ಗುರುವಾರ, ಮಾರ್ಚ್ 13, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಕೊಡುಗೈ ದಾನಿ, ಹಾಜಿ ಅಬ್ದುಲ್ಲ ಪರ್ಕಳ ಅವರಿಗೆ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ

Twitter
Facebook
LinkedIn
WhatsApp
ಕೊಡುಗೈ ದಾನಿ, ಹಾಜಿ ಅಬ್ದುಲ್ಲ ಪರ್ಕಳ ಅವರಿಗೆ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ

ಕರಾವಳಿಯ ಜಿಲ್ಲೆ ದಕ್ಷಿಣ ಕನ್ನಡ ಮತ್ತು ಉಡುಪಿಯ ಆರು ಸಾಧಕರು, ಒಂದು ಸಂಸ್ಥೆಗೆ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಒಲಿದಿದೆ. ಸಮಾಜ ಸೇವೆಯಲ್ಲಿ ಚಾರ್ಮಾಡಿ ಹಸನಬ್ಬ, ಯಕ್ಷಗಾನದಲ್ಲಿ ಲೀಲಾವತಿ ಬೈಪಡಿತ್ತಾಯ, ಆರ್ಗೋಡು ಮೋಹನ್ದಾಸ್ ಶೆಣೈ, ವೈದ್ಯಕೀಯ ಕ್ಶೇತ್ರದಲ್ಲಿ ಡಾ.ಪ್ರಶಾಂತ್ ಶೆಟ್ಟಿ, ಸಂಕೀರ್ಣ ಕ್ಶೇತ್ರದಲ್ಲಿ ಹಾಜಿ ಅಬ್ದುಲ್ಲಾ ಪರ್ಕಳ, ಪತ್ರಿಕೋದ್ಯಮದಲ್ಲಿ ದಿನೇಶ್ ಅಮೀನ್ಮಟ್ಟು ಪ್ರಶಸ್ತಿ ಲಭಿಸಿದೆ.

ಹಾಜಿ ಅಬ್ದುಲ್ಲ ಪರ್ಕಳ : ತನ್ನ ೨೪ನೇ ವಯಸ್ಸಿಗೇ ಕೇರಳದಿಂದ ಉಡುಪಿಗೆ ಬಂದು ವ್ಯಾಪಾರ ಜೀವನ ಆರಂಭಿಸಿದ ಹಾಜಿ ಅಬ್ದುಲ್ಲ ಪರ್ಕಳ ಕೊಡುಗೈ ದಾನಿ ಎಂದೇ ಅಭಿಮಾನಿಗಳ ಮನ್ನಣೆಗೆ ಪಾತ್ರರಾಗಿರುವವರು. ಮಣಿಪಾಲದ ಡಾ.ಟಿ.ಎ.ಪೈ. ಸಲಹೆ ಹಾಗೂ ಉತ್ತೇಜನದಿಂದ ಸಣ್ಣ ಪ್ರಮಾಣದಲ್ಲಿ ಉದ್ಯಮ ಪ್ರಾರಂಭಿಸಿದ ಅಬ್ದುಲ್ಲಾ, ಕ್ರಮೇಣ ತಮ್ಮ ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕ ವ್ಯವಹಾರದಿಂದ ಉದ್ಯಮ ವಿಸ್ತರಿಸಿ ಉಡುಪಿಯ ಓರ್ವ ಯಶಸ್ವೀ ಉದ್ಯಮಿಯಾಗಿ ಬೆಳೆದರು.

1943 ನವೆಂಬರ್ ತಿಂಗಳ 16ನೇ ತಾರೀಖಿನಂದು ಕೇರಳದ ನೀಲೇಶ್ವರದಲ್ಲಿ ಕೆ. ಅಹ್ಮದ್ ಮತ್ತು ಅಯಿಶಾ ದಂಪತಿಗಳ ಪುತ್ರನಾಗಿ ಜನಿಸಿದ ಹಾಜಿ ಅಬ್ದುಲ್ಲಾ ಸಾಹೇಬರು 1967 ರಲ್ಲಿ ತನ್ನ 24ನೇ ವಯಸ್ಸಿನಲ್ಲೇ ಉಡುಪಿಗೆ ಬಂದು ತನ್ನ ವೃತ್ತಿ ಜೀವನವನ್ನು ಆರಂಭಿಸಿದವರು. ಕ್ರಮೇಣ ಮಣಿಪಾಲದ ಡಾ. ಟಿ.ಎ.ಪೈ. ಯವರ ಪರಿಚಯವಾಗಿ, ಅಬ್ದುಲ್ಲಾ ಸಾಹೇಬರು ಉಡುಪಿಗೆ ಬರುವ ಮುನ್ನ ತನ್ನ ಭಾವನ ತ್ಯಾಜ್ಯ ಕಾಗದಗಳ ಅಂಗಡಿಯಲ್ಲಿ ಕೆಲಸಕ್ಕಿದ್ದ ವಿಷಯ ಡಾ. ಟಿ.ಎ.ಪೈ.ಯವರ ಗಮನಕ್ಕೆ ಬಂದಾಗ, ಅವರು ತಮ್ಮ ಮುದ್ರಣಾಲಯದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ಕಾಗದಗಳನ್ನು ಖರೀದಿಸಿ ಆ ವ್ಯಾಪಾರವನ್ನು ಆರಂಭಿಸಲು ಸಲಹೆ ನೀಡಿ ಉತ್ತೇಜಿಸಿದ ಪರಿಣಾಮ, ಸಣ್ಣ ಪ್ರಮಾಣದಲ್ಲಿ ತ್ಯಾಜ್ಯ ಕಾಗದದ ಉದ್ಯಮವನ್ನು ಪ್ರಾರಂಭಿಸಿದ ಅಬ್ದುಲ್ಲಾ ಸಾಹೇಬರು, ಕ್ರಮೇಣ ತಮ್ಮ ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕ ವ್ಯವಹಾರದಿಂದ ಉದ್ಯಮವನ್ನು ವಿಸ್ತರಿಸುತ್ತಾ ಹೋಗಿ ಉಡುಪಿಯ ಓರ್ವ ಯಶಸ್ವೀ ಉದ್ಯಮಿಯಾಗಿ ಗುರುತಿಸಲ್ಪಟ್ಟವರು.

ಶೈಕ್ಷಣಿಕ ಮತ್ತು ಆರೋಗ್ಯ ಕೇಂದ್ರವಾಗಿ ಗುರುತಿಸಲ್ಪಡುವ ಮಣಿಪಾಲಕ್ಕೆ, ದೇಶ ವಿದೇಶಗಳಿಂದ ಶಿಕ್ಷಣ ಮತ್ತು ಆರೋಗ್ಯ ಸೇವೆಯನ್ನು ಅರಸಿಕೊಂಡು ಬರುವ ವಿದ್ಯಾರ್ಥಿಗಳಿಗೆ ಮತ್ತು ಬಡಜನರಿಗೆ ಆಸರೆಯಾಗಿದ್ದ ಹಾಜಿ ಅಬ್ದುಲ್ಲಾ ಸಾಹೇಬರು, ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಮತ್ತು ಬಡಜನರ ಶುಷ್ರೂಷೆಗಳಿಗೆ ಸಕಲ ಸಹಾಯ ಹಸ್ತ ನೀಡಿ ಜನರ ಕಣ್ಣೀರು ಒರೆಸುವಂತಹ ಕಾರ್ಯಗಳನ್ನು ಬಹಳ ಪ್ರೀತಿಪೂರ್ವಕವಾಗಿ ನಿರ್ವಹಿಸುತ್ತಾ ಬಂದವರು. ಮಣಿಪಾಲಕ್ಕೆ ಆರೋಗ್ಯ ಮತ್ತು ಶಿಕ್ಷಣಕ್ಕಾಗಿ ಬರುವ ಯಾತ್ರಾರ್ಥಿಗಳಿಗೆ, ರೋಗಿಗಳ ಸಂಬAಧಿಕರಿಗೆ ಮತ್ತು ವಿಧ್ಯಾರ್ಥಿಗಳಿಗೆ ಪ್ರಾರ್ಥನೆಗೆ ಅವಕಾಶ ಕಲ್ಪಿಸಲು ಮಣಿಪಾಲದಲ್ಲಿ ಮಸ್ಜಿದ್-ಎ- ಮಣಿಪಾಲ್ ನಿರ್ಮಿಸುವಲ್ಲಿ ಪ್ರಧಾನ ಪಾತ್ರ ವಹಿಸಿದವರು.
ಕರಾವಳಿಯ ಪ್ರಸಿದ್ಧ ಸಂಘ ಸಂಸ್ಥೆಗಳಾದ ಜಮೀಯತುಲ್ ಫಲಾಹ್, ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್, ಮಿಲ್ಲತ್ ಎಜುಕೇಶನ್ ಟ್ರಸ್ಟ್, ಝಿಯಾ ಎಜುಕೇಶನ್ ಟ್ರಸ್ಟ್ ಮುಂತಾದ ಸಂಘ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಅವುಗಳಿಗೆ ಶಕ್ತಿ ತುಂಬಿದ ಹಾಜಿ ಅಬ್ದುಲ್ಲಾ ಸಾಹೇಬರು ತಮ್ಮ ರಾಜಕೀಯ ಒಲವಿನ ಪರಿಣಾಮವಾಗಿ ಕಾಂಗ್ರೆಸ್ಸಿನ ಅಲ್ಪಸಂಖ್ಯಾತರ ಉಡುಪಿ ಘಟಕದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದವರು.

ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಸ್ಥಾಪನೆಯಲ್ಲಿ ಬಹಳ ಮುತುವರ್ಜಿ ವಹಿಸಿದ್ದ ಹಾಜಿ ಅಬ್ದುಲ್ಲಾ ಸಾಹೇಬರು ಒಕ್ಕೂಟದ ಪ್ರಥಮ ಅಧ್ಯಕ್ಷರಾಗಿ ಸತತ ಆರು ವರ್ಷಗಳ ಕಾಲ ಒಕ್ಕೂಟವನ್ನು ಬಹಳ ಯಶಸ್ವಿಯಾಗಿ ಮುನ್ನಡೆಸಿದವರು. ಒಕ್ಕೂಟದ ಆರಂಭದ ದಿನಗಳಿಂದಲೂ ಒಕ್ಕೂಟದ ಬೆನ್ನೆಲುಬಾಗಿದ್ದ ಅವರು ಇಂದು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಈ ಮಟ್ಟಕ್ಕೆ ಬೆಳೆದು ನಿಲ್ಲಬೇಕಾದರೆ ಅದರಲ್ಲಿ ಹಾಜಿ ಅಬ್ದುಲ್ಲಾ ಸಾಹೇಬರ ಅಪಾರ ಪ್ರೋತ್ಸಾಹ ಮತ್ತು ಪರಿಶ್ರಮವಿದೆ.
ತೀರಾ ಸರಳತೆಯನ್ನು ಮೈಗೂಡಿಸಿಕೊಂಡಿರುವ ಹಾಜಿ ಅಬ್ದುಲ್ಲಾ ಸಾಹೇಬರು ಅತ್ಯಂತ ಸಾಮಾನ್ಯ ಜನರೊಂದಿಗೂ ಆತ್ಮೀಯವಾಗಿ ಬೆರೆಯುವ ವಿನಯಶೀಲ ವ್ಯಕ್ತಿತ್ವದವರು. ಕೊಡುಗೈ ದಾನಿಯೆಂದೇ ಪರಿಚಿತರಾಗಿರುವ ಅವರು, ಯಾರೇ ಅವರ ಬಳಿಗೆ ಸಹಾಯಕ್ಕಾಗಿ ಬಂದರೂ ಇಲ್ಲಾ ಎಂದು ಮರಳಿ ಕಳುಹಿಸಿದವರಲ್ಲ.
ಇಂತಹ ಹಲವಾರು ವೈಶಿಷ್ಟಗಳನ್ನು ಮೈಗೂಡಿಸಿಕೊಂಡಿರುವ ಮಾನವತಾವಾದಿ, ಸಮುದಾಯ ಪ್ರೇಮಿ, ಸಮಾಜ ಸೇವಕ ಹಾಗೂ ಸಾಮಾಜಿಕ ಸಂಘಟನೆಗಳ ಬೆಂಬಲಿಗನಾಗಿ, ಸಮಾಜದ ಪಾಲಿಗೊಂದು ಪ್ರೇರಕ ಶಕ್ತಿಯಾಗಿ ಗುರುತಿಸಿಕೊಂಡಿರುವ ಹಾಜಿ ಅಬ್ದುಲ್ಲಾ ಸಾಹೇಬರ ಸೇವಾ ಮನೋಭಾವ ಮತ್ತು ಉದಾರತೆಯನ್ನು ಪರಿಗಣಿಸಿ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ 2021-22 ನೇ ವರ್ಷದ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಿತ್ತು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist