30 ನಿಮಿಷದಲ್ಲಿ 90 ಎಂಲ್‌ನ ಹತ್ತು ಪ್ಯಾಕೆಟ್ ಮದ್ಯ ಕುಡಿಯುವಂತೆ ಚಾಲೆಂಜ್; ವ್ಯಕ್ತಿ ಸಾವು!

ಹೊಳೆನರಸೀಪುರ ಸೆಪ್ಟೆಂಬರ್ 20: ಡ್ರಿಂಕ್ಸ್ ಚಾಲೆಂಜ್ ನಲ್ಲಿ ಅತಿ ಹೆಚ್ಚು ಮದ್ಯ ಸೇವಿಸಿದ್ದ ವ್ಯಕ್ತಿ ರಕ್ತಕಾರಿ ಸಾವನಪ್ಪಿದ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕು ಸಿಗರನಹಳ್ಳಿ ಗ್ರಾಮದಲ್ಲಿ ವರದಿಯಾಗಿದೆ.
ಮೃತ ವ್ಯಕ್ತಿಯನ್ನು ತಿಮ್ಮೇಗೌಡ (60) ಎಂದು ಗುರುತಿಸಲಾಗಿದೆ. ಗ್ರಾಮದ ಬಸ್ ನಿಲ್ದಾಣದಲ್ಲಿ ದೇವರಾಜು ಹಾಗೂ ತಿಮ್ಮೇಗೌಡರ ನಡುವೆ ಮೂವತ್ತು ನಿಮಿಷದಲ್ಲಿ 90 ಎಂಲ್‌ನ ಹತ್ತು ಪ್ಯಾಕೆಟ್ ಮದ್ಯ ಕುಡಿಯುವ ಪಂಥ ಕಟ್ಟಿದ್ದರು. ಇಬ್ಬರಿಗೂ ಕೃಷ್ಣೇಗೌಡ ಮದ್ಯದ ಪ್ಯಾಕೆಟ್‌ಗಳನ್ನು ನೀಡಿದ್ದ ಎಂದು ಆರೋಪಿಸಲಾಗಿದೆ.
ಚಾಲೆಂಜ್‌ಗಾಗಿ ಮದ್ಯ ಕುಡಿದು ರಕ್ತ ವಾಂತಿ ಮಾಡಿಕೊಂಡ ತಿಮ್ಮೇಗೌಡ ವಾಂತಿ ಮಾಡುತ್ತಲೇ ಬಸ್ ನಿಲ್ದಾಣದಲ್ಲೇ ಬಿದ್ದಿದ್ದ. ಈ ವೇಳೆ ಸ್ಥಳದಿಂದ ದೇವರಾಜು ಮತ್ತು ಕೃಷ್ಣೇಗೌಡ ಪರಾರಿಯಾಗಿದ್ದರು ಎಂದು ದೂರಲಾಗಿದೆ. ಕುಡಿದು ಬಿದ್ದಿದ್ದ ತಿಮ್ಮೇಗೌಡನ ಶವವನ್ನು ಗ್ರಾಮಸ್ಥರು ಆತನ ಮನೆಗೆ ತಂದಿದ್ದಾರೆ. ಕೃಷ್ಣಗೌಡ ಮತ್ತು ದೇವರಾಜ್ ಸ್ಥಳದಿಂದ ಪರಾರಿಯಾಗಿದ್ದಾರೆ. ಇನ್ನು ತಲೆಮರೆಸಿಕೊಂಡಿರುವ ದೇವರಾಜ್ ಹಾಗೂ ಕೃಷ್ಣೇಗೌಡ ಎಂಬುವವರ ವಿರುದ್ಧ ಹೊಳೆನರಸೀಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದೊಡ್ಡಬಳ್ಳಾಪುರ ಪೊಲೀಸರ ಕಾರ್ಯಾಚರಣೆ- ರಾಷ್ಟ್ರ ಪಕ್ಷಿ ನವಿಲು ಬೇಟೆಯಾಡಿದ ಇಬ್ಬರ ಬಂಧನ..!
ದೊಡ್ಡಬಳ್ಳಾಪುರ : ರಾಷ್ಟ್ರೀಯ ಪಕ್ಷಿ ನವಿಲು ಬೇಟೆಯಾಡಿದ ಇಬ್ಬರನ್ನು ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಬಾಲಾಜಿ (42) ಮತ್ತು ಶ್ರೀನಿವಾಸ್ (45) ಬಂಧಿತ ಆರೋಪಿಗಳಾಗಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಅರಳುಮಲ್ಲಿಗೆ ಪೆಟ್ರೋಲ್ ಬಂಕ್ ಬಳಿ ಈ ಆರೋಪಿಗಳು ಮೂರು ನವಿಲುಗಳನ್ನು ಬೇಟೆಯಾಡಿದ್ದು ಈ ಮೂವರು ಕೂಡ ಆಂಧ್ರಪ್ರದೇಶದ ಮೂಲದವರು ಎಂದು ತಿಳಿದು ಬಂದಿದೆ.
ರಾತ್ರಿ ಗಸ್ತು ತಿರುಗುವ ವೇಳೆ ಆರೋಪಿಗಳ ಮೇಲೆ ಸಂಶಯ ಬಂದು ಅವರ ದ್ವಿಚಕ್ರ ವಾಹನವನ್ನು ತಪಾಸಣೆ ಮಾಡಿದಾಗ ಚೀಲದಲ್ಲಿ ಮೂರು ನವಿಲುಗಳು ಪತ್ತೆಯಾಗಿವೆ.
ಕೂಡಲೇ ಆರೋಪಿಗಳನ್ನು ವಶಕ್ಕೆ ಪಡೆದ ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲೀಸರು ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಿದ್ದಾರೆ.