ಮಂಗಳವಾರ, ಡಿಸೆಂಬರ್ 5, 2023
ರಾಜ್ಯದ 13 ಭ್ರಷ್ಟ ಅಧಿಕಾರಿಗಳಿಗೆ ಸೇರಿದ 63 ಕಡೆ ಲೋಕಾಯುಕ್ತ ದಾಳಿ ; ಕೋಟಿ ಕೋಟಿ ಹಣ ಸೀಝ್..!-ಬೆಂಗಳೂರಿನ ಮನೆಯನ್ನೇ 100 ಕೋಟಿಗೆ ಅಡವಿಟ್ಟು ಸಿಬ್ಬಂದಿಗಳಿಗೆ ವೇತನ ನೀಡಿದ ಬೈಜೂಸ್ ಸಂಸ್ಥಾಪಕ!-ಅರ್ಜುನನ ಅಂತ್ಯಕ್ರಿಯೆ ವೇಳೆ ಪ್ರತಿಭಟನೆ: ಪೊಲೀಸರಿಂದ ಲಾಠಿ ಚಾರ್ಜ್!-ಬಿಜೆಪಿ ಮುಖಂಡ ಪೃಥ್ವಿಸಿಂಗ್​ಗೆ ಚಾಕು ಇರಿತ: ದೂರು ದಾಖಲು!-ಕಾಲೇಜು ಕಟ್ಟಡದ ಮೇಲಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು!-ಕರ್ನಾಟಕ ಹೈಕೋರ್ಟ್ ಕಲಾಪದಲ್ಲಿ ವಿಡಿಯೋ ಕಾನ್ಫರೆನ್ಸ್ ಆ್ಯಪ್​ನಲ್ಲಿ ಅಶ್ಲೀಲ ದೃಶ್ಯ ಅಪ್​ಲೋಡ್..!-ಆಹಾರ ಧಾನ್ಯಗಳ ಮೂಟೆಯಡಿ ಸಿಲುಕಿ ಐವರು ಕಾರ್ಮಿಕರ ಸಾವು-ಸಿಐಡಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಫ್ರೆಡ್ರಿಕ್ಸ್ ಖ್ಯಾತಿಯ ನಟ ದಿನೇಶ್ ಫಡ್ನಿಸ್ ಹೃದಯಾಘಾತದಿಂದ ನಿಧನ.!-ನಾಯಿ ಬೊಗಳಿದಕ್ಕೆ ಗಲಾಟೆ; ಆ್ಯಸಿಡ್​ ಎರಚಿದ ದಂಪತಿ!-ಮರಕ್ಕೆ ಬಸ್ ಡಿಕ್ಕಿ 14 ಜನ ಸಾವು, 20 ಮಂದಿ ಗಾಯ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಕೇಂದ್ರ ಸರ್ಕಾರ ನನ್ನ ಫೋನ್ ಮತ್ತು ಇಮೇಲ್ ಅನ್ನು ಹ್ಯಾಕ್ ಮಾಡಲು ಪ್ರಯತ್ನಿಸುತ್ತಿದೆ ; ಸಂಸದೆ ಮಹುವಾ ಮೊಯಿತ್ರಾ ಆರೋಪ!

Twitter
Facebook
LinkedIn
WhatsApp
ಕೇಂದ್ರ ಸರ್ಕಾರ ನನ್ನ ಫೋನ್ ಮತ್ತು ಇಮೇಲ್ ಅನ್ನು ಹ್ಯಾಕ್ ಮಾಡಲು ಪ್ರಯತ್ನಿಸುತ್ತಿದೆ ; ಸಂಸದೆ ಮಹುವಾ ಮೊಯಿತ್ರಾ ಆರೋಪ!

ನವದೆಹಲಿ, ಅಕ್ಟೋಬರ್ 30: ಕೇಂದ್ರ ಬಿಜೆಪಿ ಸರ್ಕಾರ ತನ್ನ ಫೋನ್ ಮತ್ತು ಇಮೇಲ್ ಅನ್ನು ಹ್ಯಾಕ್ ಮಾಡಲು ಪ್ರಯತ್ನಿಸುತ್ತಿದೆ ಎಂದು ತೃಣಮೂಲ ಕಾಂಗ್ರೆಸ್ (TMC) ಸಂಸದೆ ಮಹುವಾ ಮೊಯಿತ್ರಾ ಅವರು ಆರೋಪ ಮಾಡಿದ್ದಾರೆ. ಈ ಕುರಿತ ಮಾಹಿತಿಯನ್ನು ಅವರು ಮಂಗಳವಾರ ಹಂಚಿಕೊಂಡಿದ್ದಾರೆ.

ತಮ್ ಫೋನ್ ಹ್ಯಾಕ್ ಮಾಡುವ ಪ್ರಯತ್ನ ನಡೆಯುತ್ತಿದೆ. ಆ ಬಗ್ಗೆ ನಾನು ಆಪಲ್‌ ಐಫೋನ್‌ನಿಂದ ಎಚ್ಚರಿಕೆ ಸ್ವೀಕರಿಸಿದ್ದೇನೆ ಎಂದು ಎಚ್ಚರಿಕೆ ಸಂದೇಶದ ಸ್ಕ್ರೀನ್‌ಶಾಟ್‌ಗಳನ್ನು ಸಂಸದೆ ಮಹುವಾ ಮೊಯಿತ್ರಾ ತಮ್ಮ X ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕೇಂದ್ರ ಸರ್ಕಾರ ನನ್ನ ಫೋನ್ ಮತ್ತು ಇಮೇಲ್ ಅನ್ನು ಹ್ಯಾಕ್ ಮಾಡಲು ಪ್ರಯತ್ನಿಸುತ್ತಿದೆ ಎಂದು ನನಗೆ ಎಚ್ಚರಿಕೆ ನೀಡುವ ಸಂದೇಶ ಹಾಗೂ ಇಮೇಲ್ ಅನ್ನು ನಾನು ಸ್ವೀಕರಿಸಿದ್ದೇನೆ. ಅದಾನಿಯಂತವರ ಮತ್ತು ಪ್ರಧಾನಮಂತ್ರಿ ಕಚೇರಿಗಳಿಂದ (ಪಿಎಂಒ) ಭಯಗೊಂಡಿದ್ದು, ನೀವೆ ರಕ್ಷಣೆ ಕರುಣಿಸಬೇಕು ಎಂದು ಅವರು ಗೃಹ ಸಚಿವರಿಗೆ ಮನವಿ ಮಾಡಿದ್ದಾರೆ.

ಸ್ವೀಕೃತ ಸಂದೇಶದಲ್ಲಿ ಏನಿದೆ?

ಐಫೋನ್ ಸಂದೇಶವು ‘ಎಚ್ಚರಿಕೆ: ರಾಜ್ಯ ಪ್ರಾಯೋಜಿತ ದಾಳಿಕೋರರು ನಿಮ್ಮ ಐಫೋನ್‌ ಅನ್ನು ಗುರಿಯಾಗಿಸಬಹುದು” ಎಂಬ ಸಂದೇಶ ಸ್ವೀಕರಿಸಿದ್ದೇವೆ. ಶಿವಸೇನೆ ಸಂಸದ ಪ್ರಿಯಾಂಕಾ ಚತುರ್ವೇದಿ ಮತ್ತು ಇತರ ಕೆಲವು ಭಾರತೀಯ ಮೈತ್ರಿಕೂಟದ ನಾಯಕರಿಗೂ ಇದೇ ರೀತಿ ಎಚ್ಚರಿಕೆಗಳು ಬಂದಿವೆ. ಅಂದರೆ ಅವರ ಫೋನ್ ಸಹ ಹ್ಯಾಕ್ ಮಾಡಲು ಯತ್ನಿಸಲಾಗುತ್ತಿದೆ ಎಂದಬುದು ಇದರಿಂದ ಅರ್ಥವಾಗುತ್ತದೆ ಎಂದು ಮಹುವಾ ತಿಳಿಸಿದ್ದಾರೆ.

ತನಿಖೆ ಎದುರಿಸುತ್ತಿರುವ ಮೊಯಿತ್ರಾ

ತಮ್ಮ ಪೋಸ್ಟ್ ನಲ್ಲಿ ಪಿಎಂಒ ಇಂಡಿಯಾ ಪೇಜ್‌ಗೆ ಟ್ಯಾಗ್ ಮಾಡಿರುವ ತರೂರ್ ಅವರು, ನನ್ನಂತರವರ ತೆರಿಗೆ ಹಣದಲ್ಲಿ ಅಧಿಕಾರಿಗಳನ್ನು ಕಾರ್ಯನಿರತವಾಗಿಟ್ಟಿದ್ದಕ್ಕೆ ಧನ್ಯವಾದಗಳು, ಇದರ ಹೊರತು ನಿಮಗೆ ಮುಖ್ಯವಾದುದು ಏನೂ ಇಲ್ಲವೇ ಎಂದು ಅವರು ವ್ಯಂಗ್ಯ ಮಾಡಿದ್ದಾರೆ.

ಸದ್ಯ ನಗದು ವಿಚಾರಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಮಹುವಾ ಅವರು ಪ್ರಸ್ತುತ ಸಂಸತ್ತಿನ ನೈತಿಕ ಸಮಿತಿಯಿಂದ ತನಿಖೆ ಎದುರಿಸುತ್ತಿದ್ದಾರೆ. ಉದ್ಯಮಿ ಗೌತಮ್ ಅದಾನಿ ಅವರ ಪರ ಲೋಕಸಭೆಯಲ್ಲಿ ಪ್ರಶ್ನೆ ಮಾಡಿದಕ್ಕಾಗಿ ಉದ್ಯಮಿ ದರ್ಶನ್ ಹಿರಾನಂದಾನಿ ಅವರ ಆಜ್ಞೆಯ ಮೇರೆಗೆ ಟಿಎಂಸಿ ನಾಯಕರು ನಗದು ಸ್ವೀಕರಿಸಿದ್ದಾರೆ ಎಂದು ನಿಶಿಕಾಂತ್ ದುಬೆ ಆರೋಪಿಸಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ