ಮಂಗಳವಾರ, ಡಿಸೆಂಬರ್ 5, 2023
ರಾಜ್ಯದ 13 ಭ್ರಷ್ಟ ಅಧಿಕಾರಿಗಳಿಗೆ ಸೇರಿದ 63 ಕಡೆ ಲೋಕಾಯುಕ್ತ ದಾಳಿ ; ಕೋಟಿ ಕೋಟಿ ಹಣ ಸೀಝ್..!-ಬೆಂಗಳೂರಿನ ಮನೆಯನ್ನೇ 100 ಕೋಟಿಗೆ ಅಡವಿಟ್ಟು ಸಿಬ್ಬಂದಿಗಳಿಗೆ ವೇತನ ನೀಡಿದ ಬೈಜೂಸ್ ಸಂಸ್ಥಾಪಕ!-ಅರ್ಜುನನ ಅಂತ್ಯಕ್ರಿಯೆ ವೇಳೆ ಪ್ರತಿಭಟನೆ: ಪೊಲೀಸರಿಂದ ಲಾಠಿ ಚಾರ್ಜ್!-ಬಿಜೆಪಿ ಮುಖಂಡ ಪೃಥ್ವಿಸಿಂಗ್​ಗೆ ಚಾಕು ಇರಿತ: ದೂರು ದಾಖಲು!-ಕಾಲೇಜು ಕಟ್ಟಡದ ಮೇಲಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು!-ಕರ್ನಾಟಕ ಹೈಕೋರ್ಟ್ ಕಲಾಪದಲ್ಲಿ ವಿಡಿಯೋ ಕಾನ್ಫರೆನ್ಸ್ ಆ್ಯಪ್​ನಲ್ಲಿ ಅಶ್ಲೀಲ ದೃಶ್ಯ ಅಪ್​ಲೋಡ್..!-ಆಹಾರ ಧಾನ್ಯಗಳ ಮೂಟೆಯಡಿ ಸಿಲುಕಿ ಐವರು ಕಾರ್ಮಿಕರ ಸಾವು-ಸಿಐಡಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಫ್ರೆಡ್ರಿಕ್ಸ್ ಖ್ಯಾತಿಯ ನಟ ದಿನೇಶ್ ಫಡ್ನಿಸ್ ಹೃದಯಾಘಾತದಿಂದ ನಿಧನ.!-ನಾಯಿ ಬೊಗಳಿದಕ್ಕೆ ಗಲಾಟೆ; ಆ್ಯಸಿಡ್​ ಎರಚಿದ ದಂಪತಿ!-ಮರಕ್ಕೆ ಬಸ್ ಡಿಕ್ಕಿ 14 ಜನ ಸಾವು, 20 ಮಂದಿ ಗಾಯ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಇಸ್ರೇಲ್ ನ ಮ್ಯೂಸಿಕಲ್ ಫೆಸ್ಟಿವಲ್ ಗೆ ನುಗ್ಗಿ ನೂರಾರು ಮಂದಿಯನ್ನು ಕೊಂದು ಅಪಹರಿಸಿದ ಉಗ್ರರು; ಇಲ್ಲಿದೆ ವಿಡಿಯೋ

Twitter
Facebook
LinkedIn
WhatsApp
ಇಸ್ರೇಲ್ ನ ಮ್ಯೂಸಿಕಲ್ ಫೆಸ್ಟಿವಲ್ ಗೆ ನುಗ್ಗಿ ನೂರಾರು ಮಂದಿಯನ್ನು ಕೊಂದು ಅಪಹರಿಸಿದ ಉಗ್ರರು; ಇಲ್ಲಿದೆ ವಿಡಿಯೋ

ಅವರು ವೀಕೆಂಡ್ ಮಸ್ತಿಯಲ್ಲಿ ಮುಳುಗಿದ್ದರು, ಮ್ಯೂಸಿಕ್ ಹಾಕಿಕೊಂಡು ವಾರದ ಅಷ್ಟೂ ನೋವು ಮರೆತು ಎಂಜಾಯ್ ಮಾಡುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ಆಕಾಶದಲ್ಲಿ ರಾಕೆಟ್ ಹಾರಿ ಹೋದವು. ಆಗಲೇ ಅವರೆಲ್ಲಾ ಎಚ್ಚೆತ್ತುಕೊಂಡು ಜಾಗ ಖಾಲಿ ಮಾಡಿದ್ದರೆ ಬಚಾವ್ ಆಗಿ ತಮ್ಮ ಜೀವ ಉಳಿಸಿಕೊಳ್ತಿದ್ದರು ಅಂತಾ ಕಾಣುತ್ತೆ. ಇಷ್ಟೆಲ್ಲಾ ನಡೆದರೂ ಮೈಮರೆತು ಕೇರ್ ಮಾಡದೆ ಡಾನ್ಸ್ ಮಾಡುತ್ತಿದ್ದವರ ಹೆಣ ಕೆಡವಿದ್ದಾರೆ ರಾಕ್ಷಸ ಉಗ್ರರು.

 
 

ಎಲ್ಲೆಲ್ಲೂ ಚೆಲ್ಲಾಡಿರುವ ರಕ್ತ, ಸ್ಫೋಟಗೊಂಡು ಚೆಲ್ಲಾಪಿಲ್ಲಿ ಆಗಿರುವ ಕಾರುಗಳು. ಇದು ಇಸ್ರೇಲ್ ಮೇಲೆ ಹಮಾಸ್ ಉಗ್ರರು ನಡೆಸಿರುವ ದಾಳಿಯ ಭೀಕರ ದೃಶ್ಯ. ಅದ್ರಲ್ಲೂ ಪಾಪಿ ಉಗ್ರರ ದಾಳಿಯ ಭಯಾನಕತೆ ಬಿಂಬಿಸುವಂತೆ ಮ್ಯೂಸಿಕ್ ಫೆಸ್ಟಿವಲ್ ನಡೆಯುತ್ತಿದ್ದ ಜಾಗ ಇದೀಗ ಸ್ಮಶಾನವಾಗಿ ಬದಲಾಗಿದೆ. ಅಂದಹಾಗೆ ಹಮಾಸ್ ಉಗ್ರರ ಗ್ಯಾಂಗ್ ಇಸ್ರೇಲ್ ಮೇಲೆ ದಾಳಿ ಮಾಡಿದ ವೇಳೆ, ಗಾಜಾ ಪಟ್ಟಿಯಿಂದ ಕೇವಲ 14 ಕಿ.ಮೀ ದೂರದಲ್ಲಿನ ಕಿಬ್ಬುಟ್ಸ್ ಎಂಬ ಮರುಭೂಮಿಯಲ್ಲಿ ಮ್ಯೂಸಿಕ್ ಫೆಸ್ಟಿವಲ್ ನಡೆಯುತ್ತಿತ್ತು. ಆಗಲೇ ನೋಡಿ ಅಲ್ಲಿಗೆ ನುಗ್ಗಿದ್ದು ಗನ್ ಹಿಡಿದ ಈ ಹಮಾಸ್ ಬಂಡುಕೋರರ ಗ್ಯಾಂಗ್.

1 62 sixteen nine

ಮ್ಯೂಸಿಕ್ ಫೆಸ್ಟಿವಲ್ ಸ್ಮಶಾನವಾಯ್ತು!

ಅಂದಹಾಗೆ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ಜಾಗಕ್ಕೆ ಯಾವಾಗ ಹಮಾಸ್ ಉಗ್ರಪಡೆ ನುಗ್ಗಿತ್ತೋ, ಆಗಲೇ ನೋಡಿ ರಕ್ತಪಾತ ನಡೆದಿತ್ತು. ಇಡೀ ಇಸ್ರೇಲ್ ಮೇಲೆ ಮೊನ್ನೆ ನಡೆದ ದಾಳಿ ಒಂದು ಕಡೆಯಾದರೆ, ಮ್ಯೂಸಿಕ್ ಫೆಸ್ಟಿವಲ್ ಮೇಲೆ ನಡೆದಿರುವ ದಾಳಿ ಮತ್ತೊಂದು ಭಯಾನಕ ಅಧ್ಯಾಯ ಬಿಡಿಸಿಟ್ಟಿದೆ. ಈ ಪ್ರದೇಶಕ್ಕೆ ಗಾಜಾ ಪಟ್ಟಿಯಿಂದ ನುಗ್ಗಿ ಬಂದಿದ್ದ ಹಮಾಸ್, ಕಂಡ ಕಂಡವರ ಮೇಲೆ ದಾಳಿ ಮಾಡಿದೆ. ಘಟನೆಯಲ್ಲಿ ನೂರಾರು ಇಸ್ರೇಲ್‌ನ ನಾಗರಿಕರು ಮೃತಪಟ್ಟಿದ್ದು, ಸುಮಾರು 260ಕ್ಕೂ ಹೆಚ್ಚು ಶವ ಇಲ್ಲಿ ತನಕ ಪತ್ತೆಯಾಗಿವೆ.

ಉಗ್ರರಿಂದ 30 ಜನರ ಅಪಹರಣ?

ಹಮಾಸ್ ಉಗ್ರರು ಕೇವಲ ಜೀವ ತೆಗೆದಿಲ್ಲ, ಇದರ ಜೊತೆಗೆ ಹಲವರನ್ನು ಅಪಹರಿಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಅಲ್ಲದೆ ಇದಕ್ಕೆ ಸಾಕ್ಷಿಯಾಗಿ, ಹತ್ತಾರು ವಿದ್ಯಾರ್ಥಿಗಳು ಮತ್ತು ಇಸ್ರೇಲ್ ಪ್ರಜೆಗಳನ್ನೂ ಹಮಾಸ್ ಉಗ್ರರು ಅಪಹರಣ ಮಾಡಿದ್ದಾರೆ. ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಇಸ್ರೇಲಿ ವಿದ್ಯಾರ್ಥಿನಿಯನ್ನ ಹಮಾಸ್ ಬಂಡುಕೋರರು ಕಿಡ್ನಾಪ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ. ಹೀಗೆ ಸುಮಾರು 30 ಜನ ಹಮಾಸ್ ಉಗ್ರರ ವಶದಲ್ಲಿರುವ ಆರೋಪ ಕೇಳಿಬಂದಿದೆ.

ಯುದ್ಧ ಶುರುವಾಗಿದ್ದು ಯಾವಾಗ?

ಶನಿವಾರ ಹಮಾಸ್ ಉಗ್ರ ಪಡೆ, ಇಸ್ರೇಲ್‌ನ ಕಡೆಗೆ 5000ಕ್ಕೂ ಹೆಚ್ಚು ರಾಕೆಟ್‌ನ್ನ ಒಂದೇ ಬಾರಿಗೆ ಉಡಾಯಿಸಿತ್ತು. ಅಲ್ಲದೆ ಸಾವಿರಾರು ಉಗ್ರರು ಕೈಯಲ್ಲಿ ಭಾರಿ ಶಸ್ತ್ರಾಸ್ತ್ರ & ಬಾಂಬ್‌ ಹಿಡಿದು ಇಸ್ರೇಲ್ ಒಳಗೆ ನುಗ್ಗಿದ್ದರು. ಹೀಗೆ ಗಾಜಾಪಟ್ಟಿಯ ಮೂಲಕ ಹಮಾಸ್ ಉಗ್ರರು ಇಸ್ರೇಲ್‌ನ ಒಳಗೆ ಬರುವಾಗ, ಇಸ್ರೇಲ್‌ನ ಮ್ಯೂಸಿಕ್ ಫೆಸ್ಟಿವಲ್ ಜಾಗ ಸುಮಾರು 14 ಕಿ.ಮೀ. ದೂರ ಇತ್ತು. ಮೊದಲು ಅಲ್ಲಿಗೆ ನುಗ್ಗಿದ ಉಗ್ರರು ಮನಸ್ಸಿಗೆ ಬಂದಂತೆ ಹಿಂಸೆ ನಡೆಸಿದ್ದಾರೆ. ಇದು ಮಾತ್ರವಲ್ಲದೆ ಇಸ್ರೇಲ್‌ನ ವಿವಿಧೆಡೆ ಹಮಾಸ್ ನಡೆಸಿದ ದಾಳಿಗೆ, ಇಸ್ರೇಲ್‌ನಲ್ಲಿ ಈವರೆಗೂ 500ಕ್ಕೂ ಹೆಚ್ಚು ಜನರು ಬಲಿಯಾಗಿರುವ ಆರೋಪ ಕೇಳಿಬಂದಿದೆ. ಹಾಗೂ ಎರಡೂ ಕಡೆ 1000ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ

ಇರಾನ್ ಬೆಂಬಲದಿಂದ ಉಗ್ರರ ದಾಳಿ?

ಹಮಾಸ್ ಉಗ್ರರು ಇಷ್ಟೊಂದು ಭೀಕರ ದಾಳಿ ನಡೆಸಲು ಶಸ್ತ್ರಾಸ್ತ್ರಗಳು ಬಂದಿದ್ದು ಎಲ್ಲಿಂದ ಎಂಬ ಪ್ರಶ್ನೆ ಜಗತ್ತನ್ನೇ ಕಾಡುತ್ತಿದೆ. ಮತ್ತೊಂದು ಕಡೆ ಇರಾನ್ ವಿರುದ್ಧ ಆರೋಪ ಇದೀಗ ಕೇಳಿಬರುತ್ತಿದೆ. ಅಲ್ಲದೆ ಹಮಾಸ್ ದಾಳಿ ನಡೆಸಿದ್ದ ದಿನ ಇರಾನ್ ಸೇನಾ ಕಮಾಂಡರ್ ಈ ದಾಳಿಯನ್ನ ಸಮರ್ಥಿಸಿಕೊಂಡಿದ್ದರು. ಹೀಗಾಗಿ ಇರಾನ್ ಕೈವಾಡ ಇದೆ ಎಂಬ ಆರೋಪದ ಮಧ್ಯೆ, ಇಸ್ರೇಲ್‌ಗೆ ಅಮೆರಿಕ ಬೆಂಬಲ ನೀಡಿದೆ. ಸಾವಿರಾರು ಕೋಟಿ ರೂಪಾಯಿ ಸಹಾಯ ಮಾಡಿರುವ ಅಮೆರಿಕ, ಇಸ್ರೇಲ್‌ಗೆ ಬೇಕಾದ ಶಸ್ತ್ರಾಸ್ತ್ರಗಳನ್ನು ಪೂರೈಸಲು ಮುಂದಾಗಿದೆ. ಈ ಮೂಲಕ ಮತ್ತೊಂದು ಘೋರ ಯುದ್ಧಕ್ಕೆ ಜಗತ್ತು ಸಜ್ಜಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ