ಠಾಣೆಯಲ್ಲಿ ಪೊಲೀಸ್ ಎದುರೇ ದೂರು ಕೊಟ್ಟ ಪತ್ನಿಯನ್ನು ಚಾಕುವಿನಿಂದ ಇರಿದ ಪತಿ!
ಹಾಸನ: ದೂರು ಕೊಟ್ಟ ಪತ್ನಿಗೆ ಪತಿ ಠಾಣೆಯಲ್ಲೇ ಇರಿದ ಘಟನೆಯೊಂದು ಹಾಸನದಲ್ಲಿ (Hassan) ನಡೆದಿದೆ.
ಗಾಯಾಳು ಪತ್ನಿಯನ್ನು ಶಿಲ್ಪ ಎಂದು ಗುರುತಿಸಲಾಗಿದ್ದು, ಈಕೆಯ ಕೊಲೆಗೆ ಪತಿ ಹರೀಶ್ ಯತ್ನಿಸಿದ್ದಾನೆ. ಈ ಘಟನೆ ಹಾಸನದ ಮಹಿಳಾ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಆರು ವರ್ಷದ ಹಿಂದೆ ಮದುವೆಯಾಗಿದ್ದ ಶಿಲ್ಪಾ- ಹರೀಶ್, ಪರಸ್ಪರ ಅನುಮಾನದಿಂದ ಜಗಳ ಮಾಡಿಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಅಂತೆಯೇ ಗಂಡನಿಂದ ಕಿರುಕುಳ ಎಂದು ಶಿಲ್ಪಾ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪತ್ನಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಪತಿ ಹರೀಶ್ ನನ್ನು ಕರೆಸಿ ವಿಚಾರಣೆ ನಡೆಸುತ್ತಿದ್ದಾಗಲೇ ಹತ್ಯೆಗೆ ಯತ್ನ ನಡೆದಿದೆ. ಆದರೆ ಪೊಲೀಸರ ಸಮಯ ಪ್ರಜ್ಞೆಯಿಂದ ಭಾರೀ ದುರಂತವೊಂದತ ತಪ್ಪಿದೆ. ಚಾಕು ಕಿತ್ತುಕೊಂಡು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇತ್ತ ಗಾಯಾಳು ಶಿಲ್ಪಾಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ವಿದ್ಯುತ್ ಸ್ಪರ್ಶ – ಒಂದೇ ಕುಟುಂಬದ ನಾಲ್ವರು ಮಕ್ಕಳು ದುರ್ಮರಣ
ಲಕ್ನೋ: ವಿದ್ಯುತ್ ಸ್ಪರ್ಶಿಸಿ (Electrocuted) ಒಂದೇ ಕುಟುಂಬದ ನಾಲ್ವರು ಅಪ್ರಾಪ್ತ ಮಕ್ಕಳು ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ (Uttar Pradesh) ಉನ್ನಾವೋದ ಗ್ರಾಮವೊಂದರಲ್ಲಿ ನಡೆದಿದೆ.
ಮೃತ ಮಕ್ಕಳನ್ನು ಮಾಯಾಂಕ್ (9), ಹಿಮಾಂಕ್ (6), ಹಿಮಾಂಶಿ (8) ಮತ್ತು ಮಾನ್ಸಿ (5) ಎಂದು ಗುರುತಿಸಲಾಗಿದೆ. ಮಕ್ಕಳು ಆಕಸ್ಮಿಕವಾಗಿ ತಮ್ಮ ಮನೆಯ ಫ್ಯಾನ್‍ನ ತಂತಿಯನ್ನು ಸ್ಪರ್ಶಿಸಿದ್ದಾರೆ. ಇದರಿಂದ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು (Police) ತಿಳಿಸಿದ್ದಾರೆ.
ಘಟನೆಯ ಸಮಯದಲ್ಲಿ ಮೃತಪಟ್ಟ ಮಕ್ಕಳ ಪೋಷಕರು ಮನೆಯ ಹೊರಗಿನ ಮೈದಾನದಲ್ಲಿದ್ದರು ಎಂದು ತಿಳಿದು ಬಂದಿದೆ. ಪೋಷಕರಿಗೆ ಅಧಿಕಾರಿಗಳು ಸಾಂತ್ವನ ಹೇಳಿದ್ದಾರೆ. ಸೂಕ್ತ ಪರಿಹಾರ ನೀಡುವ ಭರವಸೆಯನ್ನು ಸ್ಥಳೀಯ ಆಡಳಿತ ನೀಡಿದೆ.