ಅಧಿಕಾರಕ್ಕೆ ಬಂದು 6 ತಿಂಗಳಾದರೂ ನಾರಾಯಣ ಗುರು ನಿಗಮಕ್ಕೆ ಅನುದಾನ ನೀಡದ ಸರಕಾರ. ಪ್ರತಿಭಟನೆಯ ಎಚ್ಚರಿಕೆ ನೀಡಿದ ಸತ್ಯಜಿತ್ ಸುರತ್ಕಲ್
ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ಸ್ಥಾಪನೆಗೊಂಡು 6 ತಿಂಗಳು ಕಳೆದರೂ ಅನುದಾನ ಒದಗಿಸದೆ ಹಿಂದುಳಿದ ವರ್ಗ ಸಮುದಾಯವನ್ನು ಸರ್ಕಾರ ಕಡೆ ಗಣಿಸಲಾಗುತ್ತಿದೆ. ಈ ನಿಗಮಕ್ಕೆ ಕೂಡಲೇ ಅನುದಾನ ನೀಡದಿದ್ದಲ್ಲಿ ಪ್ರತಿಭಟನೆ ಹಾದಿ ಹಿಡಿಯುವುದಾಗಿ ಶ್ರೀ ನಾರಾಯಣ ಗುರು ವಿಚಾರ ವೇದಿಕೆ (SNGV) ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಅಗ್ರಹಿಸಿದ್ದಾರೆ.
ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಗುರುವಾರ ಪತ್ರಿಕಾಗೋಷ್ಠಿ ಯಲ್ಲಿ ಅವರು ಮಾತನಾಡಿ, ಕಳೆದ ವಿಧಾನಸಭಾ ಚುನಾವಣಾ ವೇಳೆ ಚುನಾವಣೆ ಹಿತದೃಷ್ಟಿಯಿಂದ ನಿಗಮ ಘೋಷಿಸಿದ್ದಾರೆ ಎಂದು ಅವರು ಆರೋಪಿಸಿದರು. ಬಿಜೆಪಿ ಸರ್ಕಾರ ನಿಗಮವನ್ನು ಘೋಷಿಸಿದೆ ಆದರೆ ಕಾಂಗ್ರೆಸ್ ಸರಕಾರ ಇದುವರೆಗೆ ಒಂದು ರೂಪಾಯಿ ನೀಡದೆ ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಅವರು ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಬಂಟ್ವಾಳ SNGV ಅಧ್ಯಕ್ಷ ನವೀನ್ ಕೋಟ್ಯಾನ್ ಮತ್ತಿತರರು ಇದ್ದರು.
704 ಪ್ರವಾಸಿಗರೊಂದಿಗೆ ಮಂಗಳೂರಿಗೆ ಆಗಮಿಸಿದ ಬೃಹತ್ ಹಡಗು!
ಮಂಗಳೂರು ಡಿಸೆಂಬರ್ 15: 704 ಮಂದಿ ಪ್ರವಾಸಿಗರನ್ನು ಹೊತ್ತುಕೊಂಡು ಬಂದಿರುವ ಪ್ರವಾಸಿ ಹಡಗು ಮಂಗಳೂರಿಗೆ ಆಗಮಿಸಿದೆ. ಫ್ರೆಡ್ ಓಲ್ಸೆನ್ ಕ್ರೂಸ್ ಲೈನ್ಸ್ ಹಡಗು “MS BOLETTE” ಎಂಬ ಹೆಸರಿನ ಹಡಗು ಡಿಸೆಂಬರ್ 14 ರ ಬೆಳಿಗ್ಗೆ 08:00 ಗಂಟೆಗೆ ಬಂದರಿಗೆ ಆಗಮಿಸಿತು. ಬಹಾಮಾಸ್ ದೇಶದ ಹಡಗಿನಲ್ಲಿ 704 ಪ್ರಯಾಣಿಕರು ಮತ್ತು 645 ಸಿಬ್ಬಂದಿಗಳು ಇದ್ದಾರೆ. ಹಡಗಿನ ಒಟ್ಟಾರೆ ಉದ್ದವು 238 ಮೀಟರ್.
ಹಡಗಿನ ಪ್ರಯಾಣಿಕರನ್ನು ಸಾಂಪ್ರಾದಾಯಿಕವಾಗಿ ಸ್ವಾಗತಿಸಲಾಗಿದ್ದು, ಹುಲಿ ಕುಣಿತ, ಚಂಡೆ ಸೇರಿದಂೆ ಪ್ರವಾಸಿಗರು ವಿವಿಧ ಕಲಾ ಪ್ರಕಾರಗಳನ್ನು ವೀಕ್ಷಿಸಿದರು ಮತ್ತು ತಮ್ಮ ಮಂಗಳೂರಿಗೆ ಭೇಟಿ ನೀಡಿದ ನೆನಪಿನ ಚಿತ್ರಗಳಾಗಿ ಫೋಟೋಗಳನ್ನು ತೆಗೆದರು.
ಕ್ರೂಸ್ ಪ್ರಯಾಣಿಕರಿಗೆ ಆರಾಮದಾಯಕ ಮತ್ತು ಆಹ್ಲಾದಕರ ಅನುಭವವನ್ನು ಖಚಿತಪಡಿಸಿಕೊಳ್ಳಲು ವಿವಿಧ ವ್ಯವಸ್ಥೆಗಳನ್ನು ಮಾಡಲಾಗಿದೆ, ವೈದ್ಯಕೀಯ ತಪಾಸಣೆ, ಬಹು ವಲಸೆ ಮತ್ತು ಕಸ್ಟಮ್ಸ್ ಕೌಂಟರ್‌ಗಳು, ಮತ್ತು ಮಂಗಳೂರು ನಗರ ಮತ್ತು ಸುತ್ತಮುತ್ತ ಸಾರಿಗೆಗಾಗಿ ಬಸ್‌ಗಳು ಮತ್ತು ವಿಶೇಷ ಟ್ಯಾಕ್ಸಿಗಳು, ಸೆಲ್ಫಿ ಸ್ಟ್ಯಾಂಡ್ ಗಳನ್ನು ಒದಗಿಸಲಾಗಿತ್ತು.
ನಂತರ ಪ್ರವಾಸಿಗರು ಕಾರ್ಕಳ ಗೋಮಟೇಶ್ವರ ದೇವಸ್ಥಾನ, ಮೂಡಬಿದ್ರಿಯ 1000 ಕಂಬಗಳ ದೇವಸ್ಥಾನ, ಸೋನ್ಸ್ ಫಾರ್ಮ್, ಅಚಲ್ ಕ್ಯಾಶ್ಯೂ ಫ್ಯಾಕ್ಟರಿ, ಕದ್ರಿ ಗೋಕರ್ಣನಾಥ ದೇವಸ್ಥಾನ, ಸೇಂಟ್ ಅಲೋಶಿಯಸ್ ಚಾಪೆಲ್, ನಗರದ ಸ್ಥಳೀಯ ಮಾರುಕಟ್ಟೆಗಳಂತಹ ವಿವಿಧ ಪ್ರವಾಸಿ ತಾಣಗಳಿಗೆ ಪ್ರಯಾಣಿಕರು ಭೇಟಿ ನೀಡಿದರು. ಹಡಗು ತನ್ನ ಮುಂದಿನ ತಾಣವಾದ ಕೊಚ್ಚಿನ್ ಬಂದರಿಗೆ ಪ್ರಯಾಣ ಬೆಳಸಿತು.