ಹಂದಿ ಕಿಡ್ನಿಯನ್ನು 62 ವರ್ಷದ ವ್ಯಕ್ತಿಗೆ ಜೋಡಿಸಿದ ವೈದ್ಯರು..!
ಬೆಂಗಳೂರು: ಇದೇ ಮೊದಲ ಬಾರಿಗೆ ವೈದ್ಯರ ತಂಡವೊಂದು ಆನುವಂಶಿಕವಾಗಿ ಮಾರ್ಪಾಟು ಮಾಡಿದ ಹಂದಿಯ ಮೂತ್ರ ಪಿಂಡಗಳನ್ನು ಜೀವಂತ ವ್ಯಕ್ತಿಗೆ ಕಸಿ (Kidney Transplant) ಮಾಡಿದ್ದಾರೆ. ಅಂದ ಹಾಗೆ ವೈದ್ಯಕೀಯ ಲೋಕದಲ್ಲಿ ಇದು ಮೊಟ್ಟ ಮೊದಲ ಪ್ರಕರಣ ಹಾಗೂ ಸಾಧನೆ. ಭವಿಷ್ಯದಲ್ಲಿ ಅಂಗಾಂಗಳ ಕೊರತೆಯನ್ನು ನೀಗಿಸುವಲ್ಲಿ ದೊಡ್ಡ ಉಪಕ್ರಮ. ಅಮೆರಿಕದ ಬೋಸ್ಟನ್ನಲ್ಲಿ ಇಂಥದ್ದೊಂದು ವೈದ್ಯಕೀಯ ಸಾಧನೆ ನಡೆದಿದೆ. ಅಂತಿಮ ಹಂತದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿರುವ 62 ವರ್ಷದ ರಿಚರ್ಡ್ ಸ್ಲೇಮನ್ ಎಂಬುವವರಿಗೆ ನಾಲ್ಕು ಗಂಟೆಗಳ ಶಸ್ತ್ರ ಚಿಕಿತ್ಸೆಯ ಬಳಿಕ ಹಂದಿಯ ಕಿಡ್ನಿ ಜೋಡಿಸಲಾಗಿದೆ (pig Kidney) ಎಂದು ಮ್ಯಾಸಚೂಸೆಟ್ಸ್ ಜನರಲ್ ಆಸ್ಪತ್ರೆ ಪ್ರಕಟಿಸಿದೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ಆಸ್ಪತ್ರೆ ಮಾಹಿತಿ ನೀಡಿದೆ.
“ನಾನು ಇದನ್ನು ಬದುಕುವ ಮಾರ್ಗವಾಗಿ ಮಾತ್ರವಲ್ಲದೆ, ಅಂಗಾಂಗ ಕಸಿ ಅಗತ್ಯವಿರುವ ಸಾವಿರಾರು ಜನರಿಗೆ ಭರವಸೆ ನೀಡುವ ಮಾರ್ಗವಾಗಿ ಅನುಭವಿಸಿದೆ ” ಎಂದು ಸ್ಲೇಮನ್ ಆಸ್ಪತ್ರೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಸಿ ಅಗತ್ಯವಿರುವ ಜನರಿಗೆ ಅಂಗಗಳ ಕೊರತೆಯನ್ನು ನಿವಾರಿಸಲು ಮೂತ್ರಪಿಂಡಗಳು (Kidney Transplant), ಯಕೃತ್ತು, ಹೃದಯಗಳು ಮತ್ತು ಇತರ ಅಂಗಗಳನ್ನು ಒದಗಿಸಲು ಅನುವಂಶಿಕವಾಗಿ ಮಾರ್ಪಡಿಸಿದ ಹಂದಿಗಳನ್ನು ಬೆಳೆಸುತ್ತಿರುವ ನಡುವೆ ಈ ಕಾರ್ಯವಿಧಾನವು ಆಶಾದಾಯಕ ಬೆಳವಣಿಗೆಯಾಗಿದೆ. ಈ ಕಸಿ ವಿಧಾನವು ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿರುವ ವಿಶ್ವದಾದ್ಯಂತದ ಲಕ್ಷಾಂತರ ರೋಗಿಗಳಿಗೆ ಭರವಸೆ ನೀಡುತ್ತದೆ ಎಂದು ” ಎಂದು ಆಸ್ಪತ್ರೆಯ ಕ್ಲಿನಿಕಲ್ ಟ್ರಾನ್ಸ್ಪ್ಲಾಂಟ್ ಟಾಲರೆನ್ಸ್ ನಿರ್ದೇಶಕ ಡಾ.ತತ್ಸುವೊ ಕವಾಯಿ ಹೇಳಿದ್ದಾರೆ.
ಬಯೋಟೆಕ್ ಕಂಪನಿಗಳು ಕ್ಲೋನ್ ಮಾಡಿದ ಹಂದಿಗಳನ್ನು ಅಭಿ ವೃದ್ಧಿಪಡಿಸಲು ಪ್ರಯತ್ನಿಸುತ್ತಿವೆ. ಅವುಗಳ ಡಿಎನ್ಎಯನ್ನು ಆನುವಂಶಿಕವಾಗಿ ಮಾರ್ಪಡಿಸಲಾಗುತ್ತಿದೆ. ಹಾಗಾದರೆ ಅವುಗಳನ್ನು ಮಾನವ ದೇಹವು ತಿರಸ್ಕರಿಸುವುದಿಲ್ಲ ಹಂದಿಗಳ ವೈರಸ್ಗಳನ್ನು ಜನರಿಗೆ ಹರಡುವುದಿಲ್ಲ ,
ಬೋಸ್ಟನ್ ನಲ್ಲಿ ಕಸಿ ಮಾಡಿದ ಮೂತ್ರಪಿಂಡವು ಕೇಂಬ್ರಿಡ್ಜ್ ನ ಇಜೆನೆಸಿಸ್ ರಚಿಸಿದ ಹಂದಿಯಿಂದ ತೆಗೆಯಲಾಗಿದೆ. ಮಾನವ ಕಸಿಗಾಗಿ ಅಂಗಗಳನ್ನು ತಯಾರಿಸಲು ಇಜೆನೆಸಿಸ್ ಹಂದಿಗಳನ್ನು 69 ಆನುವಂಶಿಕ ಮಾರ್ಪಾಡು ಮಾಡಲಾಗಿದೆ. ಈ ಬದಲಾವಣೆಗಳು ಹಂದಿಗಳಿಗೆ ಸೋಂಕು ತಗುಲುವ ವೈರಸ್ನಿಂ ರಕ್ಷಿಸುತ್ತವೆ ಹಾಗೂ ಹಂದಿಯ ಜೀನ್ಗಳನ್ನು ಅಳಿಸುತ್ತವೆ. ಅಂಗಗಳನ್ನು ಮನಷ್ಯರಿಗೆ ಹೊಂದಿಕೆಯಾಗುವಂತೆ ಮಾಡಲು ಮಾನವನ ಜೀನ್ಗಳನ್ನು ಸೇರಿಸಲಾಗುತ್ತದೆ.