ರಾಷ್ಟ್ರೀಯ ತ್ರೋಬಾಲ್ ಚಾಂಪಿಯನ್ ಶಿಪ್ ಕರ್ನಾಟಕ ತಂಡಕ್ಕೆ ಆಯ್ಕೆಯಾದ ಬಂಟ್ವಾಳದ ಸೇಕ್ರೆಡ್ ಹಾರ್ಟ್ ಮಡಂತ್ಯಾರು ವಿದ್ಯಾರ್ಥಿನಿ ಸುಪ್ರಿಯಾ!
ಬಂಟ್ವಾಳ ಡಿಸೆಂಬರ್ 09 : ರಾಷ್ಟ್ರೀಯ ತ್ರೋಬಾಲ್ ಚಾಂಪಿಯನ್ ಶಿಪ್ ಪಂದ್ಯದಲ್ಲಿ ಆಡಲು ಕರ್ನಾಟಕ ತಂಡಕ್ಕೆ ಬಂಟ್ವಾಳದ ವಿದ್ಯಾರ್ಥಿನಿ ಸುಪ್ರಿಯಾ ಎಸ್. ಪಿ.ಆಯ್ಕೆ ಯಾಗಿದ್ದಾರೆ.
ಬಂಟ್ವಾಳ ಚೆಂಡ್ತಿಮಾರ್ ನಿವಾಸಿ ಶೀನಾ ಮತ್ತು ಪೂರ್ಣಿಮಾ ದಂಪತಿಗಳ ಪುತ್ರಿ ಸುಪ್ರಿಯಾ ಅವರು ಮಡಂತ್ಯಾರು ಸೆಕ್ರಡ್ ಹಾರ್ಟ್ ಪದವಿ ಪೂರ್ವ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿನಿಯಾಗಿದ್ದಾರೆ.
ದಾರವಾಡದಲ್ಲಿ ನಡೆದ ರಾಜ್ಯ ಮಟ್ಟದ ತ್ರೋಬಾಲ್ ಸ್ಪರ್ಧೆಯಲ್ಲಿ ಭಾಗವಹಿಸಿ ರಾಷ್ಟ್ರೀಯ ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ. ಚೆನ್ನೈನಲ್ಲಿ ನಡೆಯಲಿರುವ 33 ನೇ ತ್ರೋಬಾಲ್ ಚಾಂಪಿಯನ್ ಶಿಪ್ ಪಂದ್ಯದಲ್ಲಿ ಕರ್ನಾಟಕ ತಂಡವನ್ನು ಅವರು ಪ್ರತಿನಿಧಿಸಲಿದ್ದಾರೆ.
ಬಂಟ್ವಾಳ – ಅಕ್ರಮ ಮರಳುಗಾರಿಗೆ ಅಡ್ಡೆ ಮೇಲೆ ಪೊಲೀಸ್ ದಾಳಿ
ಬಂಟ್ವಾಳ ಡಿಸೆಂಬರ್ 09 : ನೇತ್ರಾವತಿ ನದಿ ತೀರದಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೋಲೀಸರು ದಾಳಿ ನಡೆಸಿ ಮರಳನ್ನು ವಶಪಡಿಸಿಕೊಂಡ ಘಟನೆ ಸರಪಾಡಿ ಎಂಬಲ್ಲಿ ನಡೆದಿದೆ.
ಸರಪಾಡಿ ಗ್ರಾಮದ ಬಿಯಪಾದೆ ಮೊಗರೋಡಿ ನೀರಿನ ಟ್ಯಾಂಕ್ ಬಳಿ ನೇತ್ರಾವತಿ ನದಿಯಲ್ಲಿ ಮರಳು ತೆಗೆಯುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ಪೋಲೀಸರು ದಾಳಿ ನಡೆಸಿದಾಗ ನದಿಯಿಂದ ಬುಟ್ಟಿಯಲ್ಲಿ ಮರಳು ತೆಗೆಯುತ್ತಿದ್ದ ನೌಶಾದ್, ಜುಬೇರ್,ಸಂತೋಷ್ ಮತ್ತು ಸಂದೀಪ್ ಎಂಬವರು ಓಡಿ ಹೋಗಿದ್ದಾರೆ. ಆರೋಪಿಗಳು ಅಕ್ರಮವಾಗಿ ಮರಳು ತೆಗೆಯುತ್ತಿದ್ದು, ಒಂದು ಪಿಕಪ್ ಲೋಡಿನಷ್ಟು ಮರಳನ್ನು ರಾಶಿ ಹಾಕಿದ್ದರು. ವಶಪಡಿಸಿಕೊಂಡ ಮರಳಿನ ಮೌಲ್ಯ ರೂಪಾಯಿ 2 ಸಾವಿರ ಎಂದು ಅಂದಾಜಿಸಲಾಗಿದ್ದು, ಅಕ್ರಮ ಮರಳು ತೆಗೆಯುತ್ತಿದ್ದ ಆರೋಪಿಗಳ ಮೇಲೆ ಕಲಂ 379 ರಂತೆ ಕಳವು ಪ್ರಕರಣ ದಾಖಲಾಗಿದೆ.