ರಾಜ್ಯ ಬಜೆಟ್ ನಲ್ಲಿ ಮಧ್ಯದ ದರ ಪರಿಷ್ಕರಣೆ ; ಇಂದಿನಿಂದ ಮಧ್ಯದ ದರದಲ್ಲಿ 20% ಏರಿಕೆ!

ಬೆಂಗಳೂರು: ಇಂದಿನಿಂದ ಮದ್ಯಪ್ರಿಯರಿಗೆ ಬೆಲೆ ಏರಿಕೆ ಬಿಸಿ ತಟ್ಟಲಿದೆ. ಇಂದಿನಿಂದ ಮದ್ಯ ತುಟ್ಟಿಯಾಗಲಿದ್ದು , ಶೇ. 20 ರಷ್ಟು ದರ ಹೆಚ್ಚಳ ಆಗಲಿದೆ.
ಇದೀಗ ಬಿಯರ್ ಬೆಲೆಯನ್ನು 10% ಏರಿಕೆ ಮಾಡಲಾಗಿದ್ದು ಇತರ ಮದ್ಯಗಳ ಬೆಲೆ 20%ನಷ್ಟು ಏರಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ನಲ್ಲಿ ಘೋಷಿಸಿದ್ದಂತೆ ಮದ್ಯದ ಅಬಕಾರಿ ಸುಂಕ ಏರಿಕೆ ಮಾಡಲಾಗಿದೆ. ಸರ್ಕಾರ ಗ್ಯಾರಂಟಿ ಯೋಜನೆಗಳ ಸಂಪನ್ಮೂಲ ಕ್ರೋಢ್ರೀಕರಣ ಮಾಡುವ ದೃಷ್ಟಿಯಿಂದ ಮದ್ಯದ ಬೆಲೆ ಏರಿಕೆ ಮಾಡುತ್ತಿದೆ ಎನ್ನಲಾಗಿದೆ.
ಯಾವ ಮದ್ಯಕ್ಕೆ ಎಷ್ಟೆಷ್ಟು ದರ ಏರಿಕೆ ಆಗಬಹುದು?
- ಬಿಯರ್- ಸದ್ಯದ ದರ 230ರೂ. ಇದ್ದು 253 ರೂ. ಆಗಬಹುದು
- ರಾಯಲ್ ಸ್ಟಾಗ್ 450 ರೂ. ಇದೆ 500. ರೂ ಆಗಬಹುದು
- Imperial blue-300 ರೂ. ಇದ್ದು 360 ರೂ. ಆಗಬಹುದು
- ರಾಯಲ್ ಚ್ಯಾಲೆಂಜ್- ಸದ್ಯದ ದರ 450 ರೂ ಇದ್ದು 500 ರೂ. ಆಗಬಹುದು
- Mc ವಿಸ್ಕಿ-300 ರೂ. ಇದೆ 360 ರೂ ಆಗಬಹುದು
- ಬ್ರಾಂಡಿ- mansion house-300 ರೂ. ಇದ್ದು 350 ರೂ. ಆಗಬಹುದು
- ವೋಡ್ಕಾ- 300 ರೂ. ಇದೆ 350 ರೂ. ಆಗಬಹುದು
- Black dog full-3360 ರೂ. ಇದೆ 4000 ರೂ. ಆಗಬಹುದು
- Vat69-3300 ಇದೆ ರೂ. 4000 ರೂ. ಆಗಬಹುದು
20 ವರ್ಷದಿಂದ ಟೀ ಮಾರಿ ಜೀವನ ಕಟ್ಟಿಕೊಂಡಿದ್ದ ಅನ್ನಪೂರ್ಣಮ್ಮ ಈಗ ಪಂಚಾಯ್ತಿ ಅಧ್ಯಕ್ಷೆ!
ತುಮಕೂರು: ಆಕೆ ಪ್ರಧಾನಿ ಮೋದಿಯ (Narendra Modi) ಅಪ್ಪಟ ಅಭಿಮಾನಿ. ಈ ಹಿಂದೆ ಮೋದಿ ಅವರು ಟೀ ಮಾರಿದಂತೆ (Tea Sale) ಈ ಅಭಿಮಾನಿಯೂ ಟೀ ಮಾರುತಿದ್ದಾಳೆ. ಟೀ ಮಾರಿ 20 ವರ್ಷದಿಂದ ಜೀವನ ಕಟ್ಟಿಕೊಂಡಿದ್ದಾಳೆ. ಅಷ್ಟೇ ಅಲ್ಲಾ ಟೀ ಮಾರಿದ ಮೋದಿ ಪಾರ್ಲಿಮೆಂಟ್ ಗೆ ಪ್ರಧಾನಿ ಆದ್ರೆ, ಈ ಅಭಿಮಾನಿ ಪಂಚಾಯತಿಗೆ ಅಧ್ಯಕ್ಷೆಯಾಗಿದ್ದಾರೆ. ಪಂಚಾಯತಿಯಿಂದ ಪಾರ್ಲಿಮೆಂಟ್ ವರೆಗಿನ ಟೀ ಮಹಾತ್ಮೆಯ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ.
ಟೀ ಮಾರೋರೆಲ್ಲಾ ಪ್ರಧಾನಿಯಾಗಲ್ಲ, ಚಹಾ ಮಾರಿ ಜೀವನ ಕಟ್ಟಿಕೊಂಡವರೆಲ್ಲಾ ಪಂಚಾಯ್ತಿ ಅಧ್ಯಕ್ಷರಾಗಲ್ಲ. ಆದರೆ ಅವರ ಪರಿಶ್ರಮ, ಏನಾದರೂ ಸಾಧನೆ ಮಾಡಬೇಕು ಅನ್ನೋ ಛಲ ಅವರನ್ನು ಉತ್ತುಂಗಕ್ಕೇರಿಸುತ್ತದೆ. ಇದಕ್ಕೆ ಸಾಕ್ಷಿಯಾಗಿದ್ದು ತುಮಕೂರಿನ ಊರ್ಡಿಗೆರೆ ಗ್ರಾಮ ಪಂಚಾಯ್ತಿ. ಈ ಗ್ರಾಮ ಪಂಚಾಯ್ತಿಯಲ್ಲಿ ಚಹಾ ಮಾರುವ ಮಹಿಳೆಯೋರ್ವಳು ಅಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಊರ್ಡಿಗೆರೆ ಗ್ರಾಮ ಪಂಚಾಯ್ತಿಯಲ್ಲಿ ಒಟ್ಟು 21 ಸದಸ್ಯರ ಸಂಖ್ಯೆ ಇದೆ. ಇದರಲ್ಲಿ ಬಿಜೆಪಿ ಬೆಂಬಲಿತರ ಸಂಖ್ಯೆ 10, ಜೆಡಿಎಸ್ ಬೆಂಬಲಿತರ ಸಂಖ್ಯೆ 11 ಇದೆ. ಅನ್ನಪೂರ್ಣಮ್ಮ ಬಿಜೆಪಿ ಬೆಂಬಲಿತ ಸದಸ್ಯೆ. ಆದರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಬಾರಿಯ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಜೆಡಿಎಸ್‍ನಲ್ಲಿ ನಾಲ್ಕು ಜನ ಮುಸ್ಲಿಂ ಮಹಿಳೆಯರೂ ಇದ್ದರು. ಆದರೂ ಅವರೆಲ್ಲರೂ ಸೇರಿ ಟೀ ಮಾರುವ ಅನ್ನಪೂರ್ಣಮ್ಮರನ್ನೇ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಗ್ರಾಮಾಂತರ ಬಿಜೆಪಿ ಶಾಸಕ ಸುರೇಶ್ ಗೌಡರ ಪ್ಲಾನ್ ಇಲ್ಲಿ ಫಲಿಸಿದೆ.
ನೂತನವಾಗಿ ಅಧ್ಯಕ್ಷೆಯಾದ ಅನ್ನಪೂರ್ಣಮ್ಮ ಮಹಿಳಾಪರ ಹಲವು ಕನಸು ಕಂಡಿದ್ದಾರೆ. ತಮ್ಮ ಪಂಚಾಯ್ತಿ ವ್ಯಾಪ್ತಿಯ ಹೆಣ್ಣುಮಕ್ಕಳ ಸಬಲೀಕರಣಕ್ಕಾಗಿ ದುಡಿಯುವ ವಾಗ್ದಾನ ಮಾಡಿದ್ದಾರೆ. ಒಟ್ಟಾರೆ ಟೀ ಮಾರೋ ಮಹಿಳೆ ಅಧ್ಯಕ್ಷೆ ಗಾದಿಗೆ ಏರಿರುವ ಯಶೋಗಾಥೆ ಜಿಲ್ಲೆಯಲ್ಲಿ ಚರ್ಚೆಯಾಗುತ್ತಿದೆ.