ಸಚಿವ ರಾಮಲಿಂಗಾರೆಡ್ಡಿ ಮನೆಯ ಎದುರೇ ವ್ಯಕ್ತಿಯ ಬರ್ಬರ ಹತ್ಯೆ...!
ಬೆಂಗಳೂರು : ಸಚಿವ ರಾಮಲಿಂಗಾರೆಡ್ಡಿ (Ramalingareddy) ಮನೆಯ ಎದುರೇ ವ್ಯಕ್ತಿಯ ಬರ್ಬರ ಹತ್ಯೆ ಮಾಡಿರುವಂತಹ ಘಟನೆ ನಗರದ ಲಕ್ಕಸಂದ್ರದಲ್ಲಿ ಸಂಜೆ ಏಳು ಗಂಟೆ ಸುಮಾರಿಗೆ ನಡೆದಿದೆ. ಜೈಪ್ರಕಾಶ್ ಅಲಿಯಾಸ್ ನಾಯಿ ಅಪ್ಪಿ ಮೃತ ವ್ಯಕ್ತಿ. 2006ರಲ್ಲಿ ಕೊಲೆ ಪ್ರಕರಣವೊಂದರಲ್ಲಿ ಜೈಪ್ರಕಾಶ್ ಆರೋಪಿಯಾಗಿದ್ದ. ಹಳೆ ದ್ವೇಷ ಹಿನ್ನೆಲೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಘಟನಾ ಸ್ಥಳಕ್ಕೆ ಆಡುಗೋಡಿ ಠಾಣೆಯ ಪೊಲೀಸರು ದೌಡಾಯಿಸಿದ್ದಾರೆ.
ಇಂದು ಹನುಮಜಯಂತಿ ಹಿನ್ನೆಲೆ ಲಕ್ಕಸಂದ್ರ ಬಸ್ ನಿಲ್ದಾಣ ಬಳಿಯ ಆಂಜಿನೇಯ ದೇವಸ್ಥಾನದ ಅನ್ನದಾನ ಕಾರ್ಯಕ್ರಮದಲ್ಲಿ ಮೃತ ಜೈಪ್ರಕಾಶ್ ಭಾಗಿಯಾಗಿದ್ದ. ಈ ವೇಳೆ ಕೆಲ ಹೊತ್ತು ಜೈ ಪ್ರಕಾಶ್ನನ್ನ ನಾಲ್ಕೈದು ಜನ ಆರೋಪಿಗಳು ಅಬ್ಸರ್ವ್ ಮಾಡಿದ್ದಾರೆ.
ಐದು ತಂಡ ರಚಿಸಿ ಆರೋಪಿಗಳ ಹುಡುಕಾಟ: ಡಿಸಿಪಿ ಸಿಕೆ ಬಾಬ
ಆಗ್ನೇಯ ವಿಭಾಗದ ಡಿಸಿಪಿ ಸಿಕೆ ಬಾಬ ಹೇಳಿಕೆ ನೀಡಿದ್ದು, ಸಂಜೆ 6.30-6.40ಸುಮಾರಿಗೆ ಘಟನೆ ನಡೆದಿದೆ. ಜಯಪ್ರಕಾಶ್ ಎಂಬಾತ ಸಂಜೆ ಅನ್ನದಾನ ಕಾರ್ಯಕ್ರಮ ಮಾಡುತ್ತಿದ್ದ. ಅಲ್ಲಿಂದ ಓಡಿಸ್ಕೊಂಡು ಬಂದು ನಾಲ್ಕರಿಂದ ಐದು ಜನ ಆರೋಪಿಗಳು ಹೋಟೆಲ್ ಒಳಗಡೆ ಹತ್ಯೆ ಮಾಡಿದಾರೆ. ಈ ಹಿಂದೆ 2005-6ರಲ್ಲಿ ಕೊಲೆಯಾದವನ ಮೇಲೆ ಕೇಸ್ ಇದೆ.
ಅದಾದ ಮೇಲೆ ಈತ ಆಟೋ ಓಡಿಸ್ಕೊಂಡು ಬೇರೆ ಏರಿಯಾದಲ್ಲಿ ವಾಸವಾಗಿದ್ದ. ಈ ಹಿಂದೆ ಮರ್ಡರ್ ಕೇಸ್ ಒಂದರಲ್ಲಿ ಭಾಗಿಯಾಗಿದ್ದ. ನಂತರ ಆ್ಯಕ್ಟೀವ್ ಆಗಿರುವುದರ ಬಗ್ಗೆ ಮಾಹಿತಿ ಸದ್ಯಕ್ಕಿಲ್ಲ. ಹಳೆ ದ್ವೇಷ ಹಿನ್ನೆಲೆ ಕೊಲೆ ಮಾಡಿರುವ ಶಂಕೆ ಇದೆ. ಐದು ತಂಡ ರಚಿಸಿ ಆರೋಪಿಗಳ ಪತ್ತೆಗೆ ಹುಡುಕಾಟ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಲವ್ ಬಗ್ಗೆ ಪ್ರಶ್ನಿಸಿದ್ದಕ್ಕೆ ಪ್ರಿಯತಮೆ ಬೆಂಕಿ ಹಚ್ಚಿದ ಪ್ರಕರಣ; ಆರೋಪಿ ಬಂಧನ
ಬೆಂಗಳೂರು : ಕಾನ್ಸ್ಟೇಬಲ್ ಪ್ರಿಯಕರನಿಗೆ ಪ್ರಿಯತಮೆಯೇ ಬೆಂಕಿ ಹಚ್ಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪುಟ್ಟೇನಹಳ್ಳಿ ಪೊಲೀಸರು (Puttenahalli Police Station) ಆರೋಪಿ ರಾಣಿ ಎಂಬುವವರನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ತಾನು ಸಂಜಯ್ಗೆ ಬೆಂಕಿ ಹಚ್ಚಿಲ್ಲವೆಂದು ಹೇಳಿಕೆ ನೀಡಿದ್ದು, ಮೃತ ಸಂಜಯ್ ಹಾಗೂ ನನ್ನ ಮಧ್ಯೆ ಜಗಳವಾಗಿತ್ತು. ಈ ವೇಳೆ ನಿನ್ನ ಸಾಯಿಸುತ್ತೇನೆ ಎಂದು ಸಂಜಯ್ ಬೆದರಿಕೆ ಹಾಕಿದ್ದ. ಈ ನಡುವೆ ಆತನೇ ಹೋಗಿ ಬಾಟಲ್ನಲ್ಲಿ ಒಂದು ಲೀಟರ್ ಪೆಟ್ರೋಲ್ ತಂದು ಆತನೇ ಪೆಟ್ರೋಲ್ ಸುರಿದುಕೊಂಡು ಬೆಂಕಿ ಕಡ್ಡಿ ಗೀಚಿ ಬೆದರಿಕೆ ಹಾಕಿದ್ದ. ಆ ವೇಳೆ ಬೆಂಕಿ ಆಕಸ್ಮಿಕವಾಗಿ ಸಂಜಯ್ ಗೆ ತಗಲಿತ್ತು ಎಂದು ರಾಣಿ ಹೇಳಿದ್ದಾರೆ.
ಸದ್ಯ FSL ನಿಂದ ರಿಪೋರ್ಟ್ ಬಂದ ಬಳಿಕ ಘಟನೆಗೆ ಸ್ಪಷ್ಟ ಕಾರಣ ಸಿಗಲಿದೆ
ಇನ್ನು ಈ ಘಟನೆಯ ಕುರಿತು ಬಂಧಿತ ಆರೋಪಿಯನ್ನು ವಿಚಾರಣೆ ಮಾಡಿದ ಪೊಲೀಸರು, ಸದ್ಯ ಎಫ್ಎಸ್ಎಲ್ನಿಂದ ರಿಪೋರ್ಟ್ ಬಂದ ಬಳಿಕ ಘಟನೆಗೆ ಸ್ಪಷ್ಟ ಕಾರಣ ಸಿಗಲಿದೆ ಎಂದಿದ್ದಾರೆ. ಇನ್ನು ಹೋಮ್ ಗಾರ್ಡ್ ಆಗಿದ್ದ ರಾಣಿಗೆ ಸಂಜಯ್ ಮಾತ್ರವಲ್ಲದೆ ಬೇರೊಬ್ಬನ ಜೊತೆ ಸಲುಗೆ ಇದ್ದಿದ್ದೇ ಈ ಘಟನೆಗೆ ಕಾರಣ ಎನ್ನಲಾಗಿದೆ. ಈ ಕುರಿತು ಪುಟ್ಟೇನಹಳ್ಳಿ ಪೊಲೀಸರಿಂದ ತನಿಖೆ ಮುಂದುವರೆದಿದೆ.
ಘಟನೆ ವಿವರ
ಪೇದೆಯಾಗಿರುವ ಸಂಜಯ್ ಮತ್ತು ಹೋಂಗಾರ್ಡ್ ಆಗಿರುವ ರಾಣಿ ಇಬ್ಬರೂ ಕೂಡ ಬಸವನಗುಡಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಇಬ್ಬರ ಮಧ್ಯೆ ಪ್ರೇಮಾಂಕುರ ಬೆಳೆದಿದೆ. ಮದುವೆಯಾಗಿದ್ದರೂ ಕೂಡ ಕಾನ್ಸ್ಟೇಬಲ್ ಜೊತೆ ಕೆಲವು ತಿಂಗಳಿಂದ ರಾಣಿ ಪ್ರೀತಿಸುತ್ತಿದ್ದಳು. ಇತ್ತೀಚೆಗೆ ಸಂಜಯ್ನನ್ನು ರಾಣಿ ನಿರ್ಲಕ್ಷ್ಯಿಸಲು ಆರಂಭಿಸಿದ್ದಾಳೆ. ಹೀಗಾಗಿ 2 ದಿನಗಳ ಹಿಂದೆ ಆಕೆ ಮನೆಗೆ ಸಂಜಯ್ ಹೋಗಿದ್ದಾಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಮತ್ತೊಬ್ಬನೊಂದಿಗೆ ಪ್ರೀತಿಯಲ್ಲಿರುವ ವಿಚಾರವನ್ನು ಪ್ರಶ್ನಿಸಿದ್ದ ಸಂಜಯ್ಗೆ ರಾಣಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಳು ಎನ್ನಲಾಗಿತ್ತು. ಕೂಡಲೇ ಸಂಜಯ್ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾದರೂ, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದ. ಈ ಕುರಿತು ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.