ಮಡಿಕೇರಿ ಹೋಂಸ್ಟೇಗೆ ಬಂದು ಮಗುವನ್ನು ಕೊಂದು ನೇಣಿಗೆ ಶರಣಾದ ದಂಪತಿ!
ಮಡಿಕೇರಿ ಡಿಸೆಂಬರ್ 09:ಕೇರಳ ಮೂಲದ ಮೂವರ ಮೃತದೇಹಗಳು ಪತ್ತೆಯಾದ ಘಟನೆ ಮಡಿಕೇರಿ ಸಮೀಪದ ಕಗ್ಗೋಡ್ಲುವಿನ ಹೋಂಸ್ಟೇವೊಂದರಲ್ಲಿ ನಡೆದಿದೆ. ಕೇರಳದ ಕೊಲ್ಲಂ ನಗರದ ನಿವಾಸಿ ವಿನೋದ್, ಅವರ ಪತ್ನಿ ಹಾಗೂ ಅವರ ಮಗುವಿನ ಮೃತದೇಹಗಳು ಶನಿವಾರ ಪತ್ತೆಯಾಗಿವೆ.
ವಿನೋದ್ ಹಾಗೂ ಅವರ ಪತ್ನಿಯ ಮೃತದೇಹಗಳು ನೇಣು ಹಾಕಿಕೊಂಡಿರುವ ಸ್ಥಿತಿಯಲ್ಲಿದ್ದರೆ, ಇವರ ಮಗುವಿನ ಶವ ಹಾಸಿಗೆಯ ಮೇಲೆ ದೊರೆತಿದೆ. ಇವರು ಶುಕ್ರವಾರ ಇಲ್ಲಿಗೆ ಬಂದು ಹೋಂಸ್ಟೇನಲ್ಲಿ ತಂಗಿದ್ದರು.
ಮಗುವನ್ನು ಕೊಂದು ದಂಪತಿ ನೇಣಿಗೆ ಶರಣಾಗಿರುವ ಶಂಕೆ ಇದೆ. ಇನ್ನು ವಿನೋದ್ ಅವರ ಪತ್ನಿ ಹಾಗೂ ಮಗುವಿನ ವಿವರಗಳು ತಿಳಿದು ಬಂದಿಲ್ಲ. ಅವರ ಸಂಬಂಧಿಕರೊಬ್ಬರು ಸಂಪರ್ಕಕ್ಕೆ ಸಿಕ್ಕಿದ್ದು, ಅವರು ಬಂದ ಮೇಲಷ್ಟೇ ಹೆಚ್ಚಿನ ಮಾಹಿತಿ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಡಿಕೇರಿ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಸಕಲೇಶಪುರದ ಗ್ರಾಮದೊಳಗೆ ಎಂಟ್ರಿ ಕೊಟ್ಟ ಗಜಪಡೆ – ಗುಂಪಿನಲ್ಲಿ ಸೇರಿಕೊಂಡ ಅರ್ಜುನನನ್ನು ಕೊಂದ ಪುಂಡಾನೆ
ಹಾಸನ: ಹಾಡಹಗಲೇ ಸಕಲೇಶಪುರದ (Sakleshpura) ಚಿಕ್ಕಕಲ್ಲೂರು ಗ್ರಾಮಕ್ಕೆ ಆನೆಗಳ ಹಿಂಡು (Elephant) ಲಗ್ಗೆ ಇಟ್ಟಿವೆ. ಈ ಗುಂಪಿನಲ್ಲಿ ಅರ್ಜುನನನ್ನು ತಿವಿದು ಕೊಂದಿರುವ ಪುಂಡಾನೆಯೂ ಸೇರಿಕೊಂಡಿದ್ದು ಜನರಲ್ಲಿ ಆತಂಕ ಮೂಡಿಸಿದೆ.
ಆನೆಗಳ ಗುಂಪಿನಲ್ಲಿ ನಾಲ್ಕು ಸಲಗಗಳು ಹಾಗೂ ಒಂದು ಮರಿ ಸೇರಿಕೊಂಡಿವೆ. ಆನೆಗಳು ಓಡಾಡುವ ವೀಡಿಯೋ ಮೊಬೈಲ್‍ನಲ್ಲಿ ಸೆರೆಯಾಗಿದ್ದು, ಈ ಗುಂಪಿನಲ್ಲಿ ಅರ್ಜುನನ್ನು ಕೊಂದಿರುವ ಆನೆ ಸೇರಿಕೊಂಡಿರುವುದನ್ನು ಅರಣ್ಯ ಇಲಾಖೆಯ (Forest Department) ಆರ್‌ಆರ್‌ಟಿ ಹಾಗೂ ಇಟಿಎಫ್ ಸಿಬ್ಬಂದಿ ಗುರುತಿಸಿದ್ದಾರೆ. ಆನೆಗಳು ಈಗ ಮರಡಿಕೆರೆ ಗ್ರಾಮದ ಬಳಿ ಬೀಡುಬಿಟ್ಟಿದ್ದು, ಗ್ರಾಮಸ್ಥರಿಗೆ ಎಚ್ಚರಿಕೆಯಿಂದ ಇರುವಂತೆ ಅರಣ್ಯ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ಕಾಡಾನೆಗಳಿಂದ ಯಸಳೂರು, ಚಿಕ್ಕಕಲ್ಲೂರು, ಮರಡಿಕೆರೆ ಗ್ರಾಮಸ್ಥರು ಆತಂಕಗೊಂಡಿದ್ದು, ಜೀವ ಭಯದಿಂದ ಕಾಫಿ ತೋಟದ ಕೆಲಸಕ್ಕೆ ಹೋಗಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ. ವಾಹನ ಸವಾರರು ಜೀವಭಯದಲ್ಲಿ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.