ಶನಿವಾರ, ಮೇ 18, 2024
ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ-Gold Rate : ಚಿನ್ನದ ಬೆಲೆ ಮತ್ತಷ್ಟು ದುಬಾರಿ.!-ಅಮಿತ್ ಶಾ ಪ್ರಧಾನಿಯಾಗಲು ವೇದಿಕೆ ಸಜ್ಜಾಗಿದೆ; ಹೇಳಿಕೆ ಪುನರುಚ್ಚರಿಸಿದ ಕೇಜ್ರಿವಾಲ್..!-ಮನೆಯ ಬಾತ್ ರೂಂ ನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ.!-ಪತ್ನಿಗೆ ವಿಡಿಯೋ ಕಾಲ್ ಮಾಡಿ ನೇಣು ಬಿಗಿದುಕೊಂಡಂತೆ ಹೆದರಿಸುವಾಗಲೇ ಪತಿ ಸಾವು..!-ಮೇ 31 ರಂದು ಕೇರಳಕ್ಕೆ ಪ್ರವೇಶಿಸಲಿದೆ ನೈರುತ್ಯ ಮುಂಗಾರು.!-ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೈದ ಸಚಿನ್ ತೆಂಡೂಲ್ಕರ್ ಸೆಕ್ಯುರಿಟಿ ಗಾರ್ಡ್.!-Gold Price: ಆಭರಣ ಪ್ರಿಯರಿಗೆ ಇಂದಿನ ಚಿನ್ನ - ಬೆಳ್ಳಿಯ ದರ ಹೇಗಿದೆ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

Swara Bhaskar: ಕಾಂಟ್ರವರ್ಸಿ ನಟಿ ಸ್ವರಾ ಭಾಸ್ಕರ್​ಗೆ ಅವಕಾಶಗಳೇ ಇಲ್ಲ; ಮುಕ್ತವಾಗಿ ಹೇಳಿಕೊಂಡ ಬಾಲಿವುಡ್​ ಬೆಡಗಿ

Twitter
Facebook
LinkedIn
WhatsApp
Swara Bhaskar: ಕಾಂಟ್ರವರ್ಸಿ ನಟಿ ಸ್ವರಾ ಭಾಸ್ಕರ್​ಗೆ ಅವಕಾಶಗಳೇ ಇಲ್ಲ; ಮುಕ್ತವಾಗಿ ಹೇಳಿಕೊಂಡ ಬಾಲಿವುಡ್​ ಬೆಡಗಿ

ನಟಿ ಸ್ವರಾ ಭಾಸ್ಕರ್​ (Swara Bhaskar) ಅವರು ಆಗೊಮ್ಮೆ ಈಗೊಮ್ಮೆ ವಿವಾದ ಮಾಡಿಕೊಳ್ಳುತ್ತಾರೆ. ಸಮಾಜದ ಆಗುಹೋಗುಗಳಿಗೆ ಅವರು ಪ್ರತಿಕ್ರಿಯೆ ನೀಡುತ್ತಾರೆ. ತಮಗೆ ಅನಿಸಿದ್ದನ್ನು ನೇರವಾಗಿ ಹೇಳುವಲ್ಲಿ ಅವರು ಎಂದಿಗೂ ಹಿಂದೇಟು ಹಾಕಿಲ್ಲ. ಆ ಕಾರಣದಿಂದ ಅವರನ್ನು ಅನೇಕರು ದ್ವೇಷಿಸುತ್ತಾರೆ. ಸೋಶಿಯಲ್​ ಮೀಡಿಯಾದಲ್ಲಿ ಸ್ವರಾ ಭಾಸ್ಕರ್​ ಅವರನ್ನು ಸಾಕಷ್ಟು ಟ್ರೋಲ್​ (Troll) ಮಾಡಲಾಗುತ್ತದೆ. ಅಷ್ಟೇ ಅಲ್ಲದೇ ಅವರಿಗೆ ಸಿನಿಮಾ ಅವಕಾಶಗಳು ಕೂಡ ತಪ್ಪಿಹೋಗುತ್ತಿವೆ. ಈ ಬಗ್ಗೆ ಸ್ವತಃ ಸ್ವರಾ ಭಾಸ್ಕರ್​ ಮಾತನಾಡಿದ್ದಾರೆ. ‘ಟೈಮ್ಸ್​ ಆಫ್​ ಇಂಡಿಯಾ’ಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಅವರು ಈ ಕುರಿತು ಹೇಳಿಕೊಂಡಿದ್ದಾರೆ. ತಮ್ಮ ಕೈಯಲ್ಲಿ ಸದ್ಯಕ್ಕೆ ಒಳ್ಳೆಯ ಅವಕಾಶಗಳೇ ಇಲ್ಲ ಎಂದು ಅವರು ಬಾಯಿ ಬಿಟ್ಟಿದ್ದಾರೆ.

Swara Bhaskar and Divya Dutta to play romantic partners in the film Sheer  Kurma! | India Forums

ಸ್ವರಾ ಭಾಸ್ಕರ್​ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು 2009ರಲ್ಲಿ. ‘ತನು ವೆಡ್ಸ್​ ಮನು’, ‘ಪ್ರೇಮ್​ ರಥನ್​ ಧನ್​ ಪಾಯೋ’, ‘ಅನಾರ್ಕಲಿ ಆಫ್​ ಆರಾ’, ‘ವೀರೇ ದಿ ವೆಡ್ಡಿಂಗ್​’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರಿಗೆ ಹೇಳಿಕೊಳ್ಳುವಂತಹ ಅವಕಾಶಗಳು ಸಿಗುತ್ತಿಲ್ಲ. ‘ನನಗೆ ಅತಿ ಇಷ್ಟವಾಗಿರುವ ನಟನೆಯ ವಿಚಾರದಲ್ಲೇ ನಾನು ರಿಸ್ಕ್​ ತೆಗೆದುಕೊಂಡೆ’ ಎಂದು ಸ್ವರಾ ಭಾಸ್ಕರ್​ ಹೇಳಿದ್ದಾರೆ.

‘ನಾನು ಸಮರ್ಥ ನಟಿ. ನನ್ನ ಪ್ರತಿಭೆಗೆ ತಕ್ಕಂತಹ ಅವಕಾಶಗಳು ಬರುತ್ತಿಲ್ಲ. ನನ್ನ ಟ್ರ್ಯಾಕ್​ ರೆಕಾರ್ಡ್​ ಚೆನ್ನಾಗಿದೆ. 6-7 ಸೂಪರ್​ ಹಿಟ್​ ಸಿನಿಮಾಗಳಲ್ಲಿ ನಟಿಸಿದ್ದೇನೆ. ವೆಬ್​ ಸೀರಿಸ್​ಗಳಲ್ಲೂ ಕಾಣಿಸಿಕೊಂಡಿದ್ದೇನೆ. ಕೆಟ್ಟ ವಿಮರ್ಶೆ ಎಂದಿಗೂ ಪಡೆದಿಲ್ಲ. ಚಾನ್ಸ್​ ಸಿಗದೇ ಇರಲು ಏನಾದರೂ ಕಾರಣ ಇರಬೇಕಿತ್ತು. ಆದರೆ ಅವಕಾಶ ಇಲ್ಲ ಎಂಬುದಂತೂ ಸ್ಪಷ್ಟವಾಗಿದೆ’ ಎಂದು ಅವರು ಹೇಳಿದ್ದಾರೆ.

Swara Bhaskar Sexy Photos] स्वरा भास्कर अपनी सेक्सी बॉडी कर रही है फ्लॉन्ट:  तस्वीरें देखें | IWMBuzz हिन्दी

ಸ್ವರಾ ಭಾಸ್ಕರ್​ ಅವರು ಮೊದಲಿನಿಂದಲೂ ಕೇಂದ್ರ ಸರ್ಕಾರದ ಕೆಲವು ವಿಚಾರಗಳನ್ನು ವಿರೋಧಿಸುತ್ತಾ ಬಂದಿದ್ದಾರೆ. ಬಾಲಿವುಡ್​ನಲ್ಲೂ ಅನೇಕರನ್ನು ಅವರು ಎದುರು ಹಾಕಿಕೊಂಡಿದ್ದಾರೆ. ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ ಕುರಿತಂತೆ ಇತ್ತೀಚೆಗೆ ನಡಾವ್​ ಲಪಿಡ್​ ನೀಡಿದ ಹೇಳಿಕೆ ವಿವಾದ ಉಂಟು ಮಾಡಿತ್ತು. ಆಗ ನಡಾವ್​ ಲಪಿಡ್​ ಹೇಳಿಕೆಯನ್ನು ಸ್ವರಾ ಭಾಸ್ಕರ್​ ಬೆಂಬಲಿಸಿದ್ದರು. ಆ ಕಾರಣದಿಂದಲೂ ಅವರು ಟ್ರೋಲ್​ ಆಗುತ್ತಿದ್ದಾರೆ.

ಇತ್ತೀಚೆಗೆ ಸ್ವರಾ ಭಾಸ್ಕರ್​ ಅವರು ‘ಭಾರತ್ ಜೋಡೋ’ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ರಾಹುಲ್​ ಗಾಂಧಿ ಜೊತೆ ಮಧ್ಯ ಪ್ರದೇಶದಲ್ಲಿ ಅವರು ಹೆಜ್ಜೆ ಹಾಕಿ ಸುದ್ದಿ ಆಗಿದ್ದರು. ಸದ್ಯ ಒಂದೆರಡು ಸಿನಿಮಾಗಳು ಅವರ ಕೈಯಲ್ಲಿವೆ. ನಿರೀಕ್ಷಿತ ಮಟ್ಟದಲ್ಲಿ ಅವಕಾಶ ಬರುತ್ತಿಲ್ಲ ಎಂಬ ಬೇಸರ ಅವರದ್ದು.

Swara Bhaskar Sexy Video: Veere Di Wedding Actress Swara Bhaskar Hot Bold  Video in pink top and black jeans Swara Bhaskar Instagram Video: स्वरा  भास्कर की खूबसूरत अदाओं वाला वीडियो, जमकर हो

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ