ಮಂಗಳವಾರ, ಫೆಬ್ರವರಿ 4, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಪ್ರೇಯಸಿಗಾಗಿ 7 ವರ್ಷ ಜೊತೆಯಲ್ಲಿದ್ದವಳನ್ನೇ ಕೊಂದುಬಿಟ್ಟ ಗಂಡ!

Twitter
Facebook
LinkedIn
WhatsApp
ಪ್ರೇಯಸಿಗಾಗಿ 7 ವರ್ಷ ಜೊತೆಯಲ್ಲಿದ್ದವಳನ್ನೇ ಕೊಂದುಬಿಟ್ಟ ಗಂಡ!

ಅವರು ಪ್ರೀತಿಸಿ ಮದುವೆಯಾದವರು. ಕಷ್ಟ ಪಟ್ಟು ದುಡಿದು ಇಬ್ಬರೂ ಮೇಲೆ ಬಂದವರು. ಇವರಿಬ್ಬರಿಗೂ ಒಂದು ಮುದ್ದಾದ ಮಗು ಕೂಡ ಆಗಿತ್ತು. ಯಾವುದೇ ಕಷ್ಟ ತೊಂದರೇ ಏನೂ ಇರಲಿಲ್ಲ. ಆದ್ರೆ ಆವತ್ತು 4 ದಿನ ಆರಾಮಾಗಿ ಇರೋಣ ಅಂತ ತಮ್ಮ ಊರಿಗೆ ಬಂದಿದ್ರು. 4 ದಿನ ಏಂಜಾಯ್ ಕೂಡ ಮಾಡಿದ್ರು. ಆದ್ರೆ 5ನೇ ದಿನ ಹೆಂಡತಿ ಹಾರ್ಟ್ ಅಟ್ಯಾಕ್‌ನಿಂದ(Heart attack) ಸತ್ತು ಹೋಗಿದ್ಲು. ಮನೆಮಗಳು ಸತ್ತ ವಿಷಯ ಕೇಳಿ ಆಕೆಯ ತವರುಮನೆಯವರೆಲ್ಲಾ ಬಂದ್ರು. 

ಆದ್ರೆ ಸ್ಪಾಟ್ಗೆ ಬಂದಾಗ ತಮ್ಮ ಮಗಳ ಸಾವಿನ ಬಗ್ಗೆ ಹೆತ್ತವರಿಗೆ ಅನುಮಾನ ಮೂಡೋಕೆ ಶುರುವಾಗಿತ್ತು. ಈ ಸಾವು ಸಹಜದಲ್ಲ ಅನ್ನೋ ಸಂಶಯ ಅವರದ್ದಾಗಿತ್ತು. ಅನುಮಾನದಿಂದಲೇ ಪೊಲೀಸ್ ಕಂಪ್ಲೆಂಟ್ ಕೊಟ್ಟರು. ಇನ್ನೂ ಯಾವಾಗ ಪೊಲೀಸರು(Police) ಬಂದರೋ ಹೆಂಡತಿಯ ಸಾವಿನ ಬಗ್ಗೆ ಒಂದೊಂದೇ ಸ್ಫೋಟಕ ಸತ್ಯಗಳು ಹೊರಗೆ ಬಂದವು. ಶ್ವೇತಾ ಹಾರ್ಟ್ಅಟ್ಯಾಕ್‌ನಿಂದ ಸತ್ತಿಲ್ಲ. ಇನ್ನೂ ಪೋಸ್ಟ್ ಮಾರ್ಟಮ್ ರಿಪೋರ್ಟ್‌ನಲ್ಲಿ ಆಕೆಯ ದೇಹದಲ್ಲಿ ಕೆಮಿಕಲ್ ಅಂಶ ಸೇರಿಕೊಂಡಿದೆ. ಅದೇ ಆಕೆಯ ಸಾವಿಗೆ ಕಾರಣ ಅಂತ ಹೇಳಿಬಿಟ್ರು. ಇನ್ನೂ ಯಾವಾಗ ಗಂಡ ಹೇಳಿದ್ದು ಸುಳ್ಳು ಅಂತ ಗೊತ್ತಾಯ್ತೋ ಪೊಲೀಸರು ಆತನ ವಿಚಾರಣೆ ಶುರು ಮಾಡ್ತಾರೆ. ಆಗಲೇ ನೋಡಿ ಆತ ಸತ್ಯ ಒಪ್ಪಿಕೊಳ್ಳೋದು. ಪ್ರೀತಿಸಿ(Love) ಮದುವೆಯಾದವಳನ್ನೇ ದರ್ಶನ್ ಕೊಂದು ಮುಗಿಸಿದ್ದ.

ಆದ್ರೆ ಅದಕ್ಕೆ ಕಾರಣ ಅವನ ಅನೈತಿಕ ಸಂಬಂಧ. ತಾನು ಕೆಲಸ ಮಾಡ್ತಿದ್ದ ಜಾಗದಲ್ಲಿ ಪರಿಚಯವಾದವಳ ಜೊತೆಯಲ್ಲಿ ದರ್ಶನ್ ಸಂಬಂದ ಬೆಳಸಿಕೊಂಡಿದ್ದ. ಆ ವಿಷಯ ಶ್ವೇತಾಗೆ ಗೊತ್ತಾಗಿಬಿಡುತ್ತೆ. ಇದೇ ವಿಷಯಕ್ಕೆ ಆಗಾಗ ಜಗಳವಾಗ್ತಿರುತ್ತೆ. ಆದ್ರೆ ಈತನಿಗೆ ಹೆಂಡತಿಗಿಂತ(Wife) ಪ್ರೇಯಸಿಯೇ ಹೆಚ್ಚಾಗಿಬಿಟ್ಟಿರುತ್ತೆ. ಶ್ವೇತಾ ಆಗಾಗ ಗಂಡನ ಪ್ರೇಯಿಸಿಗೆ ಕಾಲ್ ಮಾಡಿ ತನ್ನ ಗಂಡನ ವಿಷಯಕ್ಕೆ ಬರಬೇಡ ಅಂತಲೂ ಹೇಳುತ್ತಿರುತ್ತಾಳೆ. ಆದ್ರೆ ದರ್ಶನ್ ತನ್ನ ಅನೈತಿಕ ಸಂಬಂದಕ್ಕೆ ಹೆಂಡತಿ ಅಡ್ಡಿಯಾಗ್ತಿದ್ದಾಳೆ ಅನ್ನೋ ಕಾರಣಕ್ಕೆ ಪಕ್ಕಾ ಪ್ಲಾನ್ ಮಾಡಿ ಜೊತೆಗೆ ಒಂದು ಸೈನೈಡ್ ಡಬ್ಬಿಯನ್ನೂ ತೆಗೆದುಕೊಂಡು ಚಿಕ್ಕಮಗಳೂರಿಗೆ ಹೋಗಿಬರೋಣ ಅಂತ ಆಕೆಯನ್ನ ಪುಸಲಾಯಿಸಿ ಕರೆದುಕೊಂಡು ಹೋಗ್ತಾನೆ. ಅವಳ ಆ ಚಿಕ್ಕಮಗಳೂರು ಜರ್ನಿಯೇ ಕೊನೆಯ ಜರ್ನಿಯಾಗಿಬಿಡುತ್ತೆ. ಏಳು ವರ್ಷದ ಮಡದಿ ಪ್ರೀತಿ ಬೇಜಾರಾಗಿತ್ತು. ಜೇಬಲ್ಲಿದ್ದ ದುಡ್ಡು ಬುದ್ಧಿಗೆ ಮಂಕುಬೂದಿ ಎರಚಿತ್ತು. ಕಷ್ಟಕ್ಕೆ ನೊಗವಾಗಿದ್ದ ಪತ್ನಿಗಿಂತ ಪರಸ್ತ್ರೀಯ ಮಾದಕ ನಗು ಮಡದಿಯನ್ನ ಮುಗಿಸುವ ಮಸಲತ್ತು ಮಾಡಿಸಿತ್ತು. ಅಂದುಕೊಂಡಂತೆ ಪತ್ನಿಯನ್ನೇನೋ ಮುಗಿಸಿದ. 

ರಾಯಚೂರು: ಹೋಟೆಲ್‌ನಲ್ಲಿ ಬಾಣಂತಿ ಆತ್ಮಹತ್ಯೆ, ಹುಟ್ಟಿದ 20 ದಿನಕ್ಕೇ ತಾಯಿ ಕಳೆದುಕೊಂಡ ಹಸುಗೂಸು..!

ರಾಯಚೂರು(ಡಿ.14):  ಗಂಡ ಕೆಲಸ ಮಾಡುವ ಹೋಟೆಲ್‌ನ ರೂಂನಲ್ಲಿಯೇ ಬಾಣಂತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಯಚೂರಿನಲ್ಲಿ ನಿನ್ನೆ(ಬುಧವಾರ) ನಡೆದಿದೆ. ನಗರದ ಸಂತೋಷಿ ಸರೋವರ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ. ಸೋನಿ(23) ಎಂಬಾಕೆಯೇ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾಳೆ. 

ಮೃತ ಮಹಿಳೆ ಉತ್ತರ ಪ್ರದೇಶದ ನಗಲಬಾರಿ ಜಿಲ್ಲೆಯ ಅತ್ರಾಸ್ ಮೂಲದವರು ಎಂದು ತಿಳಿದು ಬಂದಿದೆ. ಸೋನಿಗೂ ಮತ್ತು ಅವಿನಾಶ್ ಗೂ ಕಳೆದ ವರ್ಷ ಮದುವೆ ಆಗಿತ್ತು. ಮದುವೆ ಆದ ಬಳಿಕ ಸೋನಿಗೆ ಉತ್ತರಪ್ರದೇಶದಿಂದ ಕರೆದುಕೊಂಡು ಬಂದ ಅವಿನಾಶ್, ತಾನು ಕೆಲಸ ಮಾಡುವ ರಾಯಚೂರು ನಗರದ ಕೇಂದ್ರ ಸ್ಥಾನದಲ್ಲಿ ಇರುವ ಸಂತೋಷ ಸರೋವರ ಹೋಟೆಲ್ ‌ನ ರೂಂ ನಂಬರ್ 113ರಲ್ಲಿಯೇ ವಾಸವಾಗಿದ್ರು. ಹೋಟೆಲ್ ‌ನಲ್ಲಿ ಸ್ವೀಟ್ ತಯಾರಿಕೆ ಮಾಡುತ್ತಿದ್ದ ಅವಿನಾಶ್ ಮತ್ತು ಸೋನಿ ಖುಷಿಯಿಂದ ಜೀವನ ಮಾಡುತ್ತಿದ್ರು.

ಮಗ ಹುಟ್ಟಿದಕ್ಕೆ ಹೋಟೆಲ್ ಸಿಬ್ಬಂದಿಗೆ ಪಾರ್ಟಿ ಕೊಟ್ಟಿದ್ದ ಅವಿನಾಶ್:

ಉತ್ತರ ಪ್ರದೇಶದಿಂದ ರಾಯಚೂರಿಗೆ ಹೊಟ್ಟೆ ಪಾಡಿಗೆ ಬಂದು ಜೀವನ ಮಾಡುತ್ತಿದ್ದ ಸೋನಿ ಮತ್ತು ಅವಿನಾಶ್ ದಂಪತಿ ತುಂಬಾ ಖುಷಿಯಾಗಿದ್ರು. ಕಳೆದ 20 ದಿನಗಳ ಹಿಂದೆ ಮೃತ ಸೋನಿ ಗಂಡು ಮಗುವಿಗೆ ಜನ್ಮ ‌ನೀಡಿದ್ದಳು. ಹೆರಿಗೆ ವೇಳೆ ಮಗುವಿನ ತೂಕ ಹೆಚ್ಚಾಗಿದೆ ಎಂದು ವೈದ್ಯರು ಅರ್ಬಾಷನ್ ಮಾಡಿದ್ರು. ಅರ್ಬಾಷನ್ ಆದ ಬಳಿಕ ಏಳು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮತ್ತೆ ಅದೇ ಹೋಟೆಲ್ ರೂಂಗೆ ಬಂದು ವಾಸವಾಗಿದ್ದರು. ಮಗ ಹುಟ್ಟಿದ ಖುಷಿಯಲ್ಲಿ ಅವಿನಾಶ್ ಇಡೀ ಹೋಟೆಲ್ ಸಿಬ್ಬಂದಿಗೆ ಪಾರ್ಟಿ ಕೂಡ ನೀಡಿದ್ದನು. ಆ ಪಾರ್ಟಿ ವೇಳೆ ಎಲ್ಲರೂ ಕುಡಿದು ಕುಪ್ಪಳಿಸಿದ್ರು. 

ಪತ್ನಿ ನೋವಿಗೆ ಸ್ಪಂದಿಸದೇ ಕ್ರಿಕೆಟ್ ಮ್ಯಾಚ್ ನೋಡಲು ಹೋಗಿದ್ದ ಪತಿ:

ಗಂಡ ಅವಿನಾಶ್ ನನ್ನ ನಂಬಿ ಆಕೆ ಉತ್ತರ ಪ್ರದೇಶದಿಂದ ರಾಯಚೂರಿಗೆ ಬಂದಿದ್ದಳು. ಪತಿ ಕೆಲಸ ಮಾಡುವ ಹೋಟೆಲ್ ನ ರೂಂನಲ್ಲಿಯೇ ವಾಸವಾಗಿದ್ದ ಸೋನಿಗೆ 20 ದಿನಗಳ ಹಿಂದೆ ಅಬಾರ್ಷನ್ ಆಗಿ ಹೆರಿಗೆ ಆಗಿತ್ತು. ಹಸುಗೂಸಿನ ಜೊತೆಗೆ ಹೋಟೆಲ್ ರೂಂನಲ್ಲಿ ಸೋನಿ ವಾಸವಾಗಿದ್ದಳು. ಅಬಾರ್ಷನ್ ನೋವು ಹೆಚ್ಚಾದಾಗ ಗಂಡನ ಗಮನಕ್ಕೆ ತಂದಿದ್ದಾಳೆ. ಆದ್ರೆ ಗಂಡ ಅವಿನಾಶ್ ಮಾತ್ರ ಕೇರ್ ಮಾಡದೇ ಕಡಿಮೆ ಆಗುತ್ತೆ ಅಂತ ಹೇಳುತ್ತಾ ಕಾಲಹರಣ ಮಾಡಿದ್ದಾನೆ.‌ ದಿನೇ ದಿನೇ ನೋವು ಹೆಚ್ಚಾಗಿದೆ. ಆದ್ರೂ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾದ ಪತಿ, ಪತ್ನಿಯನ್ನ ಹೋಟೆಲ್ ರೂಂನಲ್ಲಿ ಬಿಟ್ಟು ಕ್ರಿಕೆಟ್ ಮ್ಯಾಚ್‌ ನೋಡಲು ಹೋಗಿದ್ದಾನೆ. ಇತ್ತ ಸೋನಿ ಅಬಾರ್ಷನ್ ನೋವು ಹೆಚ್ಚಾಗಿದಕ್ಕೆ 20 ದಿನದ ಹಸುಗೂಸು ಬಿಟ್ಟು ಅದೇ ರೂಂನಲ್ಲಿ ನೇಣು ಹಾಕಿಕೊಂಡು ಪ್ರಾಣ ಬಿಟ್ಟಿದ್ದಾಳೆ ಎಂದು ಹೇಳಲಾಗುತ್ತಿದೆ. 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist