T20 ವಿಶ್ವಕಪ್ 2024: ಐತಿಹಾಸಿಕ ಗೆಲುವಿನೊಂದಿಗೆ ಸೆಮಿಫೈನಲ್ಗೇರಿದ ಅಫ್ಘಾನಿಸ್ತಾನ; ಆಸ್ಟ್ರೇಲಿಯಾ ಔಟ್!
T20 ವಿಶ್ವಕಪ್ 2024: ಬಾಂಗ್ಲಾದೇಶ ವಿರುದ್ಧದ ನಾಟಕೀಯ ಮಳೆ-ಬಾಧಿತ ಸೂಪರ್ 8 ಪಂದ್ಯಾಟದಲ್ಲಿ ಅಫ್ಘಾನಿಸ್ತಾನವು 8 ರನ್‌ಗಳಿಂದ (DLS ವಿಧಾನದ ಮೂಲಕ) ನಾಟಕೀಯ ಜಯ ಸಾಧಿಸಿತು. ಈ ಮೂಲಕ ಟೂರ್ನಿಯಾ ಬಲಿಷ್ಠ ತಂಡ ಆಸ್ಟ್ರೇಲಿಯಾಕೆ ತೀವ್ರ ನಿರಾಸೆಯಾಗಿದೆ. ಹಾಗೆಯೇ ಸೆಮಿ ಫೈನಲ್ ಕೂಟದಿಂದ ಆಸ್ಟ್ರೇಲಿಯಾ ತಂಡ ಹೊರ ಬಿದ್ದಿದೆ.
ಮಂಗಳವಾರ ಸೇಂಟ್ ವಿನ್ಸೆಂಟ್‌ನಲ್ಲಿ ನಡೆದ ತಮ್ಮ ಕೊನೆಯ ಸೂಪರ್-8 ಪಂದ್ಯದಲ್ಲಿ ತಂಡದ ನಾಯಕ ರಶೀದ್ ಖಾನ್ ಅವರ ಅದ್ಭುತ ಪಾತ್ರದ ಮೇಲೆ ಸವಾರಿ ಮಾಡುತ್ತಿರುವ ಅಫ್ಘಾನಿಸ್ತಾನವು ಬಾಂಗ್ಲಾದೇಶದ ವಿರುದ್ಧ ತಮ್ಮ 20 ಓವರ್‌ಗಳ ಅಂತ್ಯಕ್ಕೆ 115/5 ಗಳಿಸುವಲ್ಲಿ ಯಶಸ್ವಿಯಾಗಿದೆ. ರಶೀದ್ 10 ಎಸೆತಗಳಲ್ಲಿ 19 ರನ್ ಗಳಿಸಿದರು, ಮೂರು ಸಿಕ್ಸರ್‌ಗಳು ಸೇರಿದಂತೆ ಅವರ ತಂಡ ಗೌರವಾನ್ವಿತ ಮೊತ್ತವನ್ನು ತಲುಪಲು ಸಹಾಯ ಮಾಡಿದರು.
ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ಅಫ್ಘಾನಿಸ್ತಾನಕ್ಕೆ ರಹಮಾನುಲ್ಲಾ ಗುರ್ಬಾಜ್ ಮತ್ತು ಇಬ್ರಾಹಿಂ ಜದ್ರಾನ್ ಸ್ಥಿರ ಆರಂಭವನ್ನು ನೀಡಿದರು. ಬ್ಯಾಟಿಂಗ್ ಮಾಡಲು ಸುಲಭವಲ್ಲದ ಕಾರಣ ಅವರು ಎಚ್ಚರಿಕೆಯಿಂದ ಆಡಿದರು. ಬಾಂಗ್ಲಾದೇಶದ ಬೌಲರ್‌ಗಳು ಬಿಗಿಯಾದ ಲೈನ್‌ಗಳು ಮತ್ತು ಲೆಂತ್‌ಗಳನ್ನು ಬೌಲ್ ಮಾಡಿದರು.
ಮಳೆ ಬಾಧಿತ ಪಂದ್ಯದಲ್ಲಿ 19 ಓವರ್‌ಗಳಲ್ಲಿ 114 ರನ್ ಗುರಿ ಪಡೆದಿದ್ದ ಬಾಂಗ್ಲಾದೇಶ ತಂಡವು 105 ರನ್‌ಗಳಿಗೆ ಸರ್ವಪತನ ಕಂಡಿದೆ. ಈ ಗೆಲುವಿನೊಂದಿಗೆ ಗ್ರೂಪ್ 1ರಿಂದ ಎರಡನೇ ತಂಡವಾಗಿ ರಶೀದ್ ಖಾನ್ ಪಡೆ ಸೆಮೀಸ್‌ಗೇರಿದರೆ, ಆಸ್ಟ್ರೇಲಿಯಾ ತಂಡದ ಸೆಮೀಸ್ ಕನಸು ನುಚ್ಚುನೂರಾಯಿತು.
ಒಂದು ವೇಳೆ ಇಂದಿನ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವು ಗೆಲುವು ಸಾಧಿಸಿದ್ದರೇ, ಆಸ್ಟ್ರೇಲಿಯಾ ತಂಡವು ಸೆಮೀಸ್‌ಗೇರುತ್ತಿತ್ತು. ಆದರೆ ರಶೀದ್ ಖಾನ್, ನವೀನ್ ಉಲ್ ಹಕ್ ಅವರ ಮಾರಕ ದಾಳಿಯ ನೆರವಿನಿಂದ ಅಲ್ಪ ಮೊತ್ತವನ್ನು ರಕ್ಷಿಸಿಕೊಳ್ಳುವಲ್ಲಿ ಆಫ್ಘಾನಿಸ್ತಾನ ತಂಡವು ಯಶಸ್ವಿಯಾಗಿದೆ.
ಅಫ್ಘಾನಿಸ್ತಾನ ತಂಡ: ರಶೀದ್ ಖಾನ್ (ನಾಯಕ), ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಝದ್ರಾನ್, ಅಜ್ಮತುಲ್ಲಾ ಒಮರ್ಜಾಯ್, ಹಜರತುಲ್ಲಾ ಝಜೈ, ನಜಿಬುಲ್ಲಾ ಝದ್ರಾನ್, ಮೊಹಮ್ಮದ್ ಇಶಾಕ್, ಮೊಹಮ್ಮದ್ ನಬಿ, ಗುಲ್ಬದಿನ್ ನೈಬ್, ಕರೀಂ ಜನತ್, ನಂಗ್ಯಾಲ್ ಖರೋತಿ, ನೂರ್ ಅಹ್ಮದ್, ನೂರ್ ಅಹ್ಮದ್, ನೂರ್ ಅಹ್ಮದ್, ಫರೀದ್ ಅಹ್ಮದ್ ಮಲಿಕ್.
ಬಾಂಗ್ಲಾದೇಶ ತಂಡ : ನಜ್ಮುಲ್ ಹೊಸೈನ್ ಶಾಂಟೊ (ನಾಯಕ), ತಸ್ಕಿನ್ ಅಹ್ಮದ್, ಲಿಟ್ಟನ್ ದಾಸ್, ಸೌಮ್ಯ ಸರ್ಕಾರ್, ತಂಝಿದ್ ಹಸನ್ ತಮೀಮ್, ಶಕೀಬ್ ಅಲ್ ಹಸನ್, ತೌಹಿದ್ ಹೃದಯ್, ಮಹ್ಮುದುಲ್ಲಾ ರಿಯಾದ್, ಜೇಕರ್ ಅಲಿ ಅನಿಕ್, ತನ್ವಿರ್ ಇಸ್ಲಾಂ, ಶಾಕ್ ಮಹೇದಿ ಹಸನ್, ರಿಶಾದ್ ಹುಸೇನ್, ಮುಸ್ತ್ ಹುಸೇನ್ ತಂಜಿಮ್ ಹಸನ್ ಸಾಕಿಬ್.