ಟೀಂ ಇಂಡಿಯಾದ ಓಪನಿಂಗ್ ಸ್ಟಾರ್ ಬ್ಯಾಟ್ಸ್ಮನ್ ನಿವೃತ್ತಿ ಸಾಧ್ಯತೆ ; ಕಾದ್ರೂ ಸಿಗಲಿಲ್ಲ ವಿಶ್ವಕಪ್ ಚಾನ್ಸ್...!
ಅಕ್ಟೋಬರ್ 5 ನಿನ್ನೆಯಿಂದ ಐಸಿಸಿ ಏಕದಿನ ವಿಶ್ವಕಪ್ ಆರಂಭಗೊಂಡಿದ್ದು ಭಾರತ ತಂಡ ಕೂಡ ಬಲಿಷ್ಠವಾಗಿ ತಾಯಿಯಾದೆಯನ್ನು ಮಾಡಿದೆ.ಈ ಬಾರಿ ವಿಶ್ವಕಪ್ ಗೆದ್ದೇ ಗೆಲ್ಲುತ್ತೇವೆ ಅನ್ನೋ ಪಣ ತೊಟ್ಟಿದೆ. ಕೊಹ್ಲಿ, ರೋಹಿತ್ ಶರ್ಮಾ, ಜಡೇಜಾರಂತಹ ಸೀನಿಯರ್ ಆಟಗಾರರು ತಂಡದಲ್ಲಿದ್ದಾರೆ.
ಆದರೆ 5 ವರ್ಷದಿಂದ ಏಕದಿನ ಪಂದ್ಯದಲ್ಲಿ ಚಾನ್ಸ್ ಸಿಗುತ್ತೆ ಅಂತ ಕಾಯ್ತಿದ್ದ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್ ನಿವೃತ್ತಿ ತೆಗೆದುಕೊಳ್ಳುವುದಕ್ಕೆ ಡಿಸೈಡ್ ಮಾಡಿದ್ದಾರಂತೆ.
ಟೆಸ್ಟ್ ಹಾಗೂ ಐಪಿಎಲ್ ಫಾರ್ಮೆಟ್ನಲ್ಲಿ ಈ ಆಟಗಾರ ಅದ್ಭುತವಾಗಿ ಆಡಿದ್ರೂ, ಇವರ ಲಕ್ ಯಾಕೋ ಚೆನ್ನಾಗಿಲ್ಲ ಅನ್ಸುತ್ತೆ. ಟೆಸ್ಟ್ನಲ್ಲಿ ಇವರಿಗೆ ಬೇರೆ ಹೆಸರೇ ಇದೆ. ಆದರೆ ಅಜಿಂಕ್ಯಾ ರಹಾನೆ ಈಗ ನಿವೃತ್ತಿ ಘೋಷಿಸುವುದಕ್ಕೆ ಡಿಸೈಡ್ ಮಾಡಿದ್ದಾರೆ.
ಹೌದು, 2018ರಲ್ಲಿ ಅಜಿಂಕ್ಯಾ ರಹಾನೆ ಕಡೆಯದಾಗಿ ಏಕದಿನ ಪಂದ್ಯ ಆಡಿದ್ರು. ಅಂದಿನಿಂದ ಇಂದಿನವರೆಗೂ ಟೀಂ ಇಂಡಿಯಾದಲ್ಲಿ ಇವರಿಗೆ ಚಾನ್ಸ್ ಸಿಗಬಹುದಾ ಅಂತ ಕಾಯುತ್ತಲೇ ಇದ್ದರು. ಆದ್ರೀಗ ಸಮಯ ಮೀರಿದೆ. ಇವರೊಬ್ಬರೇ ಅಲ್ಲ, ಇವರ ಜೊತೆಗೆ ಟೀಂ ಇಂಡಿಯಾದ ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್ ಕೂಡ ನಿವೃತ್ತಿ ಘೋಷಿಸುವ ಸಾಧ್ಯತೆ ಹೆಚ್ಚಿದೆ. ಯಾಕಂದ್ರೆ ಟೀಂ ಇಂಡಿಯಾದಲ್ಲಿ ಆರಂಭಿಕರಾಗಿ ಹಲವು ಯುವ ಆಟಗಾರರು ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ.
ಹೀಗಾಗಿ ಅಜಿಂಕ್ಯಾ ರಹಾನೆ, ಶಿಖರ್ ಧವನ್, ಭುವನೇಶ್ವರ್ ಕುಮಾರ್, ಆರ್ ಅಶ್ವಿನ್ ಇನ್ನೇನು ಕೆಲವೇ ದಿನಗಳಲ್ಲಿ ನಿವೃತ್ತಿ ಘೋಷಿಸುವ ಸಾಧ್ಯತೆ ಹೆಚ್ಚಿದೆ ಅಂತ ಹೇಳಲಾಗ್ತಿದೆ.