ಸುಮಲತಾ ಅಂಬರೀಷ್ ಮನವೊಲಿಸುವಲ್ಲಿ ಯಶಸ್ವಿಯಾದ್ರಾ ಕುಮಾರಸ್ವಾಮಿ; ಬೆಂಬಲನಾ? ಬಂಡಾಯಾನಾ..!

ಮಂಡ್ಯ ಲೋಕಸಭಾ ಅಖಾಡ ಮತ್ತಷ್ಟು ರಂಗೇರಿದೆ. ಮಂಡ್ಯ ಬಿಟ್ಟು ಹೋಗಲ್ಲ ಅಂತಾ ಸಸ್ಪೆನ್ಸ್ ಉಳಿಸಿಕೊಂಡಿರುವ ಮಂಡ್ಯ ಹಾಲಿ ಸಂಸದೆ ಸುಮಲತಾ ಅವರ ನಡೆಯಿಂದ ಕಮಲ-ದಳ ದೋಸ್ತಿಗಳಿಗೆ ಟೆನ್ಷನ್ ಶುರುವಾಗಿತ್ತು. ಹೀಗಾಗಿ ಸುಮಲತಾರ ಮನವೊಲಿಕೆಗೆ ಖುದ್ದು ಮೈತ್ರಿ ಅಭ್ಯರ್ಥಿ ಕುಮಾರಸ್ವಾಮಿಯೇ ಅಖಾಡಕ್ಕಿಳಿದ್ದರು.
ಹೌದು, ಸುಮಲಿತಾ ಅವರನ್ನ ಖುದ್ದಾಗಿ ಭೇಟಿ ಮಾಡಿರುವ ಮಾಜಿ ಮುಖ್ಯಮಂತ್ರಿ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಹೆಚ್ ಡಿ ಕುಮಾರಸ್ವಾಮಿ ಅವರು ಮಂಡ್ಯ ಕ್ಷೇತ್ರದಲ್ಲಿ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ. ಈ ವೇಳೆ ಮೋದಿ ಅವರ ಕೈ ಬಲ ಪಡಿಸುವ ನಿಟ್ಟಿನಲ್ಲಿ ಬೆಂಬಲಿಸಿ ಎಂದು ಸುಮಲತಾ ಅವರ ಜೊತೆಗೆ ಕುಮಾರಸ್ವಾಮಿ ಚರ್ಚೆ ನಡೆದಿದ್ದು, ಕೊನೆಗೂ ಸಂಧಾನ ಯಶಸ್ವಿಯಾಗಿದೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ಜೆಡಿಎಸ್ ಕಾರ್ಯಕರ್ತರು ಸಭೆ ನಡೆಯುತ್ತಿದ್ದು ಮಹತ್ವದ ಘೋಷಣೆ ಎಂದು ಬಾಕಿ ಇದೆ. ತೀವ್ರ ಕುತೂಹಲವಾಗಿದ್ದ ಸುಮಲತಾ ಅಂಬರೀಶ್ ನಡೆ, ಕೆಲವೇ ಕ್ಷಣದಲ್ಲಿ ಘೋಷಣೆಯಾಗಲಿದೆ.
2019 ರ ಲೋಕಸಭಾ ಚುನಾವಣೆಯಲ್ಲಿ ಕಳೆದು ಕೊಂಡ ಮಂಡ್ಯ ಕ್ಷೇತ್ರವನ್ನ ಈ ಬಾರಿಯ ಚುನಾವಣೆಯಲ್ಲಿ ವಶಕ್ಕೆ ಪಡೆಯಬೇಕು ಎಂದು ದಳಪತಿಗಳು ಮಾಸ್ಟರ್ ಪ್ಲಾನ್ ನಡೆಸಿದ್ದಾರೆ. ಅದರಂತೆ ಮೈತ್ರಿಯಾಗಿರುವ ಜೆಡಿಎಸ್ ನಾಯಕರು ಆರಂಭದಿಂದಲೂ ಮಂಡ್ಯ ಲೋಕಸಭಾ ಕ್ಷೇತ್ರದ ಮೇಲೆ ಕಣ್ಣೀಟ್ಟಿದ್ದರು. ಅದರಂತೆ ಬಿಜೆಪಿ ಹೈಕಮಾಂಡ್ ನಾಯಕರ ಜೊತೆಗೆ ಚರ್ಚೆ ನಡೆಸಿ, ಪಟ್ಟು ಹಿಡಿದಂತೆ ಮಂಡ್ಯ ಕ್ಷೇತ್ರವನ್ನ ಪಡೆಯುವಲ್ಲಿ ಮೊದಲ ಹಂತದಲ್ಲೇ ಯಶಸ್ವಿಯಾಗಿದ್ದಾರೆ.
ಇನ್ನೂ ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಕಣದಲ್ಲಿದ್ದು, ಮಂಡ್ಯದಲ್ಲಿ ಮತ್ತೆ ಸುಮಾಲಾತಾ ಸ್ಪರ್ಧೆ ಮಾಡುತ್ತಾರಾ ಎನ್ನುವ ಟೆನ್ಷನ್ ಶುರುವಾಗಿತ್ತು. ಆದರೆ, ಕುಮಾರಸ್ವಾಮಿ ಅವರು ಸುಮಲತಾ ಅವರ ಜೊತೆಗೆ ಮಾತುಕತೆ ನಡೆಸಿದ್ದು, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಸುಮಾಲತಾ ಸ್ಪರ್ಧೆ ಮಾಡುವುದಿಲ್ಲ ಎಂದು ತಿಳಿದು ಬಂದಿದೆ. ಇನ್ನೂ ಸುಮಲತಾ ಅಂಬರೀಶ್ ಅವರನ್ನ ಮನವೊಲಿಸುವಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಯಶಸ್ವಿಯಾಗಿದ್ದು, ಮುನಿಸು ಮರೆತು ಮೈತ್ರಿ ಧರ್ಮ ಪಾಲಿಸಲು ಕುಮಾರಸ್ವಾಮಿ ಪರ ಪ್ರಚಾರ ನಡೆಸಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಾರಿ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ನನ್ನ ಬೆಂಬಲಿಸಿ. ಮುಂದಿನ ದಿನಗಳಲ್ಲಿ ಪುತ್ರ ಅಭಿಷೇಕ್ ರಾಜಕೀಯ ಭವಿಷ್ಯ ನಾನು ನೋಡಿಕೊಳ್ಳುತ್ತೇನೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಹೆಚ್ ಡಿ ಕುಮಾರಸ್ವಾಮಿ ಅವರು ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಮಂಡ್ಯದಲ್ಲಿ ಕಾಂಗ್ರೆಸ್ ಸೋಲಿಸಲು ನನಗೆ ನೀವು ಸಹಕಾರಿಸಿ, ಅಂಬರೀಶ್ ಅವರಿಗೆ ರಾಜಕೀಯವಾಗಿ ಕಾಂಗ್ರೆಸ್ ಅನ್ಯಾಯ ಮಾಡಿದೆ. ನಾವು ಇಬ್ಬರು ಒಟ್ಟಾಗಿ ಕೆಲಸ ಮಾಡಿದ್ರೆ ಮಂಡ್ಯ ಕಾಂಗ್ರೆಸ್ ನಿರ್ನಾಮ ಮಾಡಬಹುದು. ಅಂಬರೀಶ್ ಮತ್ತು ನಮ್ಮ ಕುಟುಂಬದ ನಡುವೆ ಉತ್ತಮ ಸಂಬಂಧವಿತ್ತು. ಅದೇ ಸಂಬಂಧವನ್ನ ನಾವು ಮುಂದುವರೆಸಿಕೊಂಡು ಹೋಗಬೇಕು ಎಂದು ಕುಮಾರಸ್ವಾಮಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಮಂಡ್ಯದಲ್ಲಿ ಹೆಚ್ಚಿನ ಅಭಿವೃದ್ಧಿ ಇಬ್ಬರು ಜೊತೆಗೆ ಕೆಲಸ ಮಾಡೋಣ. ದೇಶದಲ್ಲಿ ಮೋದಿ ಗೆಲುವಿಗೆ ಇಬ್ಬರು ಜೊತೆಗೆ ಕೆಲಸ ಮಾಡೋಣ, ಮುಂದೆ ನಿಮ್ಮನ್ನ ರಾಜ್ಯಸಭೆಗೆ ಕಳುಹಿಸಲು ನಾನು ಬಿಜೆಪಿ ನಾಯಕರು ಜೊತೆಗೆ ಮಾತನಾಡುತ್ತೇನೆ, ನಿಮ್ಮ ರಾಜಕೀಯ ಭವಿಷ್ಯವು ನಮಗೆ ಮುಖ್ಯ ಎಂದು ಕುಮಾರಸ್ವಾಮಿ ಭರವಸೆಯನ್ನ ನೀಡಿದ್ದು, ಸದ್ಯ ಮಂಡ್ಯ ಹಾಲಿ ಸಂಸದೆಯಾಗಿರುವ ಸುಮಲತಾ ಅಂಬರೀಶ್ ಅವರು ಮಂಡ್ಯದಿಂದ ಸ್ಪರ್ಧೆ ಮಾಡದಂತೆ ಕುಮಾರಸ್ವಾಮಿ ಅವರು ಮನವೊಲಿಸಿದ್ದು, ಮುನಿಸು ಮರೆತು ಮೈತ್ರಿ ಧರ್ಮ ಪಾಲನೆಗೆ ಮುಂದಾಗಿದ್ದಾರೆ ಎಂದು ಹೇಳಲಾಗಿದೆ.