ಭಾನುವಾರ, ಡಿಸೆಂಬರ್ 22, 2024
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಜನವರಿ 22ರಂದು ರಾಜ್ಯದ ಶಾಲೆಗಳಿಗೆ ರಜೆ ನೀಡುವಂತೆ ಹಿಂದೂ ಸಂಘಟನೆಗಳ ಒತ್ತಾಯ..!

Twitter
Facebook
LinkedIn
WhatsApp
ಜನವರಿ 22ರಂದು ರಾಜ್ಯದ ಶಾಲೆಗಳಿಗೆ ರಜೆ ನೀಡುವಂತೆ ಹಿಂದೂ ಸಂಘಟನೆಗಳ ಒತ್ತಾಯ..!

ಬೆಂಗಳೂರು, ಜ.15: ಕೋಟ್ಯಾಂತರ ಭಾರತೀಯರ ಕನಸ್ಸು ಪ್ರಭು ಶ್ರೀರಾಮ ಮಂದಿರ ನಿರ್ಮಾಣ (Ayodhya Ram Mandir). ಇದಕ್ಕೆ ಈಗ ಕಾಲ ಕೂಡಿ ಬಂದಿದೆ. ಜನವರಿ 22 ಭಾರತದ ಇತಿಹಾದ ಪುಟಗಳಲ್ಲಿ ಅಚ್ಚಾಗುವ ದಿನ. ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆಯಾಗುವ ಶುಭ ಗಳಿಗೆ. ಅದರಲ್ಲೂ ಅಂದು ಬಾಲ ರಾಮನ ಮೂರ್ತಿಯನ್ನ (Rama Lalla) ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಮನೆಮನೆಗೆ ಅಯೋಧ್ಯೆಯಿಂದ ಈಗಾಗಲೇ ಅಕ್ಷತೆ ಬಂದು ತಲುಪುತ್ತಿದೆ. ಜೊತೆಗೆ ಕೆಲವರು ಅಯೋಧ್ಯೆಗೆ ಹೋಗಲು ಪ್ಲಾನ್ ಮಾಡ್ತಿದ್ದಾರೆ. ಕೆಲವರು ಅಂದು ರಾಮ ಭಜನೆಯಲ್ಲಿ ತೊಡಗಿಸಿಕೊಳ್ಳಲು ಮುಂದಾಗುತ್ತಿದ್ದಾರೆ, ಮತ್ತೆ ಕೆಲವರು ಆ ದಿನ ರಾಜ ಜ್ಯೋತಿ ಬೆಳಗಿ ದೀಪಾವಳಿಯಾಗಿ ವಿಶೇಷವಾಗಿಸಬೇಕೆಂದುಕೊಂಡಿದ್ದಾರೆ. ಈ ನಡುವೆ ಅಯೋಧ್ಯಯಲ್ಲಿ ಪ್ರಭು ಶ್ರೀ ರಾಮ ಮೂರ್ತಿ ಪ್ರತಿಷ್ಠಾಪನೆ ದಿನ ರಾಜ್ಯದಲ್ಲಿ ಸಂಭ್ರಮ ಆಚರಿಸಲು ರಾಜ್ಯದ ಶಾಲೆಗಳಿಗೆ ರಜೆ ನೀಡುವಂತೆ ಹಿಂದೂಪರ ಸಂಘಟನೆಗಳು ಶಾಲಾ ಶಿಕ್ಷಣ ಇಲಾಖೆಗೆ ಒತ್ತಾಯಿಸಿವೆ.

ಜನವರಿ 22ರಂದು ಶಾಲೆಗೆ ರಜೆ ನೀಡಿ ಅಥವಾ ಶಾಲೆಗಳಲ್ಲಿ ರಾಮಮೂರ್ತಿಗೆ ಪೂಜೆ ಸಲ್ಲಿಸಿ ಶಾಲೆಯಲ್ಲಿ ಪ್ರಾರ್ಥನೆ ಮಾಡಿಸಿ. ಬಳಿಕ ಒಂದು ಕ್ಲಾಸ್ ಆಯೋಧ್ಯೆಯ ಬಗ್ಗೆ ರಾಮಮಂದಿರದ ಬಗ್ಗೆ ಮಕ್ಕಳಿಗೆ ಪಾಠ ಮಾಡುವಂತೆ ಒತ್ತಾಯ ಮಾಡಿದ್ದಾರೆ. ಈಗಾಗಲೇ ಬೇರೆ ರಾಜ್ಯಗಳಲ್ಲಿ ಈ ಕೆಲಸ ಮಾಡಲಾಗ್ತಿದೆ ಜೊತೆಗೆ ಕೆಲವು ಖಾಸಗಿ ಶಾಲೆಗಳಲ್ಲಿ ರಾಮಮಂದಿರದ ದಿನ ಪೂಜೆ ಮಾಡಲಾಗ್ತಿದೆ. ಹೀಗಾಗಿ ಸರ್ಕಾರಿ ಶಾಲೆಗಳಲ್ಲಿಯೂ ಈ ಬಗ್ಗೆ ಗಮನ ಹರಿಸುವಂತೆ ಇಲ್ಲವಾದ್ರೆ ಅಂದು ಶಾಲೆಗಳಿಗೆ ರಜೆ ನೀಡುವಂತೆ ಹಿಂದೂಪರ ಸಂಘಟನೆಗಳು ಶಿಕ್ಷಣ ಇಲಾಖೆಗೆ ಒತ್ತಾಯ ಮಾಡಿವೆ.

ಸದ್ಯ ಶಿಕ್ಷಣ ಇಲಾಖೆ ಈ ವಿಚಾರದ ಬಗ್ಗೆ ಪ್ರತಿಕ್ರಿಯೇ ನೀಡಲು ಹಿಂದೇಟು ಹಾಕಿದೆ. ಆದರೆ ಖಾಸಗಿ ಶಾಲೆಗಳು ಮಾತ್ರ ಈ ನಿರ್ಧಾರ ಸ್ವಾಗರ್ತಹ ರಜೆ ನೀಡುವ ಹಕ್ಕು ಸರ್ಕಾರಕ್ಕೆ ಇದೆ. ಆದರೆ ರಾಮ ಮಂದಿರ ಉದ್ಘಾಟನೆಯ ದಿನ ರಜೆ ನೀಡಿಲ್ಲವಾದ್ರೂ ನಾವು ಮಕ್ಕಳಿಗೆ ಪ್ರಭು ರಾಮನ ಬಗ್ಗೆ ರಾಮಮಂದಿರದ ಬಗ್ಗೆ ಹೇಳಿಕೊಡ್ತೀವಿ. ಸಾಧ್ಯವಾದ್ರೆ ಶಾಲೆಗಳಲ್ಲಿ ಲೈವ್ ಸ್ಟ್ರೀಮಿಂಗ್ ಮಾಡ್ತೀವಿ ಎಂದು ತಿಳಿಸಿವೆ.

ಒಟ್ನಲ್ಲಿ ಎಲ್ಲೆಡೆ ರಾಮಮಂದಿರ ಪ್ರತಿಷ್ಠಾಪನೆಯ ಜ್ವರ ಹೆಚ್ಚಾಗಿದ್ದು, ಜನವರಿ 22 ರಂದು ಶಾಲೆಗೆ ರಜೆ ನೀಡುವ ಬಗ್ಗೆ ಒತ್ತಾಯ ಶುರುವಾಗಿದೆ. ಆದರೆ ಶಿಕ್ಷಣ ಇಲಾಖೆ ಈ ವಿಚಾರದಲ್ಲಿ ಯಾವ ನಿರ್ಧಾರಕ್ಕೆ ಬರುತ್ತೆ ಅಂತಾ ಕಾದು ನೋಡಬೇಕಿದೆ.

ರಾಮಮಂದಿರ ಭಾವಚಿತ್ರ ಹಿಡಿದು 13 ಸಾವಿರ ಅಡಿ ಎತ್ತರದಿಂದ ಸ್ಕೈಡೈವಿಂಗ್ ಮಾಡಿದ ಯುವಕರು: ವಿಡಿಯೋ ವೈರಲ್​

ಇದೇ ಜನೇವರಿ 22ಕ್ಕೆ ಅಯೋಧ್ಯೆಯ (Ayodhya) ಶ್ರೀರಾಮಮಂದಿರದಲ್ಲಿ (Sri Ram) ರಾಮಲಲ್ಲಾ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ವಿಜಯಪುರದ ಯುವಕರು ವಿಶಿಷ್ಟವಾಗಿ ಶ್ರೀರಾಮನಿಗೆ ಭಕ್ತಿ ಸಮರ್ಪಿಸಿದ್ದಾರೆ. ನಮೋ ಸ್ಕೈಡೈವಿಂಗ್ ಎಂಬ ನಾಲ್ವರ ತಂಡ, ಬ್ಯಾಂಕಾಕ್​ನ ಖೋಯಾಯ್ ಎಂಬ ಪ್ರದೇಶಕ್ಕೆ ತೆರಳಿದೆ. ಅಲ್ಲಿ, 13 ಸಾವಿರ ಅಡಿ ಎತ್ತರದಿಂದ ಜೈ ಶ್ರೀರಾಮ ಎಂದು ಬರೆದಿರುವ ಹಾಗೂ ರಾಮ ಮಂದಿರದ ಫೋಟೊ ಇರುವ ಜೊತೆಗೆ ಪ್ರಧಾನಿ ಮೋದಿ ಅವರ ಭಾವಚಿತ್ರವಿರುವ ಬ್ಯಾನರ್ ಹಿಡಿದು ಸ್ಕೈಡೈವಿಂಗ್ ಮಾಡಿದ್ದಾರೆ.

ವಿಜಯಪುರದ ಉದ್ಯಮಿ ರಾಜಶೇಖರ ಮುತ್ತಿನಪೆಂಡಿಮಠ ನೇತೃತ್ವದಲ್ಲಿ, ಬೆಂಗಳೂರಿನ ರಾಹುಲ್ ಡಾಕ್ರೆ, ಅನುಭವ ಅಗರವಾಲ್ ಹಾಗೂ ಮಹಾರಾಷ್ಟ್ರದ ಹಿಮಾನಶೂ ಸಾಬಳೆ ಸ್ಕೈಡೈವಿಂಗ್ ಮಾಡಿದ್ದಾರೆ. ಶ್ರೀರಾಮ ದೇಶಕ್ಕೆ ಮಾತ್ರವಲ್ಲ ಇಡಿ ಜಗತ್ತಿಗೆ ಮಾದರಿಯಾಗಿದ್ದಾನೆ. ರಾಮನಿಗೆ ಯಾವುದೇ ಸ್ಥಳದ, ವ್ಯಾಪ್ತಿಯ ಮಿತಿಯಿಲ್ಲ. ಹಾಗಾಗಿ ಆಗಸದಲ್ಲೂ ಶ್ರೀರಾಮನ ಹೆಸರು ಹಾರಬೇಕು ಎಂದು ಯುವಕರು ಹೇಳಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist