ಸುಶಾಂತ್ ಸಿಂಗ್ ಸಾವಿಗೆ ಕರಣ್ ಜೋಹರ್ ಮತ್ತು ರಣಬೀರ್ ಕಪೂರ್ ನೇರ ಕಾರಣ - ಕಂಗನಾ ರಣಾವತ್

ಸುಶಾಂತ್ ಸಾವಿಗೆ ‘ಶಕುನಿ’ ಕರಣ್ ಜೋಹರ್ ಮತ್ತು ‘ದುರ್ಯೋಧನ’ ರಣಬೀರ್ ಕಪೂರ್ ಕಾರಣ ಎಂದು ನಟಿ ಕಂಗನಾ ರಣಾವತ್ ಮತ್ತೆ ಗುಡುಗಿದ್ದಾರೆ.
ನಟಿ ಕಂಗನಾ ರಣಾವತ್ ಸ್ವಲ್ಪ ದಿನಗಳು ಸೈಲೆಂಟ್ ಆಗಿದ್ದರು. ಸಿನಿಮಾ, ಶೂಟಿಂಗ್ ಅಂತ ಬ್ಯುಸಿಯಾಗಿದ್ದರು. ಇದೀಗ ಮತ್ತೆ ರೊಚ್ಚಿಗೆದ್ದಿದ್ದಾರೆ. ಕರಣ್ ಜೋಹರ್ ಮತ್ತು ರಣಬೀರ್ ಕಪೂರ್ ಅವನ್ನು ಮತ್ತೆ ತರಾಟೆ ತೆಗೆದುಕೊಂಡಿದ್ದಾರೆ. ಸುಶಾಂತ್ ಸಿಂಗ್ ಸಾವಿನ ಘಟನೆಯನ್ನು ಮತ್ತೆ ಎಳೆದು ತಂದಿರುವ ಕಂಗನಾ ಸುಶಾಂತ್ ಸಾವಿಗೆ ಕರಣ್ ಮತ್ತು ರಣಬೀರ್ ಕಪೂರ್ ಕಾರಣ ಎಂದು ನೇರವಾಗಿ ಹೇಳಿದ್ದಾರೆ. ಅಷ್ಟೆಯಲ್ಲ ಕರಣ್ ಮತ್ತು ರಣಬೀರ್ ಅವರನ್ನು ಶಕುನಿ ಮತ್ತು ದುರ್ಯೋಧನ ಕುಟುಕಿದ್ದಾರೆ.
ಕಂಗನಾ ರಾಮಾಯಣ ಸಿನಿಮಾದ ಕಾಸ್ಟಿಂಗ್ ಬಗ್ಗೆ ಗರಂ ಆಗಿದ್ದರು. ನಿತೇಶ್ ತಿವಾರಿ ಸಾರಥ್ಯದಲ್ಲಿ ಮೂಡಿಬರುತ್ತಿರುವ ರಾಮಾಯಣದಲ್ಲಿ ರಣಬೀರ್ ಕಪೂರ್ ರಾಮನಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಇದರ ಬೆನ್ನಲ್ಲೇ ಕಂಗನಾ ರಣಬೀರ್ ಕಪೂರ್ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಹೆಣ್ಣುಬಾಕ, ಮಾದಕ ವ್ಯಸನಿ ರಣಬೀರ್ ಕಪೂರ್‌ಗೆ ರಾಮನ ಪಾತ್ರನಾ, ಇದೆಂಥ ಕಲಿಯುಗ ಎಂದು ಪ್ರಶ್ನೆ ಮಾಡಿದ್ದರು ಕಂಗನಾ. ಅಷ್ಟಕ್ಕೆ ಸುಮ್ಮನಾಗದೆ ಇದೀಗ ಮತ್ತೆ ರಣಬೀರ್ ವಿರುದ್ಧ ಗುಡುಗಿದ್ದಾರೆ.
ಚಿತ್ರರಂಗದಲ್ಲಿ ಎಲ್ಲಾ ರೀತಿಯ ಬೆದರಿಕೆಗಳಿವೆ. ಈ ದುರ್ಯೋಧನ (ಬಿಳಿ ಇಲಿ) ಮತ್ತು ಶಕುನಿ (ಪಾಪಾ ಜೋ) ಜೋಡಿ. ಅವರು ಹೆಚ್ಚು ಗಾಸಿಪ್, ಅಸೂಯೆ ಮತ್ತು ಅಸುರಕ್ಷಿತ ತಮ್ಮನ್ನು ತಾವು ಒಪ್ಪಿಕೊಳ್ಳುತ್ತಾರೆ. ಅವರು ತಮ್ಮನ್ನು ಚಲನಚಿತ್ರಗಳಲ್ಲಿನ ಗಾಸಿಪ್‌ನ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಎಂದು ಕರೆದುಕೊಳ್ಳುತ್ತಾರೆ. ಇಡೀ ಚಿತ್ರರಂಗಕ್ಕೆ ಇದು ತಿಳಿದಿದೆ, ಸುಶಾಂತ್ ಸಿಂಗ್ ರಜಪೂತ್ ವಿರುದ್ಧದ ಎಲ್ಲಾ ನಕಲಿ ಕುರುಡು ವಸ್ತುಗಳ ಹಿಂದೆ ಅವರೇ ಪ್ರಮುಖ ಶಂಕಿತರು. ಸುಶಾಂತ್ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿತು. ಅವರು ನನ್ನ ವಿರುದ್ಧವೂ ಎಲ್ಲಾ ರೀತಿಯ ಅಸಹ್ಯ ವದಂತಿಗಳನ್ನು ಹರಡಿದರು. ನನ್ನ ಜೀವನ ಮತ್ತು ವೃತ್ತಿಜೀವನದಲ್ಲಿ ಅವರ ಹಸ್ತಕ್ಷೇಪವು ಕಿರುಕುಳವನ್ನು ಮೀರಿದೆ’ ಎಂದು ದೀರ್ಘವಾಗಿ ಬರೆದುಕೊಂಡಿದ್ದಾರೆ.