ಸ್ನಾನದ ಕೊಠಡಿಯಲ್ಲಿ ನೇಣಿಗೆ ಶರಣಾದ ವಧು...!
ಶಿವಮೊಗ್ಗ: ಮದುವೆಗೆ (Marriage) 13 ದಿನ ಇರುವಾಗ ಯುವತಿ (Woman) ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗ (Shivamogga) ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕಟ್ಟೆಹಕ್ಲು ಗ್ರಾಮದಲ್ಲಿ ನಡೆದಿದೆ. 26 ವರ್ಷದ ಚೈತ್ರಾ ಮೃತ ಯುವತಿಯಾಗಿದ್ದು, ನೇಣು ಬಿಗಿದುಕೊಂಡು ಯುವತಿ ಸಾವಿಗೆ ಶರಣಾಗಿದ್ದಾಳೆ. ಮನೆಯ ಸ್ನಾನದ ಕೊಠಡಿಯಲ್ಲಿ (Bathroom) ಯುವತಿಯ ಮೃತದೇಹ ನೇಣು ಬೀಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮೃತ ಚೈತ್ರಾ ಅವರಿಗೆ ಫೆಬ್ರವರಿ 4 ರಂದು ವಿವಾಹ ನಿಗದಿಯಾಗಿತ್ತು. ಆದರೆ ಏಕಾಏಕಿ ಯುವತಿ ಸಾವಿಗೆ ಶರಣಾಗಿದ್ದು, ಆತ್ಮಹತ್ಯೆ ಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕುಟುಂಬಸ್ಥರು ಮದುವೆ ಫಿಕ್ಸ್ ಮಾಡಿದ್ದ ಸಮಯದಲ್ಲಿ ಯುವತಿ ಮದುವೆ ಬೇಡವೆಂದು ವಿರೋಧ ಮಾಡಿದ್ದರಂತೆ. ಆದರೆ ಮನೆಯವರು ಯುವತಿ ಮನವೊಲಿಸಿ ಮದುವೆಗೆ ಒಪ್ಪಿಸಿದ್ದರಂತೆ.
ಪೋಷಕರೊಂದಿಗೆ ಮದುವೆ ಬೇಡ ಎಂದು ವಿರೋಧಿಸಿದ್ದ ಯುವತಿ, ನನಗೆ ಆರೋಗ್ಯ ಸಮಸ್ಯೆ ಇದೆ, ಹಾಗಾಗಿ ನನಗೆ ಮದುವೆ ಬೇಡ ಎಂದಿದ್ದಳಂತೆ. ಇನ್ನು ಚೈತ್ರಾ ಎಂಕಾಂ ಪದವಿ ಪೂರ್ಣಗೊಳಿಸಿದ್ದಾರೆ. ಕಟ್ಟೆಹಕ್ಲಿನ ರಾಮಕೃಷ್ಣ ಮೆಡಿಕಲ್ ನಲ್ಲಿ ಯುವತಿ ಕೆಲಸ ಮಾಡ್ತಿದ್ದರಂತೆ. ಘಟನಾ ಸ್ಥಳಕ್ಕೆ ತೀರ್ಥಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.