ಮಲಮಗಳ ಕುರಿತು ಅಶ್ಲೀಲ ಪೋಸ್ಟ್: ಮಹಿಳೆ ವಿರುದ್ಧ ಪ್ರಕರಣ ದಾಖಲು

ಇಡುಕ್ಕಿ: ತನ್ನ ಪತಿಯೊಂದಿಗೆ ಕೋಪಗೊಂಡ 20 ವರ್ಷದ ಮಹಿಳೆ ತನ್ನ ಸಾಮಾಜಿಕ ಮಾಧ್ಯಮ ಖಾತೆಯನ್ನು ಬಳಸಿಕೊಂಡು 11 ವರ್ಷದ ಮಲ ಮಗಳ ವಿರುದ್ಧ ಅಶ್ಲೀಲ ಪೋಸ್ಟ್ ಹಾಕಿದ್ದು, ಆಕೆಯ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಕೇರಳ ಪೊಲೀಸರು ತಿಳಿಸಿದ್ದಾರೆ.
44 ವರ್ಷದ ವ್ಯಕ್ತಿಯ ಮಗಳು, ತನ್ನ ಅಜ್ಜಿಯ ಜತೆಯಲ್ಲಿ ಬಂದು ತೊಡುಪುಳ ಠಾಣೆಯ ಪೊಲೀಸರಿಗೆ ದೂರು ನೀಡಿದ್ದು, ಈ ಬಗ್ಗೆ ತನಿಖೆ ನಡೆಸಿದಾಗ ದೂರುದಾರರ ಮಲತಾಯಿಯೇ ಕೃತ್ಯ ಎಸಗಿರುವುದು ತಿಳಿದುಬಂದಿದೆ.
ವಿಚಾರಣೆಗೆ ಒಳಪಡಿಸಿದಾಗ, ಮಹಿಳೆ ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾಳೆ ಎಂದು ತೋಡುಪುಳ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತನ್ನ 6 ತಿಂಗಳ ಮಗುವಿನ ನ್ಯಾಯಸಮ್ಮತತೆಯ ಬಗ್ಗೆ ತನ್ನ ಪತಿಯೊಂದಿಗೆ ಜಗಳವಾಡಿದ ನಂತರ ಕೋಪದ ಭರದಲ್ಲಿ ಪೋಸ್ಟ್ ಹಾಕಿದ್ದೇನೆ ಎಂದು ಹೇಳಿರುವುದಾಗಿ ಎಫ್‌ಐಆರ್ ದಾಖಲಿಸಲಾಗಿದೆ ಎಂದರು.
”ಮಹಿಳೆಗೆ ಹಾಲುಣಿಸುವ ಮಗು ಇರುವ ಹಿನ್ನೆಲೆಯಲ್ಲಿ ನಾವು ಆಕೆಯನ್ನು ಬಂಧಿಸಿಲ್ಲ. ಆದಾಗ್ಯೂ, ನಾವು ಅಂತಿಮವಾಗಿ ಆಕೆಯನ್ನು ಬಂಧಿಸಬೇಕಾಗುತ್ತದೆ. ನಾವು ಈ ವಿಷಯದ ಬಗ್ಗೆ ನ್ಯಾಯವ್ಯಾಪ್ತಿಯನ್ನು ಸಮಾಲೋಚಿಸುತ್ತೇವೆ ಮತ್ತು ಅದರಂತೆ ಮುಂದುವರಿಯುತ್ತೇವೆ ಎಂದು ಅಧಿಕಾರಿ ಹೇಳಿದ್ದಾರೆ.
ಗಣೇಶ ಮೂರ್ತಿ ಸಾಗಿಸುತ್ತಿದ್ದ ವೇಳೆ ವಿದ್ಯುತ್ ಶಾಕ್;ವಿದ್ಯಾರ್ಥಿ ಸ್ಥಳದಲ್ಲೇ ಸಾವು
ಭುವನೇಶ್ವರ್: ಗಣೇಶ ಮೆರವಣಿಗೆ ವೇಳೆ ವಿದ್ಯುತ್ ಅವಘಡ ಸಂಭವಿಸಿದ ಪರಿಣಾಮ ಓರ್ವ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಒಡಿಶಾದ ಕಟಕ್ ನಗರದ ನಾರಾಜ್ ಪ್ರದೇಶದಲ್ಲಿ ಮಂಗಳವಾರ(ಸೆ.19 ರಂದು) ನಡೆದಿದೆ.
ಖಾಸಗಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ತಮ್ಮ ಸಂಸ್ಥೆಗೆ ಗಣೇಶ ಮೂರ್ತಿಯನ್ನು ಮೆರವಣಿಗೆ ಮೂಲಕ ಕಾಲೇಜಿಗೆ ತರುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.
ವಿದ್ಯಾರ್ಥಿಗಳು ಅದ್ಧೂರಿ ಮೆರವಣಿಗೆ ಮೂಲಕ ಗಣೇಶನ ಮೂರ್ತಿಯನ್ನು ತರುತ್ತಿದ್ದರು. ಈ ವೇಳೆ ವಾಹನದ ಮೇಲಿದ್ದ ವಿದ್ಯಾರ್ಥಿ ಒಬ್ಬ ಬೃಹತ್ ಧ್ವಜವನ್ನು ರಾರಾಜಿಸುತ್ತಿದ್ದ. ಧ್ವಜವನ್ನು ಮೇಲಕ್ಕೆ ಎತ್ತಿದ ವೇಳೆ ಧ್ವಜ 11 ಕೆವಿ ವಿದ್ಯುತ್ ತಂತಿಗೆ ತಗುಲಿಗೆ ಪರಿಣಾಮ ವಿದ್ಯಾರ್ಥಿಗೆ ವಿದ್ಯುತ್ ಶಾಕ್ ತಗುಲಿದೆ. ಇದರಿಂದ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಆತನ ಸಂಪರ್ಕಕ್ಕೆ ಬಂದ ನಾಲ್ವರಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ವಿಡಿಯೋ ಮೊಬೈಲ್ ವೊಂದರಲ್ಲಿ ಸೆರೆಯಾಗಿದೆ.