ಶುಕ್ರವಾರ, ನವೆಂಬರ್ 22, 2024
ಟೆಸ್ಲಾ ಕಾರು ಅಪಘಾತ, ಗುಜರಾತ್ ಮೂಲದ ನಾಲ್ವರ ದುರ್ಮರಣ!-ರೂಪೇಶ್ ಶೆಟ್ಟಿಯ ‘ಜೈ' ತುಳು ಸಿನಿಮಾಕ್ಕೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಎಂಟ್ರಿ!-ಸ್ನೇಹಿತೆಯರ ಜತೆ ಸೆಲ್ಫಿ: ಕೆರೆ ಕೋಡಿಯಲ್ಲಿ ಕೊಚ್ಚಿ ಹೋಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ರಕ್ಷಣೆ-ದಾಖಲೆ ಬರೆದ ತೇಜಸ್ವಿ ಸೂರ್ಯ, 'ಐರನ್‌ ಮ್ಯಾನ್‌ 70.3 ರೇಸ್‌' ಪೂರ್ಣಗೊಳಿಸಿದ ಮೊದಲ ಸಂಸದ-ಟೆಕ್ನಾಲಜಿ ಬದಲಾದ್ರೆ ಸಾಕಾ? ರಾಜಕೀಯ, ರಾಜಕಾರಣಿಗಳು ಬದಲಾಗಬಾರದಾ? ಸಂಚಲನ ಸೃಷ್ಟಿಸಿದ ದಳಪತಿ ವಿಜಯ್-ಉಪ ಚುನಾವಣೆಯಲ್ಲಿ ಗೆದ್ದರೆ ಡಿಕೆಶಿ ಸಿಎಂ, ಸಂಚಲನ ಮೂಡಿಸಿದ ಕೈ ಶಾಸಕನ ಹೇಳಿಕೆ!-ಶಿಗ್ಗಾಂವಿ ವಿಧಾನಸಭಾ ಉಪಚುನಾವಣೆ: ಕಾಂಗ್ರೆಸ್ ಬಂಡಾಯ ಶಮನ; ಅಕ್ಟೋಬರ್ 30ರಂದು ನಾಮಪತ್ರ ವಾಪಸ್ ಪಡೆದುಕೊಳ್ಳುತ್ತಾರಾ ಖಾದ್ರಿ?-19 ವರ್ಷದ ಗೆಳತಿಯನ್ನು ಕೊಂದು ಹೂತಿಟ್ಟ ಪ್ರಿಯಕರ, ಸಹಚರನ ಬಂಧನ-ಲವರ್ ಜತೆ ಸೇರಿ ಪ್ರತಿನಿತ್ಯ ಊಟದಲ್ಲಿ ವಿಷ ಬೆರೆಸಿ ತಾಳಿ ಕಟ್ಟಿದವನನ್ನೇ ಕೊಂದಳು!-ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ 7 ವರ್ಷ ಜೈಲು ಶಿಕ್ಷೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಮೊದಲ ಬಾರಿಗೆ ಮಹಿಂದ್ರ ಥಾರ್ ಅರ್ಥ್ ಬಿಡುಗಡೆ ಮಾಡಿದ ಕಂಪನಿ! ಏನಿದರ ವೈಶಿಷ್ಟ್ಯ

Twitter
Facebook
LinkedIn
WhatsApp
ಮೊದಲ ಬಾರಿಗೆ ಮಹಿಂದ್ರ ಥಾರ್ ಅರ್ಥ್ ಬಿಡುಗಡೆ ಮಾಡಿದ ಕಂಪನಿ! ಏನಿದರ ವೈಶಿಷ್ಟ್ಯ
ಮೊದಲ ಬಾರಿಗೆ ಮಹಿಂದ್ರ ಥಾರ್ ಅರ್ಥ್ ಬಿಡುಗಡೆ ಮಾಡಿದ ಕಂಪನಿ! ಏನಿದರ ವೈಶಿಷ್ಟ್ಯ

ಮಹೀಂದ್ರಾ ಎಸ್‌ಯುವಿಗಳಲ್ಲಿ ಅತ್ಯಂತ ಜನಪ್ರಿಯ ಮಾದರಿ ಎಂದರೆ ಅದು ಥಾರ್. ಇತ್ತೀಚೆಗೆ, ಎಸ್‌ಯುವಿಯ ವಿಶೇಷ ಆವೃತ್ತಿಯನ್ನು ಬಿಡುಗಡೆ ಮಾಡಲಾಗಿದೆ. ಈ ವಿಶೇಷ ಆವೃತ್ತಿಯ ಕಾರಿಗೆ ಮಹೀಂದ್ರಾ ಥಾರ್ ಅರ್ಥ್ ಎಡಿಷನ್ ಎಂದು ಹೆಸರಿಡಲಾಗಿದೆ. ಇದು ವಿಶಿಷ್ಟವಾದ ಸ್ಯಾಟಿನ್ ಮ್ಯಾಟ್ ಸಿದ್ಧಪಡಿಸಿದ ಡ್ಯೂನ್-ಬೀಜ್ ಬಣ್ಣದೊಂದಿಗೆ ಬರುತ್ತದೆ, ಇದು ಬಾಹ್ಯ ಮತ್ತು ಒಳಾಂಗಣದಲ್ಲಿ ಹಲವಾರು ಬದಲಾವಣೆಗಳನ್ನು ಒಳಗೊಂಡಿದೆ. ಭಾರತದಲ್ಲಿ ಇದರ ಎಕ್ಸ್ ಶೋರೂಂ ಬೆಲೆ 15.40 ಲಕ್ಷದಿಂದ ಆರಂಭವಾಗುತ್ತದೆ.

ಮರುಭೂಮಿಯಿಂದ ಸ್ಫೂರ್ತಿ ಪಡೆದ ಈ ವಿಶೇಷ ಆವೃತ್ತಿಯು ಮಹೀಂದ್ರಾ ಥಾರ್ ಎಸ್‌ಯುವಿ ಮಾದರಿಯಂತೆ ಡೋರ್‌ಗಳನ್ನು ಹೊಂದಿದ್ದು, ಡ್ಯೂನ್-ಪ್ರೇರಿತ ಡೆಕಾಲ್‌ಗಳು, ಸಿಲ್ವರ್ ಅಲಾಯ್ ಚಕ್ರಗಳು ಮತ್ತು ಹಿಂಭಾಗದ ಫೆಂಡರ್‌ನಲ್ಲಿ ಮ್ಯಾಟ್ ಬ್ಲ್ಯಾಕ್ ಬ್ಯಾಡ್ಜ್ ಗಳನ್ನು ಹೊಂದಿದೆ. ವಿಶೇಷ ಆವೃತ್ತಿಯು ಮಹೀಂದ್ರಾ ಥಾರ್ ಅರ್ಥ್ ಎಡಿಷನ್ ಬ್ಯಾಡ್ಜ್ ಅನ್ನು ಸಹ ಹೊಂದಿರುತ್ತದೆ, ಇದನ್ನು ಬಿ-ಪಿಲ್ಲರ್‌ಗಳಲ್ಲಿ ಅಳವಡಿಸಲಾಗಿದ್ದು, ತುಂಬಾ ವಿಶೇಷವಾಗಿ ಕಾಣುವಂತೆ ಮಾಡಲಾಗಿದೆ.

ಈ ವಿಶೇಷ ಎಡಿಷನ್ ಥಾರ್ ಅರ್ಥ್ ಎಸ್‌ಯುವಿಯ ಒಳಾಂಗಣವು ಕಪ್ಪು ಬಣ್ಣದ ಬೇಸ್‌ನೊಂದಿಗೆ ಬರುತ್ತಿದೆ. ಥಾರ್ ಅರ್ಥ್ ಎಡಿಷನ್ ತಿಳಿ ಕಂದು ಬಣ್ಣದ ಲೆದರ್ಲೆಟ್ ಸೀಟುಗಳನ್ನು ಹೊಂದಿದ್ದು, ಹೆಡ್ರೆಸ್ಟ್‌ಗಳು ಡ್ಯೂನ್ ವಿನ್ಯಾಸಗಳನ್ನು ಹೊಂದಿದೆ. ಪ್ರತಿ ಮಹೀಂದ್ರ ಥಾರ್ ಅರ್ಥ್ ಆವೃತ್ತಿಯ ಎಸ್‌ಯುವಿ ಸಿರೀಸ್‌ ನಿಂದ ಪ್ರಾರಂಭವಾಗುವ ವಿಶಿಷ್ಟ ಸಂಖ್ಯೆಯ ವಿಐಎನ್ ಪ್ಲೇಟ್‌ನೊಂದಿಗೆ ಬರುತ್ತದೆ.

ಮಹೀಂದ್ರಾ ಥಾರ್ ಅರ್ಥ್ ಎಡಿಷನ್ ಕ್ಯಾಬಿನ್ ಒಳಗಿನ ಲೇಔಟ್‌ಗಳು 3-ಡೋರ್ ಟ್ರೂ-ಬ್ಲೂ ಆಫ್ ರೋಡರ್ ನ ಸ್ಟ್ಯಾಂಡರ್ಡ್ ಆವೃತ್ತಿಯನ್ನು ಹೋಲುತ್ತವೆ. ಆಸನಗಳು ಮರುಭೂಮಿ ಮತ್ತು ಮರಳು ದಿಬ್ಬಗಳಿಂದ ಪ್ರೇರಿತವಾದ ತಿಳಿ ಕಂದು ಬಣ್ಣದ ಥೀಮ್‌ನೊಂದಿಗೆ ತಯಾರಿಸಲಾಗಿದೆ

ಮಹೀಂದ್ರಾ ಥಾರ್ ಅರ್ಥ್ ಎಡಿಷನ್ ನ ಕ್ಯಾಬಿನ್ ಒಳಗೆ, ಹೊರಭಾಗವು ವ್ಯಾಪಕ ಶ್ರೇಣಿಯ ಕಾಸ್ಮೆಟಿಕ್ ಅಪ್ಡೇಟ್ ಮಾಡಿದ್ದಾರೆ. ಮೆಕಾನಿಕಲ್ ಆಗಿ ಇದು ಸ್ಟ್ಯಾಂಡರ್ಡ್ ಆವೃತ್ತಿಗೆ ಹೋಲುತ್ತದೆ. ಇದು ಪೆಟ್ರೋಲ್ ಮತ್ತು ಡೀಸೆಲ್ ಆಯ್ಕೆಗಳಲ್ಲಿ ಲಭ್ಯವಿದೆ. ಮ್ಯಾನುವಲ್ ಹಾಗೂ ಆಟೊಮೆಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳನ್ನು ಸಹ ಹೊಂದಿದೆ. 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ