Shubman Gil : ಭರ್ಜರಿ ಶತಕ ಸಿಡಿಸಿದ ಶುಭ್ಮನ್ ಗಿಲ್..!
Shubman Gil: ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಶುಭ್ಮನ್ ಗಿಲ್ (Shubman Gill) ಅತ್ಯಾಕರ್ಷಕ ಶತಕ ಬಾರಿಸಿ ಮಿಂಚಿದ್ದಾರೆ. ವಿಶೇಷ ಎಂದರೆ ಇದು ಗಿಲ್ ಬ್ಯಾಟ್ನಿಂದ ಮೂರನೇ ಕ್ರಮಾಂಕದಲ್ಲಿ ಮೂಡಿಬರುತ್ತಿರುವ ಮೊದಲ ಶತಕ. ಅಂದರೆ ಈ ಹಿಂದೆ ಆರಂಭಿಕನಾಗಿ ಶುಭ್ಮನ್ ಗಿಲ್ ಶತಕ ಬಾರಿಸಿದ್ದರು. ಇದೀಗ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಶತಕ ಬಾರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿಶಾಖಪಟ್ಟಣಂನಲ್ಲಿನ ವೈಎಸ್ ರಾಜಶೇಖರ ರೆಡ್ಡಿ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಶುಭ್ಮನ್ ಗಿಲ್ (Shubman Gill) ಭರ್ಜರಿ ಸೆಂಚುರಿ ಸಿಡಿಸಿದ್ದಾರೆ. ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 34 ರನ್ ಬಾರಿಸಿ ಔಟಾಗಿದ್ದ ಗಿಲ್ ದ್ವಿತೀಯ ಇನಿಂಗ್ಸ್ನಲ್ಲಿ ಮೂರಂಕಿ ಮೊತ್ತಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಟೀಮ್ ಇಂಡಿಯಾ ಮೊತ್ತ 29 ರನ್ಗಳಿದ್ದಾಗ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶುಭ್ಮನ್ ಗಿಲ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ ಅವರ ಬ್ಯಾಟ್ನಿಂದ ಕೇವಲ 59 ಎಸೆತಗಳಲ್ಲಿ ಅರ್ಧಶತಕ ಮೂಡಿಬಂತು. ಹಾಫ್ ಸೆಂಚುರಿ ಬಳಿಕ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ಗಿಲ್ ಅವಕಾಶ ಸಿಕ್ಕಾಗೆಲ್ಲಾ ಇಂಗ್ಲೆಂಡ್ ಬೌಲರ್ಗಳ ಬೆಂಡೆತ್ತಿದರು.
ಈ ಮೂಲಕ 131 ಎಸೆತಗಳಲ್ಲಿ 2 ಭರ್ಜರಿ ಸಿಕ್ಸರ್ ಹಾಗೂ 10 ಫೋರ್ಗಳೊಂದಿಗೆ ಶತಕ ಪೂರೈಸಿದರು. ವಿಶೇಷ ಎಂದರೆ ಮಾರ್ಚ್ 2023 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ನಲ್ಲಿ ಕೊನೆಯ ಬಾರಿ ಶತಕ ಸಿಡಿಸಿದ್ದ ಗಿಲ್ ಆ ಬಳಿಕ ಸತತ ಬ್ಯಾಟಿಂಗ್ ವೈಫಲ್ಯಕ್ಕೆ ಒಳಗಾಗಿದ್ದರು. ಇದೀಗ ಶತಕದೊಂದಿಗೆ ಶುಭ್ಮನ್ ಮತ್ತೆ ಫಾರ್ಮ್ ಕಂಡುಕೊಂಡಿದ್ದಾರೆ.
ಇದು ಶುಭ್ಮನ್ ಗಿಲ್ ಅವರ ಮೂರನೇ ಟೆಸ್ಟ್ ಶತಕ. ಇದಕ್ಕೂ ಮುನ್ನ ಬಾಂಗ್ಲಾದೇಶ್ (vs 110 ರನ್ಸ್) ಮತ್ತು ಆಸ್ಟ್ರೇಲಿಯಾ (vs 128 ರನ್ಸ್) ವಿರುದ್ಧ ಭರ್ಜರಿ ಶತಕಗಳನ್ನು ಬಾರಿಸಿದ್ದಾರೆ. ಇದೀಗ ಇಂಗ್ಲೆಂಡ್ ವಿರುದ್ಧ ಶತಕ ಸಿಡಿಸಿ ಮೂರನೇ ಬಾರಿ ಮೂರಂಕಿ ರನ್ ಕಲೆಹಾಕಿದ್ದಾರೆ.
ಬಳಿಕ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು ಮತ್ತು ಅದನ್ನು ಹೇಳುವ ಮೊದಲ ವ್ಯಕ್ತಿ ನಾನು ಮಾತ್ರವೇ ಅಲ್ಲ ಎಂದು ಹೇಳಿದರು. ಬಿ.ಆರ್.ಅಂಬೇಡ್ಕರ್, ಪೆರಿಯಾರ್ ಇ.ವಿ.ರಾಮಸಾಮಿ ಕೂಡ ಇದೇ ರೀತಿ ಹೇಳಿದ್ದಾರೆ ಎಂದರು. ಸನಾತನದ ಅರ್ಥವೇನು? ಅದು ಶಾಶ್ವತ, ಅಂದರೆ, ಅದನ್ನು ಬದಲಾಯಿಸಲಾಗುವುದಿಲ್ಲ; ಯಾರೂ ಯಾವುದೇ ಪ್ರಶ್ನೆಯನ್ನು ಮುಂದಿಡಲು ಸಾಧ್ಯವಿಲ್ಲ ಮತ್ತು ಅದು ಅರ್ಥವಾಗಿದೆ. ಸನಾತನವು ಜಾತಿಯ ಆಧಾರದ ಮೇಲೆ ಜನರನ್ನು ವಿಭಜಿಸುತ್ತದೆ ಎಂದು ಉದಯನಿಧಿ ಸ್ಟಾಲಿನ್ ಹೇಳಿದ್ದರು.