ತಮಿಳುನಾಡು : ಮಾಜಿ ಸಚಿವ ಕೆ. ಪೊನ್ಮುಡಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿದ ಮದ್ರಾಸ್ ಹೈಕೋರ್ಟ್...!
ಚೆನ್ನೈ: ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ತಮಿಳುನಾಡಿನ ಮಾಜಿ ಸಚಿವ ಕೆ. ಪೊನ್ಮುಡಿಯವರಿಗೆ ಮದ್ರಾಸ್ ಹೈಕೋರ್ಟ್ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಇದರ ಜತೆಗೆ ನ್ಯಾಯಾಲಯವು ಪೊನ್ಮುಡಿ ಮತ್ತು ಅವರ ಪತ್ನಿಗೆ ತಲಾ ₹ 50 ಲಕ್ಷ ದಂಡ ವಿಧಿಸಿದೆ.
₹ 1.75 ಕೋಟಿ ಅಕ್ರಮ ಆಸ್ತಿ ಪ್ರಕರಣದಲ್ಲಿ ಕೆ ಪೊನ್ಮುಡಿ ಅವರಿಗೆ ಮದ್ರಾಸ್ ಹೈಕೋರ್ಟ್ ಗುರುವಾರ 3 ವರ್ಷಗಳ ಸರಳ ಜೈಲು ಶಿಕ್ಷೆ ವಿಧಿಸಿದೆ.
2011ರ ಪ್ರಕರಣ ಇದಾಗಿದ್ದು, 2016ರಲ್ಲಿ ಕೆಳ ನ್ಯಾಯಾಲಯವು ಪೊನ್ಮುಡಿಯನ್ನು ಖುಲಾಸೆಗೊಳಿಸಿತ್ತು. ಇದನ್ನು ಡಿ. 19ರಂದು ಮದ್ರಾಸ್ ಹೈಕೋರ್ಟ್ ರದ್ದು ಮಾಡಿ, ದೋಷಿ ಎಂದು ಸಾರಿತ್ತು.
ತಮ್ಮನಿಗೆ ಕಿಡ್ನಿ ದಾನ ಮಾಡಿದ್ದನ್ನು ತಿಳಿಸಿದ್ದಕ್ಕೆ ಪತ್ನಿಗೆ ಪತಿ ತಲಾಖ್
ಲಕ್ನೋ: ತಮ್ಮನಿಗೆ ಕಿಡ್ನಿ ದಾನ ಮಾಡಿದ ವಿಚಾರವನ್ನು ಪತಿಗೆ ತಿಳಿಸುತ್ತಿದ್ದಂತೆಯೇ ಆತ ಪತ್ನಿಗೆ ತಲಾಖ್ (Talaq) ನೀಡಿರುವು ಪ್ರಕರಣವೊಂದು ಬೆಳಕಿಗೆ ಬಂದಿದೆ.
ಉತ್ತರಪ್ರದೇಶದ (Uttarapradesh) ಬೈರಿಯಾಹಿ ಗ್ರಾಮದ ಮಹಿಳೆಗೆ ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿರುವ ಪತಿ ತಲಾಖ್ ನೀಡಿದ್ದಾನೆ. ಮಹಿಳೆಯ ತಮ್ಮ ಅನಾರೋಗ್ಯದಿಂದ ಬಳಲುತ್ತಿದ್ದನು. ತನ್ನ ಸಹೋದರನನ್ನು ಉಳಿಸಿಕೊಳ್ಳುವ ಸಲುವಾಗಿ ಮಹಿಳೆ ತನ್ನ ಒಂದು ಕಿಡಿಯನ್ನು ದಾನ ಮಾಡಿದ್ದಾರೆ. ಇದಾದ ಬಳಿಕ ಮೆಸೇಜ್ ಮಾಡುವ ಮೂಲಕ ಪತಿಗೆ ವಿಚಾರ ತಿಳಿಸಿದ್ದಾರೆ.
ಈ ಸಂಬಂಧ ಮಹಿಳೆ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಮಹಿಳೆ ನೀಡಿದ ದೂರಿನಲ್ಲಿ ಪೊಲೀಸರು ಕೂಡ ಪ್ರಕರಣ ದಾಖಲಿಸಿಕೊಂಡಿದ್ದು, ಕಾನೂನಿನಡಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ತ್ರಿವಳಿ ತಲಾಖ್ ಪದ್ಧತಿಯನ್ನು 2019 ರಲ್ಲಿ ದೇಶದಲ್ಲಿ ಕಾನೂನುಬಾಹಿರ ಮತ್ತು ಅಸಂವಿಧಾನಿಕ ಎಂದು ಘೋಷಿಸಲಾಗಿದೆ. ಮುಸ್ಲಿಂ ಮಹಿಳೆಯರ (ವಿವಾಹದ ಮೇಲಿನ ಹಕ್ಕುಗಳ ರಕ್ಷಣೆ) ಕಾಯ್ದೆಯಡಿ ತ್ರಿವಳಿ ತಲಾಖ್ ಅನ್ನು ನಿಷೇಧಿಸಲಾಗಿದೆ. ಪ್ರಕರಣ ಕಂಡಬಂದಲ್ಲಿ ಮೂರು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ.