ಸುರತ್ಕಲ್ :ಟಿಪ್ಪರ್ ಮತ್ತು ಫಾರ್ಚುನರ್ ಕಾರು ನಡುವೆ ಅಪಘಾತ ; ಓರ್ವ ಸ್ಥಳದಲ್ಲೇ ಸಾವು…!!
ಮಂಗಳೂರು : ಸೆಪ್ಟೆಂಬರ್ 30: : ಮಂಗಳೂರು ನಗರದ ಹೊರವಲಯದ ಸುರತ್ಕಲ್ ಹೊಸಬೆಟ್ಟು ಪೆಟ್ರೋಲ್ ಬಂಕ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಕಾರು -ಟಿಪ್ಪರ್ ಅಪಘಾತದಲ್ಲಿ ಓರ್ವ ಸಾವನ್ನಪ್ಪಿ ಮತ್ತಿಬ್ಬರು ಗಂಭೀರ ಗಾಯಗೊಂಡಿದ್ದಾರೆ.
ಶನಿವಾರ ಬೆಳಗ್ಗಿನ ಜಾವ ಸುಮಾರು 3.30 ಗಂಟೆಗೆ ಈ ಅಪಘಾತ ಸಂಭವಿಸಿದೆ.
ತಮಿಳುನಾಡು ನೋಂದಣಿಯ ಕಾರು ಹೆದ್ದಾರಿಯಲ್ಲಿ ನಿಲ್ಲಿಸಿದ್ದ ಟಿಪ್ಪರ್‌ಗೆ ಹಿಂದಿನಿಂದ ಬಡಿದಿ. ಪರಿಣಾಮ ಕಾರು ಚಾಲಕ ಅರ್ಜುನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಸಹ ಪ್ರಯಾಣಿಕ ಮೊಹಮ್ಮದ್ ಫಿಜಾನ್ ಅವರ ತಲೆಯ ಒಳ ಭಾಗಕ್ಕೆ ಗಂಭೀರವಾದ ಗಾಯವಾಗಿದ್ದು, ಮತ್ತೋರ್ವ ಪ್ರಯಾಣಿಕ ಅನಿರುದ್ ನಾಯರ್ ಅವರ ಹಣೆಯ ಮೇಲೆ ಗಾಯವಾಗಿದೆ.
ಕಾರು ಚಾಲಕನ ನಿರ್ಲಕ್ಷ್ಯಮತ್ತು ವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪೊಲೀಸರು ಸಾರ್ವಜನಿಕರ ಸಹಕಾರದಿಂದ ಎರಡು ಗಂಟೆಯ ಪರಿಶ್ರಮದಿಂದ ಕಾರಿನ ಒಳಗೆ ಇದ್ದವರನ್ನು ಹೊರತೆಗೆದಿದ್ದು ಗಂಭೀರ ಗಾಯಗೊಂಡವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಂಚಾರಿ ಉತ್ತರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಆಟವಾಡುತ್ತಿದ್ದಾಗ ಕಾಲು ಜಾರಿ ನಾಲೆಗೆ ಬಿದ್ದು 5ರ ಬಾಲಕಿ ಮೃತ್ಯು..!
ಹಾಸನ: ಆಟವಾಡುತ್ತಿದ್ದಾಗ ಕಾಲುಜಾರಿ ಬಿದ್ದು ಬಾಲಕಿಯೊಬ್ಬಳು ನೀರುಪಾಲಾಗಿರುವ ಘಟನೆ ಹಾಸನದ ಅರಕಲಗೂಡು ತಾಲೂಕಿನ ಮಧುರನಹಳ್ಳಿಯಲ್ಲಿ ನಡೆದಿದೆ.
ರೇವಣ್ಣ ಹಾಗೂ ಭಾಗ್ಯ ದಂಪತಿಯ ಮಗಳು ಸುಪ್ರೀತಾ (5) ಮೃತ ಬಾಲಕಿ ಎಂದು ಗುರುತಿಸಲಾಗಿದೆ.
ಶುಕ್ರವಾರ ಕರ್ನಾಟಕ ಬಂದ್ ಹಿನ್ನಲೆಯಲ್ಲಿ ಶಾಲೆಗೆ ರಜೆ ಇದ್ದ ಕಾರಣ ಬಾಲಕಿ ಮನೆಯಲ್ಲಿದ್ದಳು.
ಆದರೆ ಮಧ್ಯಾಹ್ನದ ವೇಳೆಗೆ ಗ್ರಾಮದ ಸಮೀಪವಿರುವ ನಾಲೆಯ ಬಳಿ ಸ್ನೇಹಿತರೊಂದಿಗೆ ಆಟವಾಡುತ್ತಿದ್ದ ವೇಳೆ ಕಾಲು ಜಾರಿ ನಾಲೆಗೆ ಬಿದ್ದು ಕೊಚ್ಚಿ ಹೋಗಿದ್ದಾಳೆ.
ಹಾರಂಗಿ ಬಲದಂಡೆ ನಾಲೆಯಲ್ಲಿ ದುರ್ಘಟನೆ ಸಂಭವಿಸಿದೆ. ಮಗುವಿನ ಮೃತದೇಹಕ್ಕಾಗಿ ಆರು ಕಿಲೋಮೀಟರ್ ವರೆಗೂ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧಕಾರ್ಯ ನಡೆಸಿದ್ದಾರೆ.
ಆದರೆ ಇದುವರೆಗೂ ಬಾಲಕಿಯ ಮೃತದೇಹ ಪತ್ತೆಯಾಗಿಲ್ಲ.