ಚಿತ್ರದುರ್ಗ: ಇಲ್ಲಿನ ವಿಜಯಪುರ ಗೊಲ್ಲರಹಟ್ಟಿ ಗ್ರಾಮದ ಬಳಿ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂರು ತಿಂಗಳ ಮಗು ಸೇರಿ ಬೆಂಗಳೂರಿನ ಮೂವರು ದಾರುಣ ಸಾವಿಗೀಡಾಗಿರುವ ಘಟನೆ ನಡೆದಿದೆ.
ಭೀಕರ ಅಪಘಾತ ಲಾರಿಗೆ ಕಾರು ಡಿಕ್ಕಿ - 3 ತಿಂಗಳ ಮಗು ಸೇರಿ ಮೂವರು ಸಾವು
Twitter
Facebook
LinkedIn
WhatsApp
ಮೂರು ತಿಂಗಳ ಮಗು ಫಾತಿಮಾ, ತಾಯಿ ತಬ್ಸೂಮ್ ಹಾಗೂ ಸಂಬಂಧಿ ಜಾಕೀರ್ ಅಹ್ಮದ್ ಮೃತ ದುರ್ದೈವಿಗಳು. ಇವರು ಬೆಂಗಳೂರಿನ ಹೆಚ್‌ಎಸ್‌ಆರ್ ಬಡಾವಣೆ ನಿವಾಸಿಗಳು ಎಂದು ತಿಳಿದು ಬಂದಿದೆ.
ನಯಾಜ್, ಇಮ್ರಾನ್ ಖಾನ್, ತಬ್ರೀಜ್ ಅಹಮ್ಮದ್, ಸಬಾ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇವರೆಲ್ಲ ಗೋವಾದಿಂದ ಬೆಂಗಳೂರಿಗೆ ಹಿಂದಿರುಗುವಾಗ ಭೀಕರ ಅಪಘಾತ ಸಂಭವಿಸಿದೆ. ಕಾರು ಚಾಲಕನ ನಿಯಂತ್ರಣ ತಪ್ಪಿ ಮುಂದೆ ಸಾಗುತ್ತಿದ್ದ ಲಾರಿಗೆ ಅಪ್ಪಳಿಸಿದೆ. ಸ್ಥಳದಲ್ಲೇ ಮೂವರು ದುರ್ಮಣಕ್ಕೀಡಾದರು. ಗಂಭೀರ ಗಾಯಗೊಂಡಿರುವ ಉಳಿದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.