ಸ್ಪೀಕರ್ ಯು.ಟಿ. ಖಾದರ್ ಗೆ 'ದಿ ಗ್ರೇಟ್ ಸನ್ ಆಫ್ ಇಂಡಿಯಾ' ಪ್ರಶಸ್ತಿ
ಬೆಂಗಳೂರು: ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ಅವರಿಗೆ ‘ ದಿ ಗ್ರೇಟ್ ಸನ್ ಆಫ್ ಇಂಡಿಯಾ’ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ದೆಹಲಿಯ ಇಂಡಿಯಾ ಇಂಟರ್ ನ್ಯಾಷನಲ್ ಸೆಂಟರ್ ನಲ್ಲಿ ನಡೆದ ಸಮಾರಂಭದಲ್ಲಿ ಭಾರತೀಯ ಬುದ್ದಿಜೀವಿಗಳ ಸಮ್ಮೇಳನದಿಂದ ಪ್ರಶಸ್ತಿ ಪ್ರದಾನ ಮಾಡಲಾಯಿತು. ಛತ್ತೀಸ್ ಗಢದ ರಾಜ್ಯಪಾಲ ಬಿಸ್ವ ಭೂಷಣ್ ಹರಿಚರಣ್, ನಿವೃತ್ತ ಸುಪ್ರೀಂಕೋರ್ಟ್ ನ್ಯಾಯಾಧೀಶರಾದ ವಿ. ಗೋಪಾಲ್ ಗೌಡ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಭಾರತೀಯ ಬುದ್ಧಿಜೀವಿಗಳ ಸಮ್ಮೇಳನವು ಪದಾಧಿಕಾರಿಗಳು, ಸದಸ್ಯರು ಮತ್ತು ಪೋಷಕರಾಗಿ ಸ್ಥಾನಗಳನ್ನು ಹೊಂದಿರುವ ಹಿರಿಯ ನ್ಯಾಯಾಧೀಶರು ಮತ್ತು ಅಧಿಕಾರಿಗಳನ್ನು ಒಳಗೊಂಡಿದೆ.ಸಂಸ್ಥೆಯು ಈ ಹಿಂದೆ ಹಿರಿಯ ನ್ಯಾಯಾಧೀಶರು, ಕಲಾವಿದರು, ವ್ಯಾಪಾರ ಉದ್ಯಮಿಗಳು, ವಿಜ್ಞಾನಿಗಳು ಮತ್ತು ಇತರೆ ಬುದ್ಧಿಜೀವಿಗಳು ಸೇರಿದಂತೆ ಪ್ರತಿಷ್ಠಿತ ವ್ಯಕ್ತಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಿದೆ.
ಭೋಪಾಲ್-ದೆಹಲಿ ವಂದೇ ಭಾರತ್ ರೈಲಿನಲ್ಲಿ ಅಗ್ನಿ ಅವಘಡ :
ಭೋಪಾಲ್: ಭೋಪಾಲ್-ದೆಹಲಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನಲ್ಲಿ( Vande Bharat Express) ಅಗ್ನಿ(Fire) ಅವಘಡ ಸಂಭವಿಸಿದೆ. ಇಂದು (ಜುಲೈ 17) ಬೆಳಗ್ಗೆ ಮಧ್ಯಪ್ರದೇಶದ ಬಿನಾ ಜಿಲ್ಲೆಯ ಕುರ್ವೈ ಕೆಥೋರಾ ಬಳಿ ರೈಲು ಸಂಚರಿಸುತ್ತಿದ್ದಾಗ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ರೈಲಿನ ಕೆಳಭಾಗದಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಅದೃಷ್ಟವಶಾತ್ ಯಾವುದೇ ದೊಡ್ಡ ಅನಾಹುತ ಸಂಭವಿಸಿಲ್ಲ. 20171 ವಂದೇ ಭಾರತ್ ರೈಲಿನಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ.
ದಿಢೀರ್ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆಯೇ ರೈಲ್ವೆ ಪೊಲೀಸ್ ಸಿಬ್ಬಂದಿಯೊಬ್ಬರು ಮಣ್ಣಿನಿಂದ ನಂದಿಸಿದ್ದಾರೆ. ಅಷ್ಟರಲ್ಲಾಗಲೇ ಬೋಗಿಯ ಕೆಳಭಾಗದಲ್ಲಿ ಕೊಂಚ ಸುಟ್ಟು ಹೋಗಿದ್ದು, ಇನ್ನು ಈ ಅಗ್ನಿ ಅವಘಡಕ್ಕೆ ಕಾರಣವೇನು ಎನ್ನುವುದು ತಿಳಿದುಬಂದಿಲ್ಲ. ಈ ಬಗ್ಗೆ ರೈಲ್ವೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
Fire broke out in Vande Bharat Express at Kuwai Kethora station near Bhopal, video courtesy railway sources #VandeBharatExpress #Railways pic.twitter.com/gyh4JxWuCJ
— Vijay Kumar S (@vijaythehindu) July 17, 2023