ಕೇಂದ್ರ ಸರ್ಕಾರವೇ ಅಡಿಕೆ, ಆಮದು ಮಾಡಿಕೊಳ್ಳಲು ಅನುಮತಿ ನೀಡುತ್ತಿದೆ ; ಕಾಂಗ್ರೆಸ್ ಆರೋಪ..!
ಲೋಕಸಭೆ ಚುನಾವಣೆಗೆ ಕೌಂಟ್‌ಡೌನ್ ಶುರುವಾಗಿರುವ ಸಮಯದಲ್ಲೇ ಬಿಜೆಪಿ & ಕಾಂಗ್ರೆಸ್ ನಾಯಕರ ನಡುವೆ ಫೈಟಿಂಗ್ ಕೂಡ ಬಲು ಜೋರಾಗಿದೆ. ಒಂದು ಕಡೆ ಬಿಜೆಪಿ ನಾಯಕರು ಕೇಂದ್ರ ಸರ್ಕಾರದ ಸಾಧನೆ ನೋಡಿ, 2024 ರಲ್ಲಿ ಮತ್ತೊಮ್ಮೆ ಬಿಜೆಪಿಗೆ ಓಟ್ ಹಾಕಬೇಕೆಂಬ ಮನವಿ ಮುಂದಿಡುತ್ತಿದ್ದಾರೆ. ಆದ್ರೆ ಇದೇ ಸಮಯದಲ್ಲಿ ಕಾಂಗ್ರೆಸ್ ಬೇರೆಯದ್ದೇ ಅಸ್ತ್ರವನ್ನು ಪ್ರಯೋಗ ಮಾಡಿದೆ.
ಕೇಂದ್ರ ಸರ್ಕಾರ ಅಡಕೆ, ಕಾಳು ಮೆಣಸು ಸೇರಿದಂತೆ ಹಲವು ಕೃಷಿ ಉತ್ಪನ್ನಗಳನ್ನ ಆಮದು ಮಾಡಿಕೊಳ್ಳಲು ಅನುಮತಿ ನೀಡುತ್ತಿದೆ. ಹೀಗಾಗಿ ಕರ್ನಾಟಕದ ರೈತರು ಸೇರಿದಂತೆ ಭಾರತದ ಕೃಷಿಕರಿಗೆ ಅನ್ಯಾಯ ಆಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಹೀಗಿದ್ದಾಗಲೇ ಕರ್ನಾಟಕ ಕಾಂಗ್ರೆಸ್ ಕೂಡ ಬಿಜೆಪಿ ನಾಯಕರು & ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧ ಹೊಸ ಅಸ್ತ್ರ ಪ್ರಯೋಗ ಮಾಡಿದೆ. ಅಲ್ಲದೆ ಈ ಮೂಲಕ 2024ರ ಲೋಕಸಭೆಗೂ ಮೊದಲು ಭರ್ಜರಿ ಆರೋಪದ ಬಾಂಬ್ ಸಿಡಿಸಿದೆ. ಪ್ರಧಾನಿ ಮೋದಿ ನೇತೃತ್ವದ ಸರ್ಕಾರವನ್ನ & ಕರ್ನಾಟಕ ಬಿಜೆಪಿ ನಾಯಕರನ್ನೂ ಹೀಗೆ ಕಾಂಗ್ರೆಸ್ ಟೀಕೆ ಮಾಡಿದೆ! ಹಾಗಾದರೆ ಇದೀಗ ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಮಾಡಿದ ಆರೋಪ ಏನು?
ಅಡಕೆ, ಕಾಳು ಮೆಣಸು..
ಈ ಕುರಿತು ಇದೀಗ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ‘ಮಲೆನಾಡು, ಕರಾವಳಿ ಭಾಗದ ರೈತರ ಮೇಲೆ ಕೇಂದ್ರ ಬಿಜೆಪಿ ಸರ್ಕಾರದ ಪ್ರಹಾರ. ಕಾಳು ಮೆಣಸು ಬೆಳೆಗಾರರ ಹಿತ ಕಡೆಗಣಿಸಿ ಆಮದು ಮಾಡಿಕೊಳ್ಳಲು ಅನುವು ಮಾಡಿಕೊಟ್ಟ ಕೇಂದ್ರ ಸರ್ಕಾರ ಈಗ ದೊಡ್ಡ ಪ್ರಮಾಣದಲ್ಲಿ ಅಡಿಕೆ ಅಮದಿಗೂ ಅವಕಾಶ ಮಾಡಿಕೊಟ್ಟಿದೆ. ಅಡಿಕೆ ಬೆಳೆಯ ಪ್ರದೇಶದಿಂದ ಆಯ್ಕೆಯಾದ ಬಿಜೆಪಿ ಸಂಸದರು ಬೆಳೆಗಾರರ ಪರ ನಿಲ್ಲದೆ ಕಂಪೆನಿಗಳ ಲಾಭಿಗೆ ಮಣಿದು ಮೌನ ವಹಿಸಿದ್ದಾರೆ.’ ಎಂದು ಕರ್ನಾಟಕ ಬಿಜೆಪಿ ನಾಯಕರ ವಿರುದ್ಧ ಈಗ ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.