5ನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು
ಹಾಸನ : ನಕಲು ಮಾಡಿದ ಆರೋಪಕ್ಕೆ ಕ್ಷಮಾಪಣೆ ಪತ್ರ ಬರೆದುಕೊಡು ಎಂದು ಹೇಳಿದ್ದಕ್ಕೆ ವಿಧ್ಯಾರ್ಥಿನಿಯೊಬ್ಬಳು ಕಾಲೇಜಿನ ಐದನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಹಾಸನದಲ್ಲಿ ನಡೆದಿದೆ.
ಮೃತ ವಿಧ್ಯಾರ್ಥಿನಿಯನ್ನು ಮೂಲತಃ ಚನ್ನರಾಯಪಟ್ಟಣ ತಾಲೂಕಿನ ದಂಡಿಗನಹಳ್ಳಿ ಹೋಬಳಿ, ಹೊನ್ನಶೆಟ್ಟಿಹಳ್ಳಿಯ ಮಾನ್ಯ (19) ಎಂದು ಗುರುತಿಸಲಾಗಿದೆ.
ಈಕೆ ಹಾಸನ ಹೊರವಲಯದ ಕಾಲೇಜುವೊಂದರಲ್ಲಿ ಪ್ರಥಮ ವರ್ಷದ ಎಲೆಕ್ಟ್ರಾನಿಕ್ ಆ್ಯಂಡ್ ಕಮ್ಯೂನಿಕೇಷನ್ ಎಂಜಿನಿಯರಿಂಗ್ ಪದವಿ ಓದುತ್ತಿದ್ದಳು. ಇಂದು ಮೊದಲ ಪರೀಕ್ಷೆ ಬರೆದಿದ್ದು, ಪರೀಕ್ಷೆ ಸಮಯದಲ್ಲಿ ನಕಲು ಮಾಡಿದ್ದಾಗಿ ಆರೋಪಿಸಿ ಕಾಲೇಜು ಪ್ರಾಂಶುಪಾಲರಿಗೆ ಕ್ಷಮಾಪಣೆ ಪತ್ರ ಬರೆದುಕೊಡುವಂತೆ ಉಪನ್ಯಾಸಕರೊಬ್ಬರು ಹೇಳಿದ್ದರು.
ಇದಾದ ಬಳಿಕ ವಿದ್ಯಾರ್ಥಿನಿ ಕಾಲೇಜಿನ ಐದನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಡಿಕೇರಿ : ಕಾಣೆಯಾಗಿದ್ದ ವ್ಯಕ್ತಿಯ ಶವ ಕೆರೆಯಲ್ಲಿ ಪತ್ತೆ, ಮೃತದೇಹ ದರ್ಶನಕ್ಕೆ ಬಂದವರ ಕಾರು ಅಪಘಾತಕ್ಕೆ ಓರ್ವ ಮೃತ್ಯು..!
ಮಡಿಕೇರಿ : ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆಯಾದ್ರೆ, ಮೃತ ವ್ಯಕ್ತಿಯ ದರ್ಶನಕ್ಕೆ ಬುತ್ತಿದ್ದವರ ಕಾರು ಅಪಘಾತಕ್ಕೀಡಾಗಿ ಓರ್ವ ಮೃತಪಟ್ಟ ಘಟನೆ ಕೊಡಗಿನ ಶುಂಟಿಕೊಪ್ಪದಲ್ಲಿ ನಡೆದಿದೆ.
ಕಳೆದ ಭಾನುವಾರದಿಂದ ಕಾಣೆಯಾಗಿದ್ದ ಸುಂಟಿಕೊಪ್ಪ ಸಮೀಪದ ಸೆವೆಂತ್ ಮೈಲ್ ನಿವಾಸಿ ಪೌಲ್ ಡಿಸೋಜ ಎಂಬುವವರ ಮೃತದೇಹ ಇಂದು ಬೆಳಗ್ಗೆ ಅಲ್ಲಿನ ಸೌಭಾಗ್ಯ ತೋಟದ ಕೆರೆಯಲ್ಲಿ ಪತ್ತೆಯಾಗಿದೆ.
ನಾಲ್ಕು ದಿವಸಗಳ ಹಿಂದೆ ಮನೆಯಿಂದ ಕಾಣೆಯಾಗಿದ್ದ ಮೈಕಲ್ ಎಲ್ಲಿಯೂ ಕಂಡುಬಾರದ ಹಿನ್ನೆಲೆ ಮನೆಯವರು ಪೊಲೀಸ್ ದೂರು ದಾಖಲಿಸಿ ಎಲ್ಲಾ ಕಡೆ ಹುಡುಕಾಟ ನಡೆಸಿದ್ದರು.
ಆದರೆ ಗುರುವಾರ ಬೆಳಿಗ್ಗೆ ಮನೆ ಸಮೀಪದ ಕೆರೆಯಲ್ಲಿ ಪತ್ತೆಯಾದ ಪೌಲ್ ಡಿಸೋಜರವರ ದೇಹದಲ್ಲಿ ಕಲ್ಲುಗಳು ಕಟ್ಟಿಕೊಂಡಿರುವುದು ಗೋಚರಿಸಿದೆ. ಹೀಗಾಗಿ ಇವರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಹೇಳಲಾಗಿದೆ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಇನ್ನು ಇದೇ ಸಂಧರ್ಭದಲ್ಲಿ ಮೃತಪಟ್ಟ ಸಂಬಂಧಿಯ ಅಂತಿಮ ದರ್ಶನಕ್ಕೆಂದು ಬರುತ್ತಿದ್ದ ಕಾರು ಅಪಘಾತಕ್ಕಿಡಾಗಿ ಓರ್ವ ಸಾವನಪ್ಪಿ ನಾಲ್ವರು ಗಾಯಗೊಂಡಿದ್ದಾರೆ. ಬೆಂಗಳೂರಿನಲ್ಲಿ ನೆಲೆಸಿರುವ ಪೌಲ್ ಅವರ ಅಣ್ಣನ ಮಕ್ಕಳು ಸಾವಿನ ಸುದ್ದಿ ಅರಿತು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಿಂದ ಕಾರಿನಲ್ಲಿ ಬರುತ್ತಿದ್ದರು. ದುರಾದೃಷ್ಟಕ್ಕೆ ಇವರು ಪ್ರಯಾಣಿಸುತ್ತಿದ್ದ ಕಾರು ಬೆಂಗಳೂರು ಬಳಿಯ ಬಿಡದಿಯಲ್ಲಿ ಡಿವೈಡರ್ ಗೆ ಅಪ್ಪಳಿಸಿ ಮಗುಚಿ ಬಿದ್ದಿದೆ. ಪರಿಣಾಮ ಕಾರಿನಡಿಯಲ್ಲಿ ಸಿಲುಕಿ ಪೌಲ್ ಡಿಸೋಜರವರ ಅಣ್ಣನ ಮಗನಾದ ಸಿಲ್ವಿನ್ ಡಿಸೋಜ ಅವರು ಕೊನೆಯುಸಿರು ಎಳೆದಿದ್ದಾರೆ. ಇನ್ನುಳಿದವರಾದ ಪ್ರವೀಣ್ ಡಿಸೋಜ, ವನಿಷಾ ಡಿಸೋಜ ಹಾಗೂ ಕಾರಿನಲ್ಲಿದ್ದ ಇನ್ನಿಬ್ಬರು ಗಾಯಗೊಂಡು ಅಲ್ಲಿನ ಅಕ್ಷಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದೆಡೆ ಪೌಲ್ ಡಿಸೋಜ ಅವರ ಅಕಾಲಿಕ ಸಾವಿನಿಂದ ಅವರ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದ್ದಾರೆ ಇನ್ನೊಂದೆಡೆ ಅದೇ ಕುಟುಂಬದ ಇನ್ನೋರ್ವ ವಾಹನ ಅಪಘಾತದಲ್ಲಿ ಸಾವಿಗೀಡಾಗಿರುವುದು ವಿಧಿಯ ಕ್ರೂರ ಅಟ್ಟಹಾಸಕ್ಕೆ ಶಾಪ ಹಾಕುವತಾಗಿದ್ದು ಎರಡೂ ಕುಟುಂಬಗಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.