ಅಡುಗೆ ಮಾಡಲು ಬರಲ್ಲ ಅಂತ ಡಿವೋರ್ಸ್ ಕೇಳಿದ ಗಂಡ; ಅರ್ಜಿಯನ್ನು ವಜಾಗೊಳಿಸಿದ ಕೋರ್ಟ್!!
ತಿರುವನಂತಪುರಂ: ಪತ್ನಿಗೆ ಸರಿಯಾಗಿ ಅಡುಗೆ ಮಾಡಲು ಬರುವುದಿಲ್ಲ ಎಂದು ಕ್ರೌರ್ಯತೆ ಆಧಾರದ ಮೇಲೆ ಡಿವೋರ್ಸ್ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ವಜಾಗೊಳಿಸಿದ್ದು, ಹೆಂಡತಿಯ ಅಡುಗೆ ಕೌಶಲ್ಯದ ಕೊರತೆಯನ್ನು ಕ್ರೂರ ನಡವಳಿಕೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ಹೇಳಿದೆ.
ಅರ್ಜಿದಾರ ತನ್ನ ಪತ್ನಿಯ ವಿರುದ್ಧ ಹಲವು ಆರೋಪಗಳನ್ನು ಮಾಡಿರುವುದರಲ್ಲಿ ಅಡುಗೆ ಕೌಶಲ್ಯದ ಕೊರತೆಯೇ ಪ್ರಧಾನ ಆರೋಪವಾಗಿದ್ದು, ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಮೂರ್ತಿಗಳಾದ ಅನಿಲ್ ಕೆ. ನರೇಂದ್ರನ್ ಮತ್ತು ಸೋಫಿ ಥಾಮಸ್ ಅವರಿದ್ದ ದ್ವಿಸಸ್ಯ ಪೀಠ, ಕಾನೂನುಬದ್ಧ ವಿವಾಹವನ್ನು ವಿಸರ್ಜಿಸಲು ಅಡುಗೆ ಕೊರೆತೆಯನ್ನು ಕ್ರೌರ್ಯ ಎಂದು ಪರಿಗಣಿಸಲಾಗುವುದಿಲ್ಲ ಎಂದಿದ್ದಾರೆ.

ಇದಕ್ಕೆ ಪ್ರತಿಯಾಗಿ ಪತ್ನಿ ತನ್ನ ವಿರುದ್ಧದ ಎಲ್ಲ ಆರೋಪಗಳನ್ನು ತಿರಸ್ಕರಿಸಿದ್ದಾಳೆ. ತನ್ನ ಪತಿ ಲೈಂಗಿಕ ವಿಕೃತಿಗಳಿಂದ ಬಳಲುತ್ತಿದ್ದಾನೆ ಎಂದು ಪ್ರತ್ಯಾರೋಪ ಮಾಡಿದ್ದಾಳೆ. ಮಾನಸಿಕ ಆರೋಗ್ಯ ಸಮಸ್ಯೆಯಿದ್ದು, ವೈದ್ಯರು ಹೇಳಿದ ಔಷಧವನ್ನು ನಿತ್ಯವು ತೆಗೆದುಕೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ. ತಮ್ಮ ವೈವಾಹಿಕ ಜೀವನವನ್ನು ಮುಂದುವರಿಸುವ ಉದ್ದೇಶವನ್ನು ವ್ಯಕ್ತಪಡಿಸಿರುವ ಪತ್ನಿ, ಉದ್ಯೋಗದಾತರಿಗೆ ಅವರ ಇಮೇಲ್ ಕೇವಲ ಹಸ್ತಕ್ಷೇಪಕ್ಕಾಗಿ ವಿನಂತಿಯಾಗಿದೆ ಹೊರತು ಬೇರೆ ಯಾವುದೇ ದೂರು ನೀಡಿಲ್ಲ. ಏರುಪೇರಾಗಿರುವ ನಮ್ಮ ಸಂಬಂಧವನ್ನು ಸಮನ್ವಯಗೊಳಿಸಲು ಉದ್ಯೋಗದಾತರ ಬಳಿ ಸಹಾಯ ಕೇಳಿದ್ದೇನಷ್ಟೇ ಎಂದು ತಮ್ಮ ಸಮರ್ಥನೆ ನೀಡಿದ್ದಾರೆ.
ಇದಾದ ಬಳಿಕ ನ್ಯಾಯಾಲಯ ಪತ್ನಿಯ ಇಮೇಲ್ ಅನ್ನು ಪರಿಶೀಲಿಸಿದ್ದು, ಆಕೆಯ ತಪ್ಪಿಲ್ಲದಿರುವುದು ಕಂಡುಬಂದಿದೆ. ಪತ್ನಿಯನ್ನು ಕೇರಳದಲ್ಲೇ ಬಿಟ್ಟು ಯುಎಇಗೆ ಹಿಂದಿರುಗಿದ್ದು, ಇಮೇಲ್ನಲ್ಲಿ ಪತ್ನಿಯು ತನ್ನ ಗಂಡನ ಸ್ವಭಾವದ ಬಗ್ಗೆ ದುಃಖಿಸಿದ್ದಾಳೆ. ಗಂಡನಲ್ಲಾದ ವರ್ತನೆಯ ಬದಲಾವಣೆಗಳ ಬಗ್ಗೆ ಪತ್ನಿ ತನ್ನ ಆತಂಕವನ್ನು ವ್ಯಕ್ತಪಡಿಸಿದ್ದು, ಉದ್ಯೋಗದಾತರ ಸಹಾಯವನ್ನು ಬಯಸಿದ್ದಾರೆ. ಹೇಗಾದರೂ ಮಾಡಿ ಗಂಡನನ್ನು ಸಹಜ ಜೀವನಕ್ಕೆ ಮರಳಿ ತರಲು ಆಕೆ ಯತ್ನಿಸಿದ್ದಾಳೆ.
ಇದೆಲ್ಲವನ್ನು ಪರಿಶೀಲಿಸಿದ ನ್ಯಾಯಾಲಯ ಡಿವೋರ್ಸ್ ಅರ್ಜಿಯನ್ನು ವಜಾಗೊಳಿಸಿದೆ. ವಿಚ್ಛೇದನವನ್ನು ಸಮರ್ಥಿಸಿಕೊಳ್ಳಲು ಬಲವಾದ ಕಾರಣಗಳಿಲ್ಲ ಎಂದು ಅಭಿಪ್ರಾಯಪಟ್ಟಿದೆ.