ಶನಿವಾರ, ಜುಲೈ 13, 2024
13 ರಲ್ಲಿ 10 ಸ್ಥಾನಗಳೊಂದಿಗೆ ಭರ್ಜರಿ ಗೆಲುವು ಸಾಧಿಸಿದ INDIA ಮೈತ್ರಿಕೂಟ; ಬಿಜೆಪಿಗೆ 2 ಸ್ಥಾನ-ಪಿಚ್‌ನ ಮಣ್ಣು ತಿಂದ ರಹಸ್ಯ; ರೋಹಿತ್ ಶರ್ಮ ಹೇಳಿದ್ದೇನು?-ವಾಲ್ಮೀಕಿ ನಿಗಮ, ಮುಡಾ ಹಗರಣ ನ್ಯಾಯಯುತ ತನಿಖೆಗಾಗಿ ಸಿಬಿಐಗೆ ವಹಿಸಬೇಕು: ಸಂಸದ ಯದುವೀರ್ ಒಡೆಯರ್-ಡಿಸಿಸಿ ಬ್ಯಾಂಕ್‌ಗೆ ನೂತನ ಅಧ್ಯಕ್ಷರಾಗಿ ಮಂಜುನಾಥ ಗೌಡ; ಉಪಾಧ್ಯಕ್ಷರಾಗಿ ಮರಿಯಪ್ಪ ಅವಿರೋಧ ಆಯ್ಕೆ!-ಪಿಸ್ತೂಲ್ ಹಿಡಿದು ರೈತರನ್ನು ಬೆದರಿಸುವ ವಿಡಿಯೋ ವೈರಲ್; ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ತಾಯಿ ಮನೋರಮಾ ವಿರುದ್ಧ ಎಫ್ಐಆರ್!-WCL 2024: ಇರ್ಫಾನ್ - ಯೂಸುಫ್ ಪಠಾಣ್ ಸಿಡಿಲಬ್ಬರದ ಬ್ಯಾಟಿಂಗ್, ಭಾರತ - ಪಾಕಿಸ್ತಾನ ಫೈನಲ್​ಗೆ ಲಗ್ಗೆ!-ಬಿಜೆಪಿ ಮೈತ್ರಿಕೂಟಕ್ಕೆ ಪರಿಷತ್ತಿನ ಚುನಾವಣೆಯಲ್ಲಿ 11ರ ಪೈಕಿ 9 ಸ್ಥಾನಗಳಲ್ಲಿ ಜಯ!-Aparna: ಕನ್ನಡ ನಾಡು ಕಂಡ ಅಪರೂಪದ ನಿರೂಪಕಿ, ನಟಿ ಅಪರ್ಣಾ ಇನ್ನಿಲ್ಲ-ಮಂಗಳೂರಿನಲ್ಲಿ ದರೋಡೆ ಮಾಡಿ ಭಯ ಹುಟ್ಟಿಸಿದ ಚಡ್ಡಿ ಗ್ಯಾಂಗ್ ಅರೆಸ್ಟ್..!-ಭಾರತ ಕ್ರಿಕೆಟ್ ತಂಡದ ನೂತನ ಕೋಚ್ ಆಗಿ ಗೌತಮ್​ ಗಂಭೀರ್ ನೇಮಕ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಪತ್ನಿಯನ್ನೇ ಭೀಕರವಾಗಿ ಹತ್ಯೆಗೈದ ಪತಿ, ಮಕ್ಕಳು ಅನಾಥ

Twitter
Facebook
LinkedIn
WhatsApp
ಪತ್ನಿಯನ್ನೇ ಭೀಕರವಾಗಿ ಹತ್ಯೆಗೈದ ಪತಿ, ಮಕ್ಕಳು ಅನಾಥ

ಕಾರವಾರ, (ಅಕ್ಟೋಬರ್ 18): ಕೌಟುಂಬಿಕ ಕಲಹ ಹಿನ್ನೆಲೆ ಪತಿ(Husband) ತನ್ನ ಹೆಂಡತಿಯ (Wife) ಕತ್ತು ಸೀಳಿ ಭೀಕರವಾಗಿ ಕೊಲೆ (murder) ಮಾಡಿರುವ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆ ಭಟ್ಕಳ ತಾಲೂಕಿನ ಮುರುಡೇಶ್ವರದಲ್ಲಿ ನಡೆದಿದೆ. ನಂದಿನಿ(30) ಕೊಲೆಯಾದ ಮಹಿಳೆ. ನಂದಿನಿ ಹಾಗೂ ಲೋಕೇಶ ನಾಯ್ಕ ದಂಪತಿ ಓರ್ವ ಪುತ್ರ ಹಾಗೂ ಮಗಳೊಂದಿಗೆ ಕಳೆದ 3 ದಿನಗಳಿಂದ ಸಬ್ಬತ್ತಿ ಕ್ರಾಸ್‌ನಲ್ಲಿರುವ ಮನೆಯೊಂದರಲ್ಲಿ ವಾಸವಾಗಿದ್ದರು. ಆದ್ರೆ, ಅದೇನಾಯ್ತೋ ಏನು ಇಬ್ಬರ ನಡುವೆ ಗಲಾಟೆ ನಡೆದಿದ್ದು, ಜಗಳದಲ್ಲಿ ಲೋಕೇಶ ನಾಯ್ಕ ಮಾರಕಾಸ್ತ್ರದಿಂದ ಪತ್ನಿಯ ಕುತ್ತಿಗೆ ಹೊಡೆದಿದ್ದಾನೆ. ಪರಿಣಾಮ ನಂದಿನಿ ರಕ್ತದ ಮಡುವಿನಲ್ಲೇ ಮನೆಯಿಂದ ಹೊರಗೆ ಓಡಿಬಂದು ನೆಲಕ್ಕೆ ಬಿದ್ದು ಪ್ರಾಣಬಿಟ್ಟಿದ್ದಾಳೆ.

ರಕ್ತದ ಮಡುವಿನಲ್ಲಿ ಬಿದ್ದ ಮಹಿಳೆಯನ್ನು ನೋಡಿ ಸ್ಥಳೀಯರು ಕುಡಲೇ ಪೊಲೀಸರಿಗೆ ಮಾಹಿತಿ ತಿಳಿಸಿದ್ದು, ವಿಷಯ ಗೊತ್ತಾಗುತ್ತಿದ್ದಂತೆಯೇ ಸ್ಥಳಕ್ಕೆ ಸಿಪಿಐ ಸಂತೋಷ ಕಾಯ್ಕಿಣಿ ಮತ್ತು ದೌಡಾಯಿಸಿ ಪರಿಶೀಲನೆ ನಡೆಸಿದೆ. ಬಳಿಕ ಆರೋಪಿ ಪತಿ ಲೋಕೇಶ ನಾಯ್ಕ‌ನನ್ನು ಖಾಸಗಿ ಹೋಟೆಲೊಂದರಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ. ಲೋಕೇಶ ನಾಯ್ಕ ಶಿಲ್ಪಿ ಕೆಲಸ ಮಾಡುತ್ತಿದ್ದರೆ, ನಂದಿನಿ ಮನೆಯಲ್ಲಿರುತ್ತಿದ್ದರು. ಈ ಬಗ್ಗೆ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

“ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ ಎನ್ನುತ್ತಾರೆ. ಆದ್ರೆ, ಈ ದಂಪತಿ ಕಲಹ ಕೊಲೆಯಲ್ಲಿ ಅಂತ್ಯವಾಗಿದೆ.  ಇನ್ನು  ಅತ್ತ ತಾಯಿ ಕೊಲೆಯಾದರೆ, ಇತ್ತ ತಂದೆ ಜೈಲು ಪಾಲಾಗಿದ್ದಾನೆ. ಇದರಿಂದ ಎರಡು ಮಕ್ಕಳು ಇದೀಗ ಅನಾಥವಾಗಿವೆ.

ಹುಬ್ಬಳ್ಳಿಯಲ್ಲಿ ನೇಣು ಬಿಗಿದುಕೊಂಡು ಉದ್ಯಮಿ ಆತ್ಮಹತ್ಯೆ; ಕಾರಣ?

ಹುಬ್ಬಳ್ಳಿ, ಅ.17: ಸಾಲಬಾಧೆ ತಾಳಲಾರದೆ ಉದ್ಯಮಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಬ್ಬಳ್ಳಿ(Hubballi)ಯ ಗೋಕುಲ್ ರಸ್ತೆಯ ಇಂಡಸ್ಟ್ರಿಯಲ್ ಎಸ್ಟೇಟ್‌ನಲ್ಲಿ ನಡೆದಿದೆ.  ರವಿ ಮುರಗೋಡ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಉದ್ಯಮಿ. ಶ್ರೀನಿಧಿ ಸ್ಟೀಲ್ ವರ್ಕ್‌ನ ಮಾಲೀಕರಾಗಿದ್ದ ಇವರು ಬ್ಯಾಂಕ್ ಹಾಗೂ ಖಾಸಗಿ ವ್ಯಕ್ತಿಗಳ ಬಳಿ ಸಾಲ ಪಡೆದಿದ್ದರು. ಇದೀಗ ಸಾಲ ಬಾಧೆಯಿಂದ ಬೇಸತ್ತು ಕೈಗಾರಿಕಾ ಪ್ರದೇಶದಲ್ಲಿನ ವರ್ಕ್‌ಶಾಪ್‌ನಲ್ಲಿಯೇ ನೇಣಿಗೆ ಶರಣಾಗಿದ್ದಾರೆ. ಈ ಕುರಿತು ಗೋಕುಲ ರಸ್ತೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಸ್ನೇಹಿತರ ಜೊತೆ ಈಜಲು ಹೋಗಿದ್ದ ವಿದ್ಯಾರ್ಥಿ ಸಾವು

ಚಿಕ್ಕಮಗಳೂರು: ನಗರದ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿ ಹರ್ಷ(20) ಎಂಬಾತ ನಲ್ಲೂರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಇಂದು(ಅ.17) ಸ್ನೇಹಿತರ ಜೊತೆ ಕೆರೆಗೆ ಈಜಲು ಹೋಗಿದ್ದಾಗ ಈ ಘಟನೆ ನಡೆದಿದ. ಈ ಕುರಿತು ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ