ಮಂಗಳವಾರ, ಫೆಬ್ರವರಿ 4, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಗಗನಸಖಿ ಹತ್ಯೆಗೈದಿದ್ದ ಆರೋಪಿ – ಲಾಕಪ್‌ನಲ್ಲೇ ಪ್ಯಾಂಟ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ

Twitter
Facebook
LinkedIn
WhatsApp
ಗಗನಸಖಿ ಹತ್ಯೆಗೈದಿದ್ದ ಆರೋಪಿ – ಲಾಕಪ್‌ನಲ್ಲೇ ಪ್ಯಾಂಟ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ
ಮುಂಬೈ: ತರಬೇತಿ ನಿರತ ಏರ್ ಇಂಡಿಯಾ ಗಗನಸಖಿ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿ (Mumbai Murder Accused) ಅಂಧೇರಿ ಠಾಣೆಯ (Andheri Police Station) ಲಾಕಪ್‌ನಲ್ಲೇ ಪ್ಯಾಂಟ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂಬೈನ ಮರೋಲ್ ಪ್ರದೇಶದಲ್ಲಿರುವ ಫ್ಲಾಟ್‌ನಲ್ಲಿ 23 ವರ್ಷದ ಗಗನಸಖಿಯ (Air Hostess) ಕತ್ತು ಸೀಳಿ ಕೊಂದಿದ್ದ ಆರೋಪಿ ವಿಕ್ರಮ್ ಅತ್ವಾಲ್ (40) ನನ್ನ ಬಂಧಿಸಲಾಗಿತ್ತು. 

ಛತ್ತೀಸ್‌ಗಢ ಮೂಲದ ರೂಪಲ್ ಓಗ್ರೆ (Rupal Ogrey), ಏರ್ ಇಂಡಿಯಾದಲ್ಲಿ ತರಬೇತಿಗೆ ಆಯ್ಕೆಯಾಗಿದ್ದರು. ಈ ವರ್ಷದ ಏಪ್ರಿಲ್‌ನಲ್ಲಿ ಮುಂಬೈಗೆ ಸ್ಥಳಾಂತರಗೊಂಡಿದ್ದರು. ಕೆಲವು ದಿನಗಳ ಹಿಂದೆ ತವರು ಮನೆಗೆ ಹೋಗಿದ್ದ ತನ್ನ ಸಹೋದರಿ ಮತ್ತು ತನ್ನ ಗೆಳೆಯನೊಂದಿಗೆ ಅಂಧೇರಿಯ ಪ್ಲಶ್ ಹೌಸಿಂಗ್ ಸೊಸೈಟಿಯಲ್ಲಿ ತನ್ನ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದರು. ಗಗನಸಖಿ ಸಾವಿಗೆ ಸಂಬಂಧಿಸಿದಂತೆ ಸ್ವೀಪರ್ ಆಗಿ ಕೆಲಸ ಮಾಡುತ್ತಿದ್ದ ವಿಕ್ರಮ್ ಅತ್ವಾಲ್‌ನನ್ನ ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದರು.

ಗಗನಸಖಿ ಹತ್ಯೆಗೈದಿದ್ದ ಆರೋಪಿ – ಲಾಕಪ್‌ನಲ್ಲೇ ಪ್ಯಾಂಟ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ

ಮುಂಬೈನಲ್ಲಿರುವ ತನ್ನ ಫ್ಲಾಟ್‌ನಲ್ಲಿ ಗಗನಸಖಿ ಭಾನುವಾರ ರಾತ್ರಿ ಶವವಾಗಿ ಪತ್ತೆಯಾಗಿದ್ದಳು. ಕುಟುಂಬ ಸದಸ್ಯರ ಫೋನ್ ಕರೆಯನ್ನ ಆಕೆ ಸ್ವೀಕರಿಸದಿದ್ದಾಗ ಮುಂಬೈನಲ್ಲಿರುವ ಆಕೆಯ ಸ್ನೇಹಿತರಿಗೆ ಫೋನ್ ಮಾಡಿದ್ದಾರೆ. ಅವರು ಫ್ಲಾಟ್ ಗೆ ಬಂದು ನೋಡಿದಾಗ ಒಳಗಿನಿಂದ ಬೀಗ ಹಾಕಿರುವುದು ಕಂಡುಬಂದಿದೆ. ನಂತರ, ಅವರು ಪೊವೈ ಪೊಲೀಸರನ್ನ  (Powai Police) ಸಂಪರ್ಕಿಸಿದ್ದು, ಅವರ ಸಹಾಯದಿಂದ ನಕಲಿ ಕೀ ಬಳಸಿ ಫ್ಲಾಟ್ ಬಾಗಿಲು ತೆರೆದಾಗ ಮಹಿಳೆ ಕುತ್ತಿಗೆ ಸೀಳಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಕೂಡಲೇ ಆಕೆಯನ್ನು ರಾಜವಾಡಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದ್ರೆ ಅಲ್ಲಿ ದಾಖಲಿಸುವ ಮುನ್ನವೇ ಆಕೆ ಮೃತಪಟ್ಟಿದ್ದಳು ಎಂದು ಅವರು ತಿಳಿಸಿದ್ದಾರೆ.

ಈ ಸಂಬಂಧ ಪೋವಾಯಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಒಬ್ಬ ವ್ಯಕ್ತಿಯನ್ನ ಬಂಧಿಸಿ ತನಿಖೆ ನಡೆಸುತ್ತಿದ್ದರು. ಪ್ರಕರಣದ ಆರೋಪಿ ವಿಕ್ರಮ್ ಅತ್ವಾಲ್‌ನ ಪತ್ನಿಯನ್ನೂ ವಿಚಾರಣೆ ನಡೆಸಲಾಗುತ್ತಿತ್ತು. ತನಿಖೆಯ ಸಮಯದಲ್ಲಿ ಮಹಿಳೆ ತನ್ನ ಸಹೋದರಿ, ತದನಂತರ ಗೆಳೆಯನೊಂದಿಗೆ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದದ್ದು ತಿಳಿದುಬಂದಿದೆ. ಆದರೆ ಇಬ್ಬರೂ ಎಂಟು ದಿನಗಳ ಹಿಂದೆ ತಮ್ಮ ಸ್ವಂತ ಸ್ಥಳಕ್ಕೆ ತೆರಳಿದ್ದರು. ಆದರೆ, ಇದೀಗ ಈ ಘಟನೆ ನಡೆದಿರುವುದಾಗಿ ಪೊಲೀಸರು ಹೇಳಿದ್ದರು.

ಗಗನಸಖಿ ಹತ್ಯೆಗೈದಿದ್ದ ಆರೋಪಿ – ಲಾಕಪ್‌ನಲ್ಲೇ ಪ್ಯಾಂಟ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ
ಲಿವಿಂಗ್ ಪಾರ್ಟ್ನರ್ ಮೇಲೆ ಸಂಶಯ- ಯುವತಿಯಿಂದ ಯುವಕನ ಹತ್ಯೆ

ಬೆಂಗಳೂರು: ಯುವತಿಯೊಬ್ಬಳು ಲಿವಿಂಗ್ ಟು ಗೆದರ್‌ನಲ್ಲಿದ್ದ ಸ್ನೇಹಿತನ ಮೇಲಿನ ಸಂಶಯದಿಂದಾಗಿ ಆತನನ್ನು ಹತ್ಯೆಗೈದ ಪ್ರಕರಣ ಹುಳಿಮಾವಿನಲ್ಲಿ (Hulimavu) ನಡೆದಿದೆ.

ಬಂಧಿತ ಆರೋಪಿಯನ್ನು ಬೆಳಗಾವಿ ಮೂಲದ ರೇಣುಕಾ (34) ಎಂದು ಗುರುತಿಸಲಾಗಿದೆ. ಯುವತಿ ಕೇರಳ ಮೂಲದ ಜಾವಿದ್ (24) ಎಂಬಾತನ ಜೊತೆ ಆಪಾರ್ಟ್‍ಮೆಂಟ್ ಒಂದರಲ್ಲಿ ವಾಸವಾಗಿದ್ದಳು. ಇಬ್ಬರೂ ಪರಸ್ಪರ ಸಂಶಯದಿಂದ ಆಗಾಗ ಜಗಳವಾಡುತ್ತಿದ್ದರು ಎಂದು ತಿಳಿದು ಬಂದಿದೆ. ಇಬ್ಬರ ನಡುವೆ ಹಣಕಾಸಿನ ವ್ಯವಹಾರ ಸಹ ಇತ್ತು ಎನ್ನಲಾಗಿದೆ. ಇದೇ ವಿಚಾರಕ್ಕಾಗಿ ಆತನನ್ನು ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ.

ಮೃತ ಜಾವಿದ್ ಮೊಬೈಲ್ ಸರ್ವಿಸ್ ಸೆಂಟರ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಮಡಿವಾಳದಲ್ಲಿ ಒಂದೇ ಏರಿಯಾದಲ್ಲಿ ವಾಸವಾಗಿದ್ದ ವೇಳೆ ಇಬ್ಬರಿಗೂ ಪರಿಚಯವಾಗಿತ್ತು. ಬಳಿಕ ಇಬ್ಬರೂ ವಸತಿ ಗೃಹ ಇಲ್ಲವೇ ಅಪಾರ್ಟ್‍ಮೆಂಟ್‍ನಲ್ಲಿ ಉಳಿದುಕೊಳ್ಳುತ್ತಿದ್ದರು. ಕೊಲೆ ನಡೆಯುವ ಮೂರು ದಿನದ ಹಿಂದೆ ಇಬ್ಬರು ಭೇಟಿಯಾಗಿದ್ದರು. ಬಳಿಕ ಹುಳಿಮಾವಿನ ಅಕ್ಷಯ ನಗರದ ಅಪಾರ್ಟ್‍ಮೆಂಟ್‍ಗೆ ಬಂದಿದ್ದರು.

ಬಳಿಕ ಸೆ.5 ರಂದು ಇಬ್ಬರ ನಡುವೆ ಜಗಳ ನಡೆದಿತ್ತು. ಈ ವೇಳೆ ಆರೋಪಿ ಚಾಕುವಿನಿಂದ ಜಾವಿದ್‍ನ ಎದೆಗೆ ಇರಿದಿದ್ದಳು. ಬಳಿಕ ಅಲ್ಲಿನ ನಿವಾಸಿಗಳ ಜೊತೆ ಸೇರಿ ಆತನನ್ನು ಆಸ್ಪತ್ರೆಗೆ ಸೇರಿಸಿದ್ದಳು. ನಂತರ ಆಸ್ಪತ್ರೆಯಿಂದ ವಾಪಸ್ ಅಪಾರ್ಟ್‍ಮೆಂಟ್‍ಗೆ ತೆರಳಿ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಳು. ಈ ವೇಳೆ ಅಪಾರ್ಟ್‍ಮೆಂಟ್ ಸಿಬ್ಬಂದಿ ಡೋರ್ ಲಾಕ್ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಈ ಸಂಬಂಧ ಹುಳಿಮಾವು ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist