Tata Nexon: ಭಾರತೀಯ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದ ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್ ಬಿಡುಗಡೆ!

ದೇಶೀಯ ವಾಹನ ತಯಾರಕ ಸಂಸ್ಥೆಯಾದ ಟಾಟಾ ತನ್ನ ನವೀನ ಕಾರುಗಳ ಮೂಲಕ ಗ್ರಾಹಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದರ ಜೊತೆಗೆ ತನ್ನ ಕಾರುಗಳಿಗೆ ಹೊಸ ರೂಪ, ನವೀಕರಣದ ಸ್ಪರ್ಶದೊಂದಿಗೆ ಟಾಟಾ ಮಾರುಕಟ್ಟೆಗೆ ಪರಿಚಯಿಸುತ್ತಿವೆ. ಅಂತೆಯೇ ಈಗ ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ನೆಕ್ಸಾನ್ ಫೇಸ್‌ಲಿಫ್ಟ್‌ನ ಎಕ್ಸ್‌ಶೋರೂಮ್ ಬೆಲೆ 8.10 ಲಕ್ಷ ರೂಪಾಯಿಗಳಿಂದ ಆರಂಭವಾಗುತ್ತದೆ. ನೆಕ್ಸಾನ್ ಫೇಸ್‌ಲಿಫ್ಟ್‌ಗಾಗಿ ಈಗಾಗಲೇ ಬುಕ್ಕಿಂಗ್ ಆರಂಭವಾಗಿದೆ. 21,000 ರೂಪಾಯಿ ಆರಂಭಿಕ ಮೊತ್ತವನ್ನು ಪಾವತಿಸಿ ಈ ಹೊಸ ಎಸ್‌ಯುವಿಯನ್ನು ಬುಕ್ ಮಾಡಿಕೊಳ್ಳಬಹುದಾಗಿದೆ.

ಎಂಜಿನ್ ಸಾಮರ್ಥ್ಯ
ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್ ಅದೇ 1.2-ಲೀಟರ್ ಮೂರು-ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಈ ಎಂಜಿನ್ 120 ಎಚ್‌ಪಿ ಗರಿಷ್ಟ ಶಕ್ತಿ ಮತ್ತು 170 Nm ಗರಿಷ್ಠ ಟಾರ್ಕ್ ಅನ್ನು ಹೊರಹಾಕುತ್ತದೆ. ಇದರ ಜೊತೆಗೆ 1.5-ಲೀಟರ್ ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್ ಆಯ್ಕೆಯನ್ನೂ ಇದು ಹೊಂದಿದೆ. ಈ ಎಂಜಿನ್ 115 ಎಚ್‌ಪಿ ಗರಿಷ್ಟ ಶಕ್ತಿ ಮತ್ತು 260 ನ್ಯೂಟನ್ ಮೀಟರ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹಳೆಯ ಮಾದರಿಯ ನೆಕ್ಸಾನ್‌ನಲ್ಲಿ ಇರುವಂತೆ 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳನ್ನು ಮುಂದುವರಿಸಿಕೊಂಡು ಹೋಗಲಾಗುತ್ತಿದೆ. ಇದರ ಜೊತೆಗೆ ಹೆಚ್ಚುವರಿಯಾಗಿ ಹೊಸ ನೆಕ್ಸಾನ್ ಪೆಟ್ರೋಲ್ ಎಂಜಿನ್ ಈಗ ಪ್ರವೇಶ ಮಟ್ಟದ ರೂಪಾಂತರಗಳಿಗಾಗಿ 5-ಸ್ಪೀಡ್ ಮ್ಯಾನ್ಯುವಲ್ ಮತ್ತು ಹೊಸ 7-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಅನ್ನೂ ಹೊಂದಿದೆ.

ಬೆಲೆಯ ವಿವರ :
1.2-ಲೀಟರ್ ಪೆಟ್ರೋಲ್ ಮ್ಯಾನ್ಯುವಲ್ ವೇರಿಯೆಂಟ್‌ನ ಎಕ್ಸ್‌ಶೋರೂಮ್ ಬೆಲೆ ಇಂತಿದೆ
ಸ್ಮಾರ್ಟ್ : 8.10 ಲಕ್ಷ ರೂಪಾಯಿ
ಸ್ಮಾರ್ಟ್ ಪ್ಲಸ್ : 9.10 ಲಕ್ಷ ರೂಪಾಯಿ
ಪ್ಯೂರ್ : 9.70 ಲಕ್ಷ ರೂಪಾಯಿ
ಕ್ರಿಯೇಟಿವ್ : 11 ಲಕ್ಷ ರೂಪಾಯಿ
ಕ್ರಿಯೇಟಿವ್ ಪ್ಲಸ್ : 11.70 ಲಕ್ಷ ರೂಪಾಯಿ
ಫಿಯರ್‌ಲೆಸ್ : 12.50 ಲಕ್ಷ ರೂಪಾಯಿ
ಫಿಯರ್‌ಲೆಸ್ ಪ್ಲಸ್ : 13 ಲಕ್ಷ ರೂಪಾಯಿ
| Image Courtesy : cars.tatamotors.com
ವಿನ್ಯಾಸದ ವಿಷಯದಲ್ಲಿ ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್ ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ಇದು ಟಾಟಾ ಕರ್ವ್ವ್ ಪರಿಕಲ್ಪನೆಯಿಂದ ಪ್ರೇರಿತವಾಗಿದೆ. ಮರುವಿನ್ಯಾಸಗೊಳಿಸಲಾದ ಡಿಆರ್‌ಎಲ್‌ಗಳು, ಹೆಡ್‌ಲೈಟ್‌ಗಳ ಜೊತೆಗೆ ಈಗ ಪರಿಷ್ಕೃತ ಮುಂಭಾಗದ ಬಂಪರ್ ಹೌಸಿಂಗ್ ಬೈ-ಫಂಕ್ಷನಲ್ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳನ್ನು ಇದು ಹೊಂದಿದೆ.

ವೈಶಿಷ್ಟ್ಯಗಳು
