ಅಳಿಯ ಮತ್ತು ಅತ್ತೆ ನಡುವೆ ಗಲಾಟೆ - ಚಾಕು ಇರಿದು ಅಳಿಯ ಎಸ್ಕೇಪ್!
Twitter
Facebook
LinkedIn
WhatsApp
ತವರು ಮನೆಗೆ ಹೋದ ಪತ್ನಿಯನ್ನ ಕರೆದುಕೊಂಡ ಬರಲು ಹೋದ ಅಳಿಯನೇ ಅತ್ತೆಗೆ ಚಾಕು ಇರಿದ ಘಟನೆ ಬೆಂಗಳೂರಿನ ಬೆಳ್ಳಂದೂರು ಬಳಿಯ ಇಬ್ಬಲೂರಿನಲ್ಲಿ ನಡೆದಿದೆ. ಗೀತಾ ಚಾಕು ಇರಿತಕ್ಕೊಳಾಗದ ಅತ್ತೆ.
ಬೆಂಗಳೂರು: ಅಳಿಯನೇ ಅತ್ತೆಗೆ ಚಾಕು ಇರಿದ ಘಟನೆ ಬೆಂಗಳೂರಿ(Bengaluru)ನ ಬೆಳ್ಳಂದೂರು ಬಳಿಯ ಇಬ್ಬಲೂರಿನಲ್ಲಿ ನಡೆದಿದೆ. ಗೀತಾ ಚಾಕು ಇರಿತಕ್ಕೊಳಾಗದ ಅತ್ತೆ. ಆರೋಪಿ ಅಳಿಯ ಮನೋಜ್ ತನ್ನ ಪತ್ನಿ ವರ್ಷಿತಾಗೆ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ ಮನನೊಂದು ತವರು ಮನೆಗೆ ಹೋಗಿದ್ದಳು. ಈ ಹಿನ್ನೆಲೆಯಲ್ಲಿ ಪತ್ನಿಯನ್ನು ಕರೆತರಲು ಹೋಗಿದ್ದ ಅಳಿಯ ಮನೋಜ್ ಹೋಗಿದ್ದಾನೆ.
ಈ ಸಂದರ್ಭದಲ್ಲಿ ಅತ್ತೆ ಮತ್ತು ಅಳಿಯನ ನಡುವೆ ಗಲಾಟೆ ನಡೆದಿತ್ತು. ಮಾತಿಗೆ ಮಾತು ಬೆಳೆದು ಅಳಿಯ ಮನೋಜ್ ಅತ್ತೆ ಗೀತಾಗೆ ಚಾಕು ಇರಿದು ಎಸ್ಕೇಪ್ ಆಗಿದ್ದ. ಪ್ರಕರಣ ದಾಖಲಿಸಿಕೊಂಡ ಬೆಳ್ಳಂದೂರು ಪೊಲೀಸರು ಇದೀಗ ಆರೋಪಿಯನ್ನ ಬಂಧಿಸಿದ್ದಾರೆ.