ ಟ್ರ್ಯಾಕಿಂಗ್ ಸಾಧನವನ್ನು ಅಳವಡಿಸಿ ಆತನನ್ನು ಹಿಂಬಾಲಿಸಲು ಮತ್ತು ಆತನ ಚಟುವಟಿಕೆಗಳ ಮೇಲೆ ನಿಗಾ ಇರಿಸಿದ್ದಳು ಎಂದು ಪೋಲೀಸರ ತನಿಖೆ ವೇಳೆ ವಿಚಾರ ಹೊರ ಬಂದಿದೆ.