ಬಿಡುಗಡೆಗೆ ಸಿದ್ದಗೊಳ್ಳುತ್ತಿದೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ; ಯಾರಿಗೆಲ್ಲಾ ಟಿಕೆಟ್ ಫೈನಲ್?
ಲೋಕಸಭಾ ಚುನಾವಣೆಗೆ ಮೊದಲ ಪಟ್ಟಿಯಲ್ಲಿ 195 ಅಭ್ಯರ್ಥಿಗಳ ಪಟ್ಟಿಯನ್ನ ಬಿಡುಗಡೆ ಮಾಡಿರುವ ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಪ್ರಕಟಿಸಲು ಕಸರತ್ತು ನಡೆಸುತ್ತಿದೆ. ಕರ್ನಾಟಕ ಏಳು ಕ್ಷೇತ್ರಗಳ ಅಭ್ಯರ್ಥಿಯನ್ನ ಕಾಂಗ್ರೆಸ್ ಘೋಷಣೆ ಮಾಡಿದ್ದು, ಬಿಜೆಪಿ ಗೆಲ್ಲುವ ಅಭ್ಯರ್ಥಿಗಳಿಗಾಗು ಹುಡುಕಾಟ ಮುಂದುವರೆಸಿದ್ದಾರೆ.
ಈಗಾಗಲೇ ಸೋಮವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಿಇಸಿ ಸಭೆಯಲ್ಲಿ ಕರ್ನಾಟಕದ 28 ಕ್ಷೇತ್ರಗಳ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಈಗಾಗಲೇ ಕೆಲವು ಕ್ಷೇತ್ರಗಳ ಅಭ್ಯರ್ಥಿಗಳು ಫೈನಲ್ ಆಗಿದ್ದು, ಕೆಲವು ಕ್ಷೇತ್ರಗಳಿಗೆ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿದೆ. ಇನ್ನೂ ಈ ಬಾರಿ ಕರ್ನಾಟಕದಲ್ಲಿ ಆಡಳಿತರೂಢ ಕಾಂಗ್ರೆಸ್ ಗೆ ಸೋಲಿನ ರುಚಿ ತೋರಿಸುವ ನಿಟ್ಟಿನಲ್ಲಿ ಕೆಲವು ಟಿಕೆಟ್ ಆಕಾಂಕ್ಷಿಗಳಿಗೆ ಟಿಕೆಟ್ ನೀಡದಿರಲು ನಿರ್ಧರಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಮೊದಲ ಪಟ್ಟಿಯಲ್ಲಿ 195 ಅಭ್ಯರ್ಥಿಗಳ ಹೆಸರು ಬಿಡುಗಡೆಯಾಗಿದ್ದು, ಎರಡನೇ ಪಟ್ಟಿಯಲ್ಲಿ 100 ರಿಂದ 150 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆಯಾಗಲಿದೆ. ಮಂಗಳವಾರ ಅಥವಾ ಬುಧವಾರ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದೆ.
ಯಾರಿಗೂ ಈ ಬಾರಿ ಅವಕಾಶ?
* ಬೆಳಗಾವಿ – ಜಗದೀಶ್ ಶೆಟ್ಟರ್
* ಚಿಕ್ಕೋಡಿ – ರಮೇಶ್ ಕತ್ತಿ
* ಹುಬ್ಬಳ್ಳಿ – ಧಾರವಾಡ – ಪ್ರಹ್ಲಾದ್ ಜೋಶಿ
* ವಿಜಯಪುರ – ಗೋವಿಂದ ಕಾರಜೋಳ
* ಕಲಬುರಗಿ – ಡಾ ಉಮೇಶ್ ಜಾಧವ್
* ಹಾವೇರಿ – ಬಸವರಾಜ ಬೊಮ್ಮಾಯಿ
* ಶಿವಮೊಗ್ಗ – ಬಿವೈ ರಾಘವೇಂದ್ರ
* ಚಿತ್ರದುರ್ಗ – ನಾರಾಯಣಸ್ವಾಮಿ
* ತುಮಕೂರು – ವಿ ಸೋಮಣ್ಣ
* ಬೆಂಗಳೂರು ದಕ್ಷಿಣ – ತೇಜಸ್ವಿ ಸೂರ್ಯ
* ಬೆಂಗಳೂರು ಕೇಂದ್ರ – ಪಿಸಿ ಮೋಹನ್
* ಬೆಂಗಳೂರು ಉತ್ತರ – ಶೋಭಾ ಕರಂದ್ಲಾಜೆ
* ಬೆಂಗಳೂರು ಗ್ರಾಮಾಂತರ – ಡಾ ಸಿಎನ್ ಮಂಜುನಾಥ್
* ಚಿಕ್ಕಬಳ್ಳಾಪುರ – ಡಾ ಕೆ ಸುಧಾಕರ್
* ದಕ್ಷಿಣ ಕನ್ನಡ – ಬ್ರಿಜೇಶ್ ಚೌಟಾ (ಎಲ್)
* ಚಾಮರಾಜನಗರ – ಡಾ ಮೋಹನ್ ಕುಮಾರ್
* ಬಳ್ಳಾರಿ – ಬಿ ಶ್ರೀರಾಮುಲು
ಈ ಬಾರಿ ಯಾರಿಗೆ ಶಾಕ್?
* ಮೈಸೂರು – ಕೊಡಗು – ಪ್ರತಾಪ್ ಸಿಂಹ
* ಉತ್ತರ ಕನ್ನಡ – ಅನಂತ್ ಕುಮಾರ್ ಹೆಗಡೆ
* ದಾವಣಗೆರೆ – ಜಿಎಂ ಸಿದ್ದೇಶ್ವರ್
* ದಕ್ಷಿಣ ಕನ್ನಡ – ನಳಿನ್ ಕುಮಾರ್ ಕಟೀಲ್
* ಕೊಪ್ಪಳ – ಸಂಗಣ್ಣ ಕರಡಿ
* ಬಳ್ಳಾರಿ – ವೈ ದೇವೇಂದ್ರಪ್ಪ
* ವಿಜಯಪುರ – ರಮೇಶ್ ಜಿಗಜಿಣಗಿ
* ಬೆಳಗಾವಿ – ಮಂಗಳಾ ಅಂಗಡಿ
* ಬೆಂಗಳೂರು ಉತ್ತರ – ಡಿವಿ ಸದಾನಂದ ಗೌಡ
* ಬೀದರ್ – ಭಗವಂತ್ ಖೂಬಾ