Student Heart Attack: ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ 15 ವರ್ಷದ ವಿದ್ಯಾರ್ಥಿ ಹೃದಯಾಘಾತದಿಂದ ಸಾವು..!
Student Heart Attack: ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಪ್ರೌಢಶಾಲಾ ವಿದ್ಯಾರ್ಥಿಯೊಬ್ಬ ಪ್ರಶಸ್ತಿ ಸ್ವೀಕರಿಸುವ ಮುನ್ನವೇ ಹೃದಯಾಘಾತಕ್ಕೆ ಒಳಗಾದ ಆಘಾತಕಾರಿ ಘಟನೆ ನಡೆದಿದೆ. 15 ವರ್ಷದ ಭೀಮಾಶಂಕರ್, ಹೃದಾಯಾಘಾತದಿಂದ (Student Heart Attack:) ಕೊನೆಯುಸಿರೆಳೆದ ದುರ್ದೈವಿಯಾಗಿದ್ದಾರೆ.
ಯಾದಗಿರಿ ಜಿಲ್ಲೆಯ ಸುರಪುರ ಮೂಲದ ಭೀಮಾಶಂಕರ್, ತುಮಕೂರು ತಾಲೂಕಿನ ಬೆಳದರ ಸರ್ಕಾರಿ ಪ್ರೌಢಶಾಲೆಯಲ್ಲಿ 10 ನೇ ತರಗತಿ ವಿದ್ಯಾರ್ಥಿಯಾಗಿದ್ದ. ಇಂದು ಚಿಕ್ಕತೊಟ್ಟಿಲು ಕೆರೆ ಬಳಿ ನಡೆಯುತ್ತಿದ್ದ ಹೋಬಳಿ ಮಟ್ಟದ ಪ್ರೌಢಾಶಾಲ ಕ್ರೀಡಾಕೂಟದಲ್ಲಿ ಭೀಮಾಶಂಕರ್ ಭಾಗಿಯಾಗಿದ್ದ. ತುಮಕೂರು ತಾಲ್ಲೂಕಿನ ಚಿಕ್ಕತೊಟ್ಟಿಲು ಕೆರೆ ಬಳಿ ಘಟನೆ ನಡೆದಿದೆ.
ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಭೀಮಾಶಂಕರ್ ಬಾಲಕರ ರಿಲೇ ಸ್ಪರ್ಧೆಯಲ್ಲಿ ಭಾಗವಹಿಸಿ, ದ್ವಿತೀಯ ಸ್ಥಾನ ಪಡೆದಿದ್ದರು. ಆದರೆ ದುರಾದೃಷ್ಟವಶಾತ್, ಪ್ರಶಸ್ತಿ ಸ್ವೀಕರಿಸುವ ಮುನ್ನವೇ ಭೀಮಾಶಂಕರ್ ಹೃದಾಯಾಘಾತಕ್ಕೆ ಒಳಗಾಗಿದ್ದಾರೆ. ಕೂಡಲೇ ಸ್ಥಳೀಯರು ಭೀಮಾಶಂಕರ್‌ನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ತುಮಕೂರಿನ ಶ್ರೀದೇವಿ ಆಸ್ಪತ್ರೆಯ ವೈದ್ಯರು ಭೀಮಾಶಂಕರ್ ಮೃತಪಟ್ಟಿರುವ ಮಾಹಿತಿಯನ್ನು ಖಚಿತಪಡಿಸಿದ್ದಾರೆ.
ಸದ್ಯ ತುಮಕೂರಿನ ಶ್ರೀದೇವಿ ಆಸ್ಪತ್ರೆಯಲ್ಲಿ ಭೀಮಾಶಂಕರ್ ಅವರ ಮೃತದೇಹವಿದ್ದು, ಇಂದು ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದೆ. ಈ ಘಟನೆಯ ಸಂಬಂಧ ಕೋರಾ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸೇಲ್ಫಿ ತೆಗೆದುಕೊಳ್ಳುವ ವೇಳೆ ನದಿಗೆ ಬಿದ್ದಿದ್ದ ಯುವಕನ ಶವ ಪತ್ತೆ:
ಕೊಡಗು (ಆ.4) : ಹಾರಂಗಿ ಡ್ಯಾಂ ಬಳಿ ಸೇಲ್ಫಿ ತೆಗೆದುಕೊಳ್ಳುವ ವೇಳೆ ನದಿಗೆ ಬಿದ್ದು ನಾಪತ್ತೆಯಾದ ಪ್ರವಾಸಿಗನ ಮೃತದೇಹ ಸೇತುವೆ ಸಮೀಪದಲ್ಲೇ ಪತ್ತೆಯಾಗಿದೆ. ಗುರುವಾರ ಸಂಜೆ ವೇಳೆ ಸೆಲ್ಪಿ ತೆಗೆಯಲು ಮುಂದಾದ ಸಂದರ್ಭ ನೀರು ಪಾಲಾಗಿದ್ದ ಸಂದೀಪ್. ತಡರಾತ್ರಿವರೆಗೆ ನಡೆದಿದ್ದ ಪತ್ತೆ ಕಾರ್ಯಾಚರಣೆ ಆದರೆ ಶವ ಪತ್ತೆ ಆಗದ ಕಾರ್ಯಾಚರಣೆ ನಿಲ್ಲಿಸಿದ್ದರು. ಇಂದು ಶುಕ್ರವಾರ ಬೆಳಗ್ಗೆ ಅಗ್ನಿಶಾಮಕ ದಳ, ದುಬಾರೆ ರಾಫ್ಟಿಂಗ್ ತಂಡದಿಂದ ಕಾರ್ಯಾಚರಣೆ ಆರಂಭಿಸಿದರು. ಈ ವೇಳೆ ಸಂದೀಪ್ ಶವ ಸೇತುವೆ ಸಮೀಪದಲ್ಲಿ ಪತ್ತೆಯಾಗಿದೆ.
ವೀಲಿಂಗ್ ಶೋಕಿಗಾಗಿ ಬೈಕ್ ಕಳ್ಳತನ; ಇಬ್ಬರ ಬಂಧನ
ಮೈಸೂರು, ಆ.4: ವೀಲಿಂಗ್(Wheeling) ಶೋಕಿಗಾಗಿ ಬೈಕ್ಗಳ ಕಳ್ಳತನಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕುವೆಂಪು ನಗರ ಪೊಲೀಸರ ಬಂಧಿಸಿದ್ದಾರೆ. ಧನುಷ್(19), ನಿತಿನ್(19)ಬಂಧಿತ ಆರೋಪಿಗಳು. ಇವರಿಂದ 2.5ಲಕ್ಷ ಮೌಲ್ಯದ 4 ಬೈಕ್ಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ಇವರು ಮೈಸೂರಿನ ಶ್ರೀರಾಂಪುರದಲ್ಲಿ ಬೈಕ್ ಕಳ್ಳತನ ಮಾಡುವ ವೇಳೆ ಸಿಕ್ಕಿ ಬಿದ್ದಿದ್ದಾರೆ. ಒಂದು ಬೈಕ್ ಕದ್ದು ಅದೇ ಬೈಕ್ನಲ್ಲಿ ಮತ್ತೊಂದು ಬೈಕ್ ಕದಿಯಲು ಸಂಚು ಹಾಕುತ್ತಿದ್ದರು. ಅರೆಸ್ಟ್ ಮಾಡಿ ವಿಚಾರಣೆ ವೇಳೆ ಬೈಕ್ ವೀಲಿಂಗ್ ಮಾಡುವ ಸಲುವಾಗಿ ಕಳ್ಳತನ ಮಾಡುತ್ತಿದ್ದ ಬಗ್ಗೆ ಮಾಹಿತಿ ನೀಡಿದ್ದಾರೆ.
ಮೈಸೂರಿನಲ್ಲಿ ಸರಕಳ್ಳತನಕ್ಕೆ ವಿಫಲ ಯತ್ನ; ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ
ಮೈಸೂರು: ಮಹಿಳೆಯರು ವಾಕಿಂಗ್ ಮಾಡುವಾಗ ಸರಕಳ್ಳತನಕ್ಕೆ ಯತ್ನಿಸಿದ ಘಟನೆ ಮೈಸೂರಿನ ಕೆ.ಆರ್ ಮೊಹಲ್ಲಾದಲ್ಲಿ ನಡೆದಿದೆ. ಕಳ್ಳನ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಬ್ಬರು ಮಹಿಳೆಯರು ನಡೆದುಕೊಂಡು ಹೋಗುವಾಗ ಅವರನ್ನು ಫಾಲೋ ಮಾಡಿದ ಅಪರಿಚಿತ ಯುವಕ, ಸಮಯ ನೋಡಿ ಸರ ಕಸಿಯಲು ಯುವಕನಿಂದ ಯತ್ನಿಸಿದ್ದಾನೆ. ಈ ವೇಳೆ ಮಹಿಳೆ ಕೂಗಿಕೊಂಡಿದ್ದು, ತಕ್ಷಣ ಆರೋಪಿ ಅಲ್ಲಿಂದ ಓಡಿ ಹೋಗಿದ್ದಾನೆ.