ರಾಜ್ಯದಲ್ಲಿ ಹೆಚ್ಚಾಗುತ್ತಿದೆ ಬಿಸಿಲಿನ ತಾಪಮಾನ ; ಫೆಬ್ರವರಿ ತಿಂಗಳು ಪೂರ್ತಿ ಇರಲಿದೆ ಒಣಹವೆ..!
ಬೆಂಗಳೂರು ಸೇರಿ ರಾಜ್ಯದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗುತ್ತಲೇ ಇದೆ. ಎಲ್ಲಾ ಕಡೆ ಬಿಸಿಲಿನ ಕಾವು ಏರುತ್ತಿದೆ. ಅಲ್ಲದೇ ಒಣಹವೆ ಸಹ ಮುಂದುವರೆಯಲಿದೆ.\ಇನ್ನೂ 2 ವಾರ ರಾಜ್ಯದಲ್ಲಿ ಬಿಸಿಲು ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೆಲ ಜಿಲ್ಲೆಗಳಲ್ಲಿ ಈಗಾಗಲೇ ತಾಪಮಾನ ಏರಿಕೆಯಾಗಿದೆ.
ಫೆಬ್ರವರಿ ತಿಂಗಳಿನಲ್ಲಿ ಬಿಸಿಲಿನಲ್ಲಿ ಇನ್ನಷ್ಟು ಹೆಚ್ಚಳ ಆಗುವ ಕುರಿತು ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಜನ ಈ ಬಿಸಿಲಿಗೆ ಕಂಗಾಲಾಗುತ್ತಿದ್ದಾರೆ. ಬೆಂಗಳೂರಿನಲ್ಲಿ ಹಗಲಿನಲ್ಲಿ ತಾಪಮಾನವು 33-34 ಲಿ ಅ ಗೆ ಏರಿಕೆ ಆಗಿದೆ. ಈ ವಾತಾವರಣವು ಅತ್ಯಂತ ಬೇಗ ಬೇಸಿಗೆ ಶುರುವಾಗಿ ಬಿಸಿಲಿನಲ್ಲಿ ತೀವ್ರವಾದ ಏರಿಕೆ ಆಗುವ ಸೂಚನೆಯನ್ನು ನೀಡಿದೆ.
ಫೆಬ್ರವರಿಯಲ್ಲೇ ಇಷ್ಟು ಬಿಸಿಲು ಅಂದ್ರೆ ಮಾರ್ಚ್, ಏಪ್ರಿಲ್‍ನಲ್ಲಿ ಇನ್ನಷ್ಟು ಬಿಸಿಲು ಹೆಚ್ಚಾಗುತ್ತೆ ಎಂದು ಅಂದುಕೊಂಡಿದ್ರು. ಆದ್ರೆ ಮಾರ್ಚ್‍ನಲ್ಲಿ ಮಳೆ ಬರಲಿದೆ.
ಜನ ಈಗಾಗಲೇ ತಂಪು ಪಾನೀಯಗಳು ಮೊರೆ ಹೋಗಿದ್ದಾರೆ. ಮಾರ್ಚ್ ಮೊದಲ ವಾರದಲ್ಲೇ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಮಾರ್ಚ್ ತಿಂಗಳಲ್ಲಿ ರಾಜ್ಯದ ಕೆಲವು ಪ್ರದೇಶಗಳಲ್ಲಿ ತಜ್ಞರು ಪೂರ್ವ ಮಾನ್ಸೂನ್ ಮಳೆ ಉತ್ತಮವಾಗುವ ಕುರಿತು ಸಹ ಊಹೆ ವ್ಯಕ್ತಪಡಿಸಿದ್ದಾರೆ.