ಸೀಕ್ರೆಟ್ ಡೇಟಿಂಗ್ ವದಂತಿ ಗಳ ನಡುವೆ ಮತ್ತೆ ಒಟ್ಟೊಟ್ಟಾಗಿ ಕಾಣಿಸಿಕೊಂಡ ಶುಭ್ಮನ್ ಗಿಲ್ ಮತ್ತು ಸಾರಾ ತೆಂಡೂಲ್ಕರ್!
ಟೀಮ್ ಇಂಡಿಯಾ ಯುವ ಆರಂಭಿಕ ಆಟಗಾರ ಶುಭ್ಮನ್ ಗಿಲ್ (Shubman Gill) ಮತ್ತು ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ (Sara Tendulkar) ಇಬ್ಬರು ರಹಸ್ಯವಾಗಿ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿ ಈಗಾಗಲೇ ಹಲವು ಬಾರಿ ವರದಿಯಾಗಿದೆ. ಆದರೆ ಒಟ್ಟೊಟ್ಟಿಗೆ ಎಂದೂ ಕಾಣಿಸಿಕೊಂಡಿಲ್ಲ. ಹಲವು ವದಂತಿಗಳ ನಡುವೆ ಗಿಲ್-ಸಾರಾ ಒಟ್ಟಿಗೆ ಕಾಣಿಸಿಕೊಂಡು ತಮ್ಮ ಸೀಕ್ರೆಟ್ ಡೇಟಿಂಗ್ ಸುದ್ದಿ ನಿಜ ಎನ್ನುವಂತೆ ಮಾಡಿದೆ.
ಮುಂಬೈನಲ್ಲಿ ನಡೆದ ಮುಕೇಶ್ ಅಂಬಾನಿ (Mukesh Ambani) ಒಡೆತನದ ಜಿಯೋ ವರ್ಲ್ಡ್ ಪ್ಲಾಜಾ (Jio world Plaza) ಉದ್ಘಾಟನಾ ಕಾರ್ಯಕ್ರಮದಲ್ಲಿ ಈ ಜೋಡಿ ಭಾಗವಹಿಸಿತ್ತು. ಬಾಲಿವುಡ್ ನಟರು ಸೇರಿದಂತೆ ಉದ್ಯಮಿಗಳು, ಸೆಲೆಬ್ರೆಟಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅದರಂತೆ ಸಾರಾ ಮತ್ತು ಶುಭ್ಮನ್ ಸಹ ಭಾಗವಹಿಸಿದ್ದರು. ಈ ವಿಡಿಯೋ ಸಖತ್ ವೈರಲ್ ಆಗಿದೆ.
ತಲೆಮರೆಸಿಕೊಳ್ಳಲು ಯತ್ನಿಸಿದ ಗಿಲ್
ಸಾರಾ ಮತ್ತು ಗಿಲ್ ಒಟ್ಟಿಗೆ ನಡೆದುಕೊಂಡು ಬರುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಆದರೆ ಕ್ಯಾಮೆರಾಗಳನ್ನು ಕಂಡ ಗಿಲ್ ಕದ್ದುಮುಚ್ಚಿ ಓಡಾಡುತ್ತಿದ್ದರು. ತನಗೇನು ತಿಳಿಯದಂತೆ ತಪ್ಪಿಸಿಕೊಳ್ಳಲು ಗಿಲ್ ಯತ್ನಿಸುತ್ತಿರುವುದು ವಿಡಿಯೋದಲ್ಲಿದೆ. ಹೇಗಾದರೂ ತಪ್ಪಿಸಿಕೊಳ್ಳಬೇಕೆಂಬ ಕಾರಣಕ್ಕೆ ಅತ್ತಿಂದತ್ತ ಓಡಾಡಿದ್ದಾರೆ. ಮೊಬೈಲ್ ಫೋನ್ ಹಿಡಿದು ನೋಡುತ್ತಿದ್ದವರಂತೆ ಮಾಡಿದ್ದಾರೆ.
A viral video that has fuelled Shubman Gill, Sara Tendulkar dating reports pic.twitter.com/lqbHZ9jqOb
— Kumar Sourav (@AdamDhoni1) November 1, 2023
ಅಧಿಕೃತವಾಗುವುದೊಂದೇ ಬಾಕಿ
ಕೊನೆಗೂ ಈ ಇಬ್ಬರ ಪ್ರೇಮಾಂಕುರ ಇದೆ ಎಂಬುದನ್ನು ಈ ಘಟನೆ ಸಾಕ್ಷಿ ಸಮೇತ ನೀಡಿದೆ. ಹಲವು ವರ್ಷಗಳ ಕಾಲ ದೀರ್ಘ ಕಾಲದಿಂದ ಡೇಟಿಂಗ್ ನಡೆಸುತ್ತಾರೆ ಎಂಬ ಸುದ್ದಿ ಮಾಧ್ಯಮಗಳಿಂದ ಸುದ್ದಿ ಹರಿದಾಡುತ್ತಿದೆ. ಆದರೆ ಈ ಸೆಲೆಬ್ರೆಟಿಗಳು ಈ ಬಗ್ಗೆ ಅಧಿಕೃತಗೊಳಿಸಿಲ್ಲ. ಇದಕ್ಕೆ ಅಧಿಕೃತ ಮುದ್ರೆಯೊಂದೆ ಬೀಳುವುದೊಂದು ಬಾಕಿ ಉಳಿದಿದೆ. ಗಿಲ್ ಕಪ್ಪ ಬಣ್ಣದ ಜಾಕೆಟ್ ಧರಿಸಿದ್ದರೆ, ಸಾರಾ ಕೆಂಪು ಬಣ್ಣದ ಉಡುಪಿನಲ್ಲಿ ಮಿಂಚಿದ್ದಾರೆ.
ಬಾಂಗ್ಲಾ ಪಂದ್ಯಕ್ಕೆ ಹಾಜರಿದ್ದ ಸಾರಾ
ಅಕ್ಟೋಬರ್ 19ರಂದು ಪುಣೆಯ ಎಂಸಿಎ ಮೈದಾನದಲ್ಲಿ ನಡೆದ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯಕ್ಕೆ ಸಾರಾ ತೆಂಡೂಲ್ಕರ್ ಹಾಜರಿದ್ದರು. ಈ ಪಂದ್ಯದಲ್ಲಿ ಗಿಲ್ ಅರ್ಧಶತಕ ಸಿಡಿಸಿದರು. ಗಿಲ್ ಬೌಂಡರಿ ಸಿಡಿಸಿದಾಗೆಲ್ಲಾ ಸಾರಾ ಚಪ್ಪಾಳೆ ತಟ್ಟುವ ಮೂಲಕ ಗಿಲ್ ಅವರನ್ನು ಹುರಿದುಂಬಿಸಿದ್ದರು. ಈ ಕುರಿತ ವಿಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದವು.
All is well between Sara Tendulkar Shubman Gill.
— Kumar Sourav (@AdamDhoni1) November 1, 2023
They were spotted together at Mumbai event for JIO pic.twitter.com/TPygPVtCSq
ವಿಶ್ವಕಪ್‌ನಲ್ಲಿ ಗಿಲ್ ಫ್ಲಾಪ್
ಹಾಲಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಶುಭ್ಮನ್ ಗಿಲ್ ನಿರೀಕ್ಷೆ ಹುಸಿಗೊಳಿಸಿದ್ದಾರೆ. ಇಡೀ ವರ್ಷ ಏಕದಿನದಲ್ಲಿ ಅಬ್ಬರಿಸಿದ ಗಿಲ್, ಡೆಂಗ್ಯೂ ಕಾರಣ ಮೊದಲ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದರು. ಬಳಿಕ ಕಣಕ್ಕಿಳಿದ ನಾಲ್ಕು ಪಂದ್ಯಗಳಲ್ಲಿ 26ರ ಬ್ಯಾಟಿಂಗ್ ಸರಾಸರಿಯಲ್ಲಿ 104 ರನ್ ಮಾತ್ರ ಗಳಿಸಿದ್ದಾರೆ. ಇಂದು ಶ್ರೀಲಂಕಾ ಎದುರು ಅಬ್ಬರಿಸುವ ವಿಶ್ವಾಸದಲ್ಲಿದ್ದಾರೆ ಯುವ ಆರಂಭಿಕ ಆಟಗಾರ.
ಸಿಕ್ತು ಸ್ಪಷ್ಟನೆ ಎಂದ ಫ್ಯಾನ್ಸ್
ಸಾರಾ-ಗಿಲ್ ವದಂತಿ ಬಗ್ಗೆ ಅಭಿಮಾನಿಗಳಿಗೆ ಈವರೆಗೂ ಸ್ಪಷ್ಟನೆ ಸಿಕ್ಕಿರಲಿಲ್ಲ. ಈಗ ಒಟ್ಟಾಗಿ ಕಾಣಿಸಿಕೊಂಡ ನಂತರ ನಮಗೆ ಕ್ಲಾರಿಟಿ ಸಿಕ್ಕಿದೆ ಎಂದು ಫ್ಯಾನ್ಸ್ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಗಿಲ್ ಪ್ರೇಯಸಿ ಸಾರಾ ಎಂದು ಪೋಸ್ಟ್ ಹಾಕುತ್ತಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೆಂಡ್ ಆಗಿತ್ತು. ಗಿಲ್ ಅದ್ಭುತ ಬ್ಯಾಟಿಂಗ್ ನಡೆಸಿದಾಗಲೆಲ್ಲಾ ಸಾರಾ ಎಕ್ಸ್ನಲ್ಲಿ ಪೋಸ್ಟ್ ಮಾಡುತ್ತಾರೆ.