ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿ ಪ್ರಕಟ
ಬೆಂಗಳೂರು: 2023-24 ನೇ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗಾಗಿ (Best Teacher Award) 31 ಶಿಕ್ಷಕರನ್ನು ಆಯ್ಕೆ ಮಾಡಿ ಶಿಕ್ಷಣ ಇಲಾಖೆ ಪ್ರಕರಣೆ ಹೊರಡಿಸಿದೆ.
ಪ್ರಾಥಮಿಕ ಶಾಲಾ ವಿಭಾಗದಿಂದ 20 ಶಿಕ್ಷಕರು ಮತ್ತು ಪ್ರೌಢಶಾಲಾ ವಿಭಾಗದಿಂದ 11 ಶಿಕ್ಷಕರನ್ನು (ಓರ್ವ ವಿಶೇಷ ಶಿಕ್ಷಕರೂ ಒಳಗೊಂಡಂತೆ) ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಶಿಕ್ಷಕರ ಪ್ರಶಸ್ತಿಗೆ ಆಯ್ಕೆಯಾದ ಈ ಪುರಸ್ಕೃತರ ಪಟ್ಟಿಯಲ್ಲಿನ ಮಹಿಳಾ ಶಿಕ್ಷಕರಿಗೆ ಅಕ್ಷರ ಮಾತೆ ‘ಸಾವಿತ್ರಿಬಾಯಿ ಫುಲೆ’ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸೆಪ್ಟೆಂಬರ್ 5, ಶಿಕ್ಷಕರ ದಿನದಂದು ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರದಾನ ಮಾಡಲಿದ್ದಾರೆ.
ಪ್ರಾಥಮಿಕ ಶಾಲಾ ಶಿಕ್ಷಕರು
ಶಿವಮೊಗ್ಗದ ಫೌಜಿಯ ಸರವತ್, ಚಿಕ್ಕಬಳ್ಳಾಪುರದ ಮಂಜುನಾಥ್, ದಾವಣಗೆರೆಯ ಬಿ.ಕೆ.ಸತೀಶ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಂ.ಜಿ.ಸುಜಾತ, ವಿಜಯಪುರದ ಮಹಮ್ಮದ ಹಾಶೀಮಸಾಬ ಹುಸೇನಸಾಬ ಲಷ್ಕರಿ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಪ್ರತಾಪ ಶಂಕರ ಜೋಡಟ್ಟಿ, ಬಾಗಲಕೋಟೆಯ ಮೊಹಮದ್ ಹುಸೇನ ಅಬ್ದುಲ್ ಖಾದರ ಸೌದಾಗರ, ಬೀದರ್‌ನ ಮಾರ್ತಂಡಪ್ಪ ತೆಳಗೇರಿ, ಶಿರಸಿಯ ಅಕ್ಷತಾ ಅನಿಲ ಬಾಸಗೋಡ, ಧಾರವಾಡದ ಶೇಕಪ್ಪ ಭೀಮಪ್ಪ ಕೇಸರಿ, ಮೈಸೂರಿನ ಭಾಸ್ಕರ, ಹಾಸನದ ಎ.ಬಿ.ಮೂರ್ತಿ, ಬಳ್ಳಾರಿಯ ಎಂ.ಆರ್.ವನಜಾಕ್ಷಮ್ಮ, ರಾಯಚೂರಿನ ಸೈಯದಾ ಸಾಜೀದಾ ಫಾತೀಮಾ, ಮಂಡ್ಯದ ಜಿ.ಪ್ರಶಾಂತ, ಚಾಮರಾಜನಗರ ಜಿಲ್ಲೆಯ ವಿ.ವೀರಪ್ಪ, ತುಮಕೂರಿನ ಎಂ.ಜಿ.ಗಂಗಾಧರ, ಕೊಡಗಿನ ಬಿ.ಟಿ.ಪೂರ್ಣೇಶ್, ಉತ್ತರ ಕನ್ನಡದ ಮಂಜುನಾಥ ಹರಿಕಂತ್ರ, ಹಾವೇರಿಯ ಸೋಮಪ್ಪ ಫಕಿರಪ್ಪ ಕಠಾರಿ.
ಪ್ರೌಢ ಶಾಲಾ ಶಿಕ್ಷಕರು
ಉತ್ತರ ಕನ್ನಡದ ಪ್ರಕಾಶ ನಾಯ್ಕ, ಧಾರವಾಡದ ಸುರೇಶ್ ಬಿ.ಮುಗಳಿ, ಚಿತ್ರದುರ್ಗದ ಕೆ.ಟಿ.ನಾಗಭೂಷಣ್, ಮಧುಗಿರಿಯ ಜಿ.ಹೆಚ್.ರೇಣುಕರಾಜ್, ಮಂಡ್ಯದ ಜಿ.ಸಿ.ರಜನಿ, ಕೊಪ್ಪಳದ ಬಸಪ್ಪ ವಾಲಿಕರ, ಬೆಂಗಳೂರಿನ ಪಿ.ಜಿ.ಇಂದಿರಾ, ಶಿವಮೊಗ್ಗದ ವಿಜಯ ಆನಂದರಾವ್, ಮೈಸೂರಿನ ಎಸ್.ಹರ್ಷ, ಉಡುಪಿಯ ನರೇಂದ್ರ, ಚಿಕ್ಕೋಡಿಯ ಶ್ರೀಶೈಲ ಸ ಗಸ್ತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.