ಬಂಟ್ವಾಳ ಶಾಸಕ ರಾಜೇಶ್ ನಾಯ್ಕ ರವರಿಗೆ ಡಿಕ್ಕಿಯಾಗಿ ಪರಾರಿಯಾದ ಕಾರು ಚಾಲಕ ಪೊಲೀಸ್ ವಶಕ್ಕೆ...!
ಮಂಗಳೂರು: ನಗರದ ತೆಂಕ ಎಡಪದವಿನಲ್ಲಿ ಬಂಟ್ವಾಳ ಬಿಜೆಪಿ ಶಾಸಕ ರಾಜೇಶ್ ನಾಯ್ಕ್ ಅವರಿಗೆ ಕಾರೊಂದು ಡಿಕ್ಕಿಯಾಗಿ ನಿಲ್ಲದೆ ಪರಾರಿಯಾದ ಘಟನೆ ನಡೆದಿದೆ.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ರವಿವಾರ ಮಧ್ಯಾಹ್ನ ಮಕರ ಸಂಕ್ರಮಣದ ನಿಮಿತ್ತ ಎಡಪದವು ಗೋಪಾಲಕೃಷ್ಣ ದೇವಸ್ಥಾನಕ್ಕೆ ತೆರಳಿ ಪೂಜೆ ಮುಗಿಸಿ ವಾಪಾಸ್ ಆಗುತ್ತಿದ್ದರು. ದೇವಸ್ಥಾನದ ಮುಂಭಾಗದಿಂದ ಕಾಲ್ನಡಿಗೆಯಲ್ಲಿ ಬರುತ್ತಿದ್ದ ಅವರು ರಸ್ತೆ ದಾಟಲು ಯತ್ನಿಸುತ್ತಿದ್ದರು. ಈ ವೇಳೆ ಮೂಡಬಿದಿರೆ ಕಡೆಯಿಂದ ಬರುತ್ತಿದ್ದ ಸ್ವಿಫ್ಟ್ ಕಾರು ಶಾಸಕರಿಗೆ ಢಿಕ್ಕಿಯಾಗಿಯಾಗಿದೆ.
ಅಪಘಾತದ ಬಳಿಕ ಕಾರು ನಿಲ್ಲದೆ ಪರಾರಿಯಾಗಿದೆ. ಕಾರು ಗುದ್ದಿದ ರಭಸಕ್ಕೆ ಶಾಸಕ ರಾಜೇಶ್ ನಾಯ್ಕ್ ಅವರು ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೇ ಶಾಸಕರು ಪಾರಾಗಿದ್ದಾರೆ. ಅವರ ಎರಡು ಮೊಣಕಾಲುಗಳಿಗೆ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಸದ್ಯ ಚಿಕಿತ್ಸೆ ಪಡೆದುಕೊಂಡ ಅವರು ಮನೆಗೆ ವಾಪಾಸ್ ಆಗಿದ್ದಾರೆ. ಡಿಕ್ಕಿಯಾಗಿ ಪರಾರಿಯಾಗಿರುವ ಕಾರನ್ನು ಸ್ಥಳೀಯರು ಗುರುಪುರದಲ್ಲಿ ಹಿಡಿದು ಬಜ್ಪೆ ಪೊಲೀಸರಿಗೊಪ್ಪಿಸಿದ್ದಾರೆ. ಕಾರು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಈ ಬಗ್ಗೆ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನನ್ನ ಮೇಲೆ ಅತ್ಯಾಚಾರ ಎಸಗಿದವರನ್ನು ಬಿಟ್ಟು ಪೊಲೀಸರು ಬೇರೆಯವರನ್ನು ಬಂಧಿಸಿದ್ದಾರೆ: ಸಂತ್ರಸ್ತೆ ಮಹಿಳೆ ಆರೋಪ
ಉತ್ತರ ಕನ್ನಡದ ಶಿರಸಿಯಲ್ಲಿ ಸುದ್ದಿ ಮಾಧ್ಯಮ ಒಂದಕ್ಕೆ ಉತ್ತರಿಸಿದ ಸಂತ್ರಸ್ತೆ ಮಹಿಳೆ, ಅತ್ಯಾಚಾರ ಎಸಗಿದವರ ವಿರುದ್ಧ ಕಠಿಣ ಕ್ರಮ ಆಗಬೇಕು ಎಂದು ಶಿರಸಿಯಲ್ಲಿ ಅತ್ಯಾಚಾರ ಸಂತ್ರಸ್ತ ಮಹಿಳೆ ಹೇಳಿಕೆ ನೀಡಿದ್ದಾಳೆ. ಪ್ರಕರಣದಲ್ಲಿ ಭಾಗಿಯಾಗದ ಇಬ್ಬರನ್ನು ಈಗಾಗಲೇ ಬಂಧಿಸಲಾಗಿದೆ. ವಿಡಿಯೋದಲ್ಲಿರುವವನ ಬಿಟ್ಟು ಬೇಡದೆ ಇರುವವರನ್ನು ತಂದು ಲಾಕಪ್ ನಲ್ಲಿ ಹಾಕಿದ್ದಾರೆ ಎಂದು ಮಹಿಳೆ ತಿಳಿಸಿದ್ದಾಳೆ.
ಒಬ್ಬನಿಗೆ ಆಕ್ಸಿಡೆಂಟ್ ಆಗಿದೆ. ಹಾಗಾಗಿದೆ ಹೀಗಾಗಿದೆ ಎಂದು ಪೊಲೀಸರು ಜೀಪಿನಲ್ಲಿ ಕರೆತರುವಾಗ ಹೇಳುತ್ತಾ ಬಂದಿದ್ದಾರೆ.ನನಗೆ ಪೊಲೀಸರು ಇಬ್ಬರು ಫೋಟೋ ತೋರಿಸಿದರು ಆದರೆ ಅವರಿಬ್ಬರೂ ಅಲ್ಲ. ಆದರೆ ಅವರು ಆರೋಪಿಗಳಲ್ಲ. ಪೊಲೀಸರು ಸ್ಥಳ ಪರಿಶೀಲನೆಗೆ ಅಂತ ಕರೆದೊದಾಗಿ ಹೇಳಿದ್ದರು ಆದರೆ ಶಿರಸಿಯ ಮನೆಗೆ ಕರೆತಂದು ಬಿಟ್ಟು ಹೋಗಿದ್ದಾರೆ ಎಂದು ಹೇಳಿದಳು.
ಉತ್ತರ ಕನ್ನಡದ ಶಿರಸಿಯಲ್ಲಿ ಸಂತ್ರಸ್ತ ಮಹಿಳೆ ಹೇಳಿಕೆ ಕೊಟ್ಟಿದ್ದಾಳೆ.ಕುಟುಂಬದವರಿಗೆ ಯಾವುದೇ ರೀತಿಯಾದಂತಹ ಮಾಹಿತಿ ನೀಡದೆ ಬಿಟ್ಟು ಹೋಗಿದ್ದಾರೆ.ನನಗೆ ಕುಟುಂಬಕ್ಕೆ ಜೀವ ಭಯವಿದ್ದರೂ ರಕ್ಷಣೆಯನ್ನು ನೀಡಿಲ್ಲ.ಮನೆ ಬಳಿ ಯಾವುದೇ ಪೊಲೀಸ್ ಸಿಬ್ಬಂದಿ ಕೂಡ ನಿಯೋಜನೆ ಮಾಡಿಲ್ಲ ಎಂದು ಸಂತ್ರಸ್ತ ಮಹಿಳೆ ತಿಳಿಸಿದ್ದಾಳೆ.