ಬಿರುಗಾಳಿ ರಭಸಕ್ಕೆ ಕಿತ್ತು ಹೋದ ಬಸ್ ಮೇಲ್ಛಾವಣಿ!
Twitter
Facebook
LinkedIn
WhatsApp
ಚೆನ್ನೈ: ಬಿರುಗಾಳಿಯ ರಭಸಕ್ಕೆ ಸರ್ಕಾರಿ ಬಸ್‌ವೊಂದರ ಮೇಲ್ಛಾವಣಿಯೇ ಹಾರಿಹೋಗಿದ್ದು, ಪ್ರಯಾಣಿಕರು ಗಾಬರಿಗೊಂಡಿರುವ ಘಟನೆ ತಮಿಳುನಾಡಿನಲ್ಲಿ ವರದಿಯಾಗಿದೆ.
ಪಜವೆರ್ಕಾಡು ಪ್ರದೇಶದಿಂದ ಸೆಂಗುಂದ್ರಂಗೆ ಮಂಗಳವಾರ ತೆರಳುತ್ತಿದ್ದ 559ಬಿ ಸರ್ಕಾರಿ ಬಸ್‌ಗೆ ಇದಕ್ಕಿದ್ದಂತೆ ಬಿರುಗಾಳಿ ಎದುರಾಗಿದೆ. ಈ ವೇಳೆ ಗಾಳಿಯ ರಭಸಕ್ಕೆ ಬಸ್‌ನ ಮೇಲ್ಛಾವಣಿ ಕಿತ್ತುಹೋಗಿದೆ. ತಕ್ಷಣವೇ ರಸ್ತೆ ಪಕ್ಕದಲ್ಲಿ ಬಸ್ ನಿಲ್ಲಿಸಲಾಗಿದ್ದು, ಗಾಬರಿಗೊಂಡ ಜನರು ಬಸ್‌ನಿಂದ ಕೆಳಗಿಳಿದಿದ್ದಾರೆ.
ಮೇಲ್ಛಾವಣಿ ಹಾರಿ, ಬಸ್‌ನ ಪಕ್ಕದಲ್ಲಿ ನೇತಾಡುತ್ತಿದ್ದುದ್ದನ್ನು ಹಲವರು ವಿಡಿಯೊ ಮಾಡಿಕೊಂಡಿದ್ದು, ಜಾಲತಾಣದಲ್ಲಿ ವಿಡಿಯೊ ವೈರಲ್ ಆಗಿದೆ. ಅಲ್ಲದೇ ರಾಜ್ಯ ಸಾರಿಗೆ ಸಂಸ್ಥೆ ಸಾರ್ವಕಜನಿಕ ಬಸ್‌ಗಳನ್ನು ನಿರ್ವಹಿಸುತ್ತಿರುವ ಕಳಪೆ ರೀತಿಯ ಬಗ್ಗೆ ಟೀಕೆಗಳು ವ್ಯಕ್ತವಾಗಿದೆ.