ನಿಂತಿದ್ದ ಗೂಡ್ಸ್ ರೈಲಿನ ಕೆಳಭಾಗದಿಂದ ಹಳಿ ದಾಟಲು ಮುಂದಾಗಿ ಮಹಿಳೆ ತಲೆಗೆ ಗಂಭೀರ ಗಾಯ, ಪ್ರಾಣಪಾಯದಿಂದ ಪಾರು!
Twitter
Facebook
LinkedIn
WhatsApp
ಗದಗ: ನಿಂತಿದ್ದ ಗೂಡ್ಸ್ ರೈಲಿ (Goods Train) ನ ಕೆಳಭಾಗದಿಂದ ಮಹಿಳೆ ಹಳಿ ದಾಟುವ ವೇಳೆ, ರೈಲು ಮುಂದಕ್ಕೆ ಸಾಗಿದೆ. ಈ ವೇಳೆ ಎರಡೂ ಕಂಬಿಗಳ ಮಧ್ಯೆ ಸಿಲುಕಿ ಮಹಿಳೆ ನರಳಾಡಿದ ಘಟನೆ ನಗರದ ಬಳ್ಳಾರಿ ಬ್ರಿಡ್ಜ್ ಬಳಿ ನಡೆದಿದೆ.
ಸೋಮವಾರ ಸಂಜೆ ಈ ಘಟನೆ ನಡೆದಿದೆ. ಅದೃಷ್ಟವಶಾತ್ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ಗಿರಿಜಾ ಎಂಬಾಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರೈಲು ಸಂಪೂರ್ಣ ಮುಂದಕ್ಕೆ ಹೋಗುವವರೆಗೆ ಉಸಿರು ಬಿಗಿಹಿಡಿದು ಕಂಬಿಗಳ ಮಧ್ಯೆ ಮಲಗಿದ್ದಾರೆ. ಆದರೂ ಗಿರಿಜಾ ತಲೆಗೆ ಗಂಭೀರ ಗಾಯವಾಗಿದೆ. ನಂತರ ಓಡಿಬಂದ ಸ್ಥಳಿಯರು ಮಹಿಳೆಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಏನೂ ಆಗಲ್ಲ, ಹೆದರಬೇಡ, ಹೊರಳಾಡಬೇಡ, ಕೈ, ಕಾಲು ಹೊರಹಾಕಬೇಡ ಅಂತೆಲ್ಲಾ ಧೈರ್ಯ ಹೇಳಿದ್ದಾರೆ.
ರೈಲು (Train) ಮುಂದಕ್ಕೆ ಸಾಗುತ್ತಿದ್ದಂತೆ ಗಾಯಾಳು ಮಹಿಳೆಯನ್ನು ರೈಲ್ವೆ ಸಿಬ್ಬಂದಿ ಹಾಗೂ ಸ್ಥಳಿಯರು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಿಸಿದರು. ಗದಗ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.